Petrol-Diesel Rate: ದೇಶಾದ್ಯಂತ 100 ರೂ.ಗಡಿ ದಾಟಲಿದೆಯೇ ಪೆಟ್ರೋಲ್-ಡಿಸೇಲ್ ಬೆಲೆ? ಕಾರಣ ಇಲ್ಲಿದೆ

Petrol-Diesel News - ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಅಂದರೆ, ಬ್ರೆಂಟ್ ಕ್ರೂಡ್ ಬೆಲೆ ಏರಿಕೆ ಮುಂದುವರೆದಿದೆ. ಸೌದಿ ಅರೇಬಿಯಾದ ಇಂಧನ ದಿಗ್ಗಜ ARAMCO  ಮಾಲೀಕತ್ವದ ಫೆಸಿಲಿಟಿಗಳ ಮೇಲೆ ಮಿಸೈಲ್ ದಾಳಿಯ ಬಳಿಕ Brent crude oil ಬೆಲೆಯಲ್ಲಿ ಶೇ.2 ರಷ್ಟು ಏರಿಕೆ ಗಮನಿಸಲಾಗಿದೆ.

Written by - Nitin Tabib | Last Updated : Mar 9, 2021, 10:18 AM IST
  • ದೇಶಾದ್ಯಂತ 100ರ ಗಡಿ ದಾಟಲಿದೆಯಾ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ?
  • ಹೌದು ಎನ್ನುತ್ತಿವೆ ಜಾಗತಿಕ ಸಂಕೇತಗಳು.
  • ತೈಲೋತ್ಪಾದನೆಯನ್ನು ಹೆಚ್ಚಿಸಲು ಒಲವು ತೋರಿಲ್ಲ OPEC Plus ರಾಷ್ಟ್ರಗಳು
Petrol-Diesel Rate: ದೇಶಾದ್ಯಂತ 100 ರೂ.ಗಡಿ ದಾಟಲಿದೆಯೇ ಪೆಟ್ರೋಲ್-ಡಿಸೇಲ್ ಬೆಲೆ? ಕಾರಣ ಇಲ್ಲಿದೆ title=
Petrol-Diesel Price Today (File Photo)

ನವದೆಹಲಿ: Petrol Diesel Rate Today - ದೇಶಾದ್ಯಂತ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯ ಕಾರಣ ಜನಸಾಮಾನ್ಯರು ಕಂಗೆಟ್ಟು ಹೋಗಿದ್ದಾರೆ. ಬೀದಿಗಳಿಂದ ಹಿಡಿದು ಸಂಸತ್ತಿನವರೆಗೂ ಕೂಡ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಕುರಿತಾದ ಚರ್ಚೆಗಳೇ ನಡೆಯುತ್ತಿವೆ. ಇನ್ನೊಂದೆಡೆ ಸರ್ಕಾರದ ಮೇಲೆ ಅಬಕಾರಿ ಸುಂಕ ಕಡಿಮೆ ಮಾಡಲು ಒತ್ತಡ ಕೂಡ ಹೇರಲಾಗುತ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆಗಳು (Petrol And Diesel Price Continued To Rise) ಯಾವಾಗ ಇಳಿಕೆಯಾಗಲಿವೆ? ಎಂಬ ಪ್ರಶ್ನೆ ಜನಸಾಮಾನ್ಯರಿಗೆ ಕಾಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಅಂದರೆ, ಬ್ರೆಂಟ್ ಕ್ರೂಡ್ ಬೆಲೆ ಏರಿಕೆ ಮುಂದುವರೆದಿದೆ. ಸೌದಿ ಅರೇಬಿಯಾದ ಇಂಧನ ದಿಗ್ಗಜ ARAMCO  ಮಾಲೀಕತ್ವದ ಪ್ಲಾಂಟ್ ಗಳ ಮೇಲೆ ಮಿಸೈಲ್ ದಾಳಿಯ ಬಳಿಕ Brent crude oil ಬೆಲೆಯಲ್ಲಿ ಶೇ.2 ರಷ್ಟು ಏರಿಕೆ ಗಮನಿಸಲಾಗಿದೆ. ಇನ್ನೊಂದೆಡೆ ಬ್ಲಾಕ್ ಗೋಲ್ಡ್ ನ ಒಂದು ಬ್ಯಾರೆಲ್ ಬೆಲೆ ಶೇ.2.11ರಷ್ಟು ಏರಿಕೆಯಾಗಿ 70.82 ಡಾಲರ್ ಪ್ರತಿ ಬ್ಯಾರೆಲ್ ತಲುಪಿದೆ. ಮೇ 2019ರ ಬಳಿಕ ಇದು ಅತ್ಯಂತ ಗರಿಷ್ಟ ಮಟ್ಟವಾಗಿದೆ.

20 ತಿಂಗಳ ಅವಧಿಯಲ್ಲಿಯೇ ಗರಿಷ್ಟ ಮಟ್ಟಕ್ಕೆ ತಲುಪಿದ ಕ್ರೂಡ್ ಆಯಿಲ್ ಬೆಲೆ
ಸೋಮವಾರ ಬ್ರೆಂಟ್ ಕ್ರೂಡ್ ಆಯಿಲ್ ಬೆಲೆ 70 ಡಾಲರ್ ಪ್ರತಿ ಬ್ಯಾರೆಲ್ ಗೆ ತಲುಪಿತ್ತು. ಇದು ಕಳೆದ 20 ತಿಂಗಳ ಅತ್ಯಂತ ಗರಿಷ್ಟಮಟ್ಟವಾಗಿದೆ. ಕಳೆದ ಗುರುವಾರ ನಡೆದ OPEC ಪ್ಲಸ್ ರಾಷ್ಟ್ರಗಳ ನಡುವೆ ನಡೆದ ಸಭೆಯಲ್ಲಿ ಕ್ರೂಡ್ ಆಯಿಲ್ ಉತ್ಪಾದನೆಯನ್ನು ಹೆಚ್ಚಿಸುವ ಪ್ರಸ್ತಾವೆಯ ಮೇಲೆ ಮುದ್ರೆ ಒತ್ತಲಾಗಿಲ್ಲ. ಇದಾದ ಬಳಿಕ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆಯಲ್ಲಿ 6  ಡಾಲರ್ ಹೆಚ್ಚಳವಾಗಿದೆ. ಬಲ್ಲ ಮೂಲಗಳು ನೀಡಿರುವ ಮಾಹಿತಿಯನ್ನು ನಂಬುವುದಾದರೆ. ಇದು ಭಾರತದ ಮೇಲೂ ಕೂಡ ಪ್ರಭಾವ ಬೀರಲಿದೆ. ಆದರೆ, ಕಳೆದ 9 ದಿನಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆಯನ್ನು ಗಮನಿಸಲಾಗಿಲ್ಲ. 

ತೊಲೋತ್ಪಾದನೆಯ ಮೇಲಿನ ನಿಯಂತ್ರಣವನ್ನು ತೆಗೆದು ಹಾಕುವ ಕುರಿತು ಭಾರತ ಮಾಡಿರುವ ಮನವಿಯನ್ನು ಒಪೆಕ್ ಪ್ಲಸ್ ರಾಷ್ಟ್ರಗಳ ಸಭೆ ತಳ್ಳಿ ಹಾಕಿದ ಬಳಿಕಅಂತಾರಾಷ್ಟ್ರೀಯ  ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತನ್ನ ಎರಡು ವರ್ಷದ ಗರಿಷ್ಟ ಮಟ್ಟಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಕಚ್ಚಾ ತೈಲೋತ್ಪನ್ನ ರಾಷ್ಟ್ರಗಳು ತಮ್ಮ ತೈಲ ಉತ್ಪಾದನೆಯನ್ನು ಹೆಚ್ಚಿಸದೇ ಹೋದಲ್ಲಿ ಇಂಧನ ಬೆಳೆಗಳು ಮತ್ತಷ್ಟು ಏರಿಕೆಯಾಗಲಿವೆ. ಅಷ್ಟೇ ಯಾಕೆ ಪೆಟ್ರೋಲ್-ಡಿಸೇಲ್ (Petrol And Diesel) ಬೆಲೆ ರೂ. 100ರ ಗಡಿ ದಾಟುವ ಸಾಧ್ಯತೆಯನ್ನು ಕೂಡ ತಜ್ಞರು ವರ್ತಿಸುತ್ತಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ (Petrol Price Hike) 100ರ ಆಸುಪಾಸು ತಲುಪಿದ್ದು, ಪ್ರಸ್ತುತ ಸಮಯದಲ್ಲಿ ಎರಡು ಇಂಧನಗಳ ಬೆಲೆಯಲ್ಲಿ ಆಲ್ ಟೈಮ್ ಹೈ ಇರುವುದು ಗಮನಕ್ಕೆ ಬರುತ್ತಿದೆ.

ಜಾಗತಿಕ ಮಟ್ಟದಲ್ಲಿ ಲಾಕ್ ಡೌನ್ ಬಳಿಕ ಇಂಧನ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಆದರೆ, ಕಳೆದ ಕೆಲ ತಿಂಗಳಿನಿಂದ ಈ ರಾಷ್ಟ್ರಗಳಿಗೆ ಲಾಭ ಕೂಡ ಬಂದಿದೆ. ಅದರಲ್ಲೂ ವಿಶೇಷವಾಗಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60 ಡಾಲರ್ ತಲುಪಲು ಯಶಸ್ವಿಯಾಗಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ-ಇನ್ಮುಂದೆ Android ಫೋನೇ ನಿಮ್ಮ POS ! SBI Payments-NPCIನಿಂದ ಹೊಸ ಸೇವೆ ಆರಂಭ

ಪೆಟ್ರೋಲ್-ಡಿಸೇಲ್ ಗಳ ಇಂದಿನ ಬೆಲೆ (Petrol-Diesel Rate Today)
- ದೆಹಲಿಯಲ್ಲಿ ಪೆಟ್ರೋಲ್ 91.17 ಮತ್ತು ಡೀಸೆಲ್ ಪ್ರತಿ ಲೀಟರ್ಗೆ 81.47 ರೂ.
- ಮುಂಬೈನಲ್ಲಿ ಪೆಟ್ರೋಲ್ 97.57 ರೂ. ಮತ್ತು ಡೀಸೆಲ್ ಲೀಟರ್‌ಗೆ 88.60 ರೂ.
- ಕೋಲ್ಕತ್ತಾದ ಪೆಟ್ರೋಲ್ 91.35 ರೂ. ಮತ್ತು ಡೀಸೆಲ್ ಲೀಟರ್‌ಗೆ 84.35 ರೂ.
- ಚೆನ್ನೈನಲ್ಲಿ ಪೆಟ್ರೋಲ್ 93.11 ಮತ್ತು ಡೀಸೆಲ್ ಲೀಟರ್ಗೆ 86.45 ರೂ.
- ನೋಯ್ಡಾದಲ್ಲಿ ಪೆಟ್ರೋಲ್ 89.38 ರೂ. ಮತ್ತು ಡೀಸೆಲ್ ಲೀಟರ್‌ಗೆ 81.91 ರೂ.

ಇದನ್ನೂ ಓದಿ-Jio ಗ್ರಾಹಕರಿಗೆ ಗುಡ್ ನ್ಯೂಸ್: ರಿಲೀಸ್ ಆಯ್ತು ಹೊಸ ಡೇಟಾ ಪ್ಲಾನ್..!

- ಬೆಂಗಳೂರಿನಲ್ಲಿ ಪೆಟ್ರೋಲ್ 94.22 ರೂ ಮತ್ತು ಡೀಸೆಲ್ ಲೀಟರ್‌ಗೆ 86.37 ರೂ.
- ಭೋಪಾಲ್‌ನಲ್ಲಿ ಪೆಟ್ರೋಲ್ 99.21 ರೂ. ಮತ್ತು ಡೀಸೆಲ್ ಲೀಟರ್‌ಗೆ 89.76 ರೂ.
- ಚಂಡೀಗ Chandigarh ದಲ್ಲಿ ಪೆಟ್ರೋಲ್ 87.73 ರೂ. ಮತ್ತು ಡೀಸೆಲ್ ಲೀಟರ್‌ಗೆ 81.17 ರೂ.
- ಪಾಟ್ನಾದಲ್ಲಿ ಪೆಟ್ರೋಲ್ 93.48 ರೂ ಮತ್ತು ಡೀಸೆಲ್ ಲೀಟರ್‌ಗೆ 86.73 ರೂ.
- ಲಕ್ನೋದಲ್ಲಿ ಪೆಟ್ರೋಲ್ 89.31 ರೂ ಮತ್ತು ಡೀಸೆಲ್ ಲೀಟರ್‌ಗೆ 81.85 ರೂ.

ಇದನ್ನೂ ಓದಿ-E- Vehicle: ಈಗ ಇ-ಕಾರ್‌ಗೆ ಕಚೇರಿ, ಮಾಲ್‌ನಲ್ಲೂ ಚಾರ್ಜಿಂಗ್ ಕೇಂದ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News