/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಭಾನುವಾರದವರೆಗೆ ಸತತ 4 ದಿನಗಳವರೆಗೆ ಏರಿಕೆ ಕಂಡ ನಂತರ ಇಂದು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೆ ಬದಲಾವಣೆಯಾಗಿಲ್ಲ. ಆಯಿಲ್ ಮಾರ್ಕೆಟಿಂಗ್ ಕಂಪನಿಗಳು (OMC) ಕೊನೆಯದಾಗಿ ಅ.17 ರಂದು ಇಂಧನ ದರದಲ್ಲಿ ಪರಿಷ್ಕರಣೆ ಮಾಡಿದ್ದವು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 105.84 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ 94.57 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 111.77 ರೂ. ಇದ್ದರೆ, ಪ್ರತಿ ಲೀಟರ್ ಡೀಸಲೆ ಬೆಲೆ 102.52 ರೂ. ಇದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 109.53 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 100.37 ರೂ. ಇದೆ.

ಇದನ್ನೂ ಓದಿ: Money Earning Ideas : ನಿಮ್ಮ ಬಳಿ ಈ ಹಳೆಯ 1 ರೂ. ನೋಟು ಇದ್ದರೆ, ನೀವು 1 ಲಕ್ಷ ರೂ. ಗಳಿಸಬಹುದು! ಹೇಗೆ ಇಲ್ಲಿದೆ

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 106.43 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 97.68 ರೂ. ಇದೆ. ತಮಿಳುನಾಡಿನ ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 103.01 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 98.92 ರೂ. ಇದೆ. ಹೈದರಾಬಾದ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 110.09 ಮತ್ತು ಡೀಸೆಲ್ 103.08 ರೂ. ಇದೆ. ಪೆಟ್ರೋಲ್ ಈಗ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ 100 ರೂ. ಗಡಿ ದಾಟಿದೆ. ಡೀಸೆಲ್ ಡಜನ್‌ಗಿಂತಲೂ ಹೆಚ್ಚು ರಾಜ್ಯಗಳಲ್ಲಿ ಶತಕ ಭಾರಿಸಿದೆ. ದಿನಬಳಕೆ ವಸ್ತುಗಳ ಜೊತೆಗೆ ಇಂಧನ ದರಗಳ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.

ತೈಲ ಕಂಪನಿಗಳು ಅಳವಡಿಸಿಕೊಂಡ ಬೆಲೆ ಸೂತ್ರದ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್( BPCL ), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ( HPCL)ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಪ್ರಸ್ತುತ ದೇಶದ 4 ಮೆಟ್ರೋ ನಗರಗಳಲ್ಲಿ ಇಂಧನ ದರ ಅತ್ಯಧಿಕವಾಗಿದೆ.

ಇದನ್ನೂ ಓದಿ: ಮಾರುಕಟ್ಟೆಗೆ ಹೊಚ್ಚ ಹೊಸ ಹೀರೋ Xtreme 160R Stealth ಬೈಕ್ ಬಿಡುಗಡೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel Price)ಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಸಂಜೆ 6 ರಿಂದ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಅಬಕಾರಿ ತೆರಿಗೆ, ಡೀಲರ್ ಕಮಿಷನ್ ಮತ್ತು ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ. ವಿದೇಶಿ ವಿನಿಮಯ ದರಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.

ಈ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol Diesel Price)ಯನ್ನು ಪರಿಶೀಲಿಸಿ ನೀವು ಪೆಟ್ರೋಲ್ ಡೀಸೆಲ್ ಬೆಲೆಯನ್ನು SMS ಮೂಲಕ ತಿಳಿದುಕೊಳ್ಳಬಹುದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಸಂಜೆ 6 ಗಂಟೆಗೆ ನವೀಕರಿಸಲಾಗುತ್ತದೆ. ಇಂಡಿಯನ್ ಆಯಿಲ್ ಗ್ರಾಹಕರ ಬೆಲೆಯನ್ನು ತಿಳಿಯಲು, ನೀವು ನಿಮ್ಮ ನಗರ ಕೋಡ್ ಅನ್ನು RSP ಯೊಂದಿಗೆ ಟೈಪ್ ಮಾಡಬೇಕು ಮತ್ತು 9224992249 ಗೆ SMS ಕಳುಹಿಸಬೇಕು. ಪ್ರತಿ ನಗರ ಕೋಡ್ ವಿಭಿನ್ನವಾಗಿರುತ್ತದೆ. ಈ ವಿವರಗಳನ್ನು ಐಒಸಿಎಲ್ ವೆಬ್‌ಸೈಟ್‌ನಲ್ಲಿ ಕಾಣಬಹುದು. ಬಿಪಿಸಿಎಲ್ ಗ್ರಾಹಕರು ಆರ್‌ಎಸ್‌ಪಿ 9223112222 ಮತ್ತು ಎಚ್‌ಪಿಸಿಎಲ್ ಗ್ರಾಹಕ ಎಚ್‌ಪಿ ಬೆಲೆ 9222201122 ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ತಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಂಡುಹಿಡಿಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Section: 
English Title: 
Petrol, diesel prices today: Fuel rates remain unchanged. Check latest rates
News Source: 
Home Title: 

Petrol diesel price today: ಗ್ರಾಹಕರ ಜೇಬು ಖಾಲಿ ಮಾಡುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗಳು..!

Petrol diesel price today: ಗ್ರಾಹಕರ ಜೇಬು ಖಾಲಿ ಮಾಡುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗಳು..!
Caption: 
ದಾಖಲೆ ಮಟ್ಟ ತಲುಪಿರುವ ಪೆಟ್ರೋಲ್ ಮತ್ತು ಡೀಸೆಲ್ ದರ
Yes
Is Blog?: 
No
Tags: 
Facebook Instant Article: 
Yes
Highlights: 

ಸತತ 4 ದಿನಗಳವರೆಗೆ ಏರಿಕೆ ಕಂಡ ನಂತರ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ

ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪೆಟ್ರೋಲ್ ಬೆಲೆಯು 100 ಗಡಿ ದಾಟಿದೆ

ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ದೇಶದ ಜನತೆಗೆ ಇಂಧನ ದರ ಏರಿಕೆ ಬರೆ ಎಳೆದಂತಾಗಿದೆ

Mobile Title: 
Petrol diesel price today: ಗ್ರಾಹಕರ ಜೇಬು ಖಾಲಿ ಮಾಡುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗಳು..!
Puttaraj K Alur
Publish Later: 
No
Publish At: 
Monday, October 18, 2021 - 08:27
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
2
Is Breaking News: 
No