Petrol-Diesel Price: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ?, ಇಲ್ಲಿದೆ ಮಾಹಿತಿ

ನವೆಂಬರ್ 4 ರಂದು ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ. ಅಬಕಾರಿ ಸುಂಕವನ್ನು  ಕಡಿತಗೊಳಿಸಿತ್ತು.

Written by - Puttaraj K Alur | Last Updated : Nov 17, 2021, 08:34 AM IST
  • ರಾಜಸ್ಥಾನದಲ್ಲಿ ಪೆಟ್ರೋಲ್ ಮೇಲೆ 4 ರೂ., ಡೀಸೆಲ್ ಮೇಲೆ 5 ರೂ. ವ್ಯಾಟ್ ಕಡಿತಗೊಳಿಸಿದ ಕಾಂಗ್ರೆಸ್ ಸರ್ಕಾರ
  • ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 100.58 ರೂ. ಇದ್ದರೆ, ಡೀಸೆಲ್ ಪ್ರತಿ ಲೀಟರ್ 85.01 ರೂ. ಇದೆ
  • ದೇಶದ 4 ಮಹಾನಗರಗಳು ಮತ್ತು ಹಲವಾರು ನಗರಗಳಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 100 ರೂ. ಕ್ಕಿಂತ ಹೆಚ್ಚಿದೆ
Petrol-Diesel Price: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ?, ಇಲ್ಲಿದೆ ಮಾಹಿತಿ title=
ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಿರಿ

ನವದೆಹಲಿ: ಸತತ 13ನೇ ದಿನವಾದ ಬುಧವಾರವೂ ಇಂಧನ ಬೆಲೆ(Petrol Diesel Price Today)ಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನವೆಂಬರ್ 4 ರಂದು ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ. ಅಬಕಾರಿ ಸುಂಕವನ್ನು  ಕಡಿತಗೊಳಿಸಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಅನೇಕ ರಾಜ್ಯ ಸರ್ಕಾರಗಳು ಕೂಡ ತೈಲದರದ ಮೇಲಿನ ವ್ಯಾಟ್ ಕಡಿತಗೊಳಿಸಿತ್ತು. ಹೀಗಾಗಿ ದಾಖಲೆಯ ಗರಿಷ್ಠ ಮಟ್ಟದಿಂದ ಇಂಧನ ದರಗಳನ್ನು ಕೊಂಚ ಕಡಿಮೆಯಾಗಿ ಜನಸಾಮಾನ್ಯರಿಗೆ ನೆಮ್ಮದಿ ದೊರಕಿತ್ತು.

ಕರ್ನಾಟಕದಲ್ಲಿ  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪೆಟ್ರೋಲ್ ಹಾಗೂ ಡೀಸಲ್ ದರದಲ್ಲಿ 7 ರೂ. ಇಳಿಕೆ ಮಾಡಿ ಅಧಿಸೂಚನೆ ಹೊರಡಿಸಿದ್ದರು. ಕಾಂಗ್ರೆಸ್‌ (Congress) ಆಡಳಿತವಿರುವ ರಾಜಸ್ಥಾನದಲ್ಲಿ (Rajasthan) ವ್ಯಾಟ್‌ (Vat) ಕಡಿತಗೊಳಿಸಿದ ಹಿನ್ನೆಲೆ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಕ್ರಮವಾಗಿ 4 ರೂ. ಹಾಗೂ 5 ರೂ. ಇಳಿಕೆಯಾಗಿದೆ. ಮಂಗಳವಾರ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಇಂಧನ ದರದ ಮೇಲಿನ ವ್ಯಾಟ್‌ ಕಡಿತಗೊಳಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ. ಇಂದು(ನ.16) ಮಧ್ಯರಾತ್ರಿಯಿಂದ ಹೊಸ ದರ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಹೇಳಿದ್ದರು.  

ಇದನ್ನೂ ಓದಿ: IRCTC ನೀಡುತ್ತಿದೆ Rann Utsav ನೋಡುವ ಅವಕಾಶ, ಊಟ, ವಸತಿ ಎಲ್ಲವೂ ಉಚಿತ..!

ಇಂಡಿಯನ್ ಆಯಿಲ್ ಕಾರ್ಪೊರೇಷನ್(IOCL) ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್(Petrol Price) 103.97 ರೂ.ಗೆ ಮಾರಾಟವಾಗುತ್ತಿದೆ, ಡೀಸೆಲ್ ದರ 86.67 ರೂ.ನಷ್ಟಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 109.98 ರೂ.ನಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 94.14 ರೂ.ನಂತೆ ಮಾರಾಟವಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 100.58 ರೂ. ಇದ್ದರೆ, ಡೀಸೆಲ್ ಪ್ರತಿ ಲೀಟರ್ 85.01 ರೂ. ಇದೆ.

ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.40 ರೂ. ಇದ್ದರೆ, ಡೀಸೆಲ್(Diesel Price) 91.43 ರೂ. ಇದೆ. ಅದರಂತೆ ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 104.67 ರೂ. ಇದ್ದರೆ, ಡೀಸೆಲ್ 89.79 ರೂ. ಇದೆ. ಬೆಲೆ ಇಳಿಕೆಯ ಹೊರತಾಗಿಯೂ ದೇಶದ 4 ಮಹಾನಗರಗಳು ಮತ್ತು ಹಲವಾರು ನಗರಗಳಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 100 ರೂ. ಕ್ಕಿಂತ ಹೆಚ್ಚಿದೆ. ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಇಂಧನ ದರ ಅತಿ ಹೆಚ್ಚಿದೆ. ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್‌ನಿಂದಾಗಿ ರಾಜ್ಯಗಳಾದ್ಯಂತ ದರಗಳು ಬದಲಾಗುತ್ತವೆ.

ಇದನ್ನೂ ಓದಿ: Movie Tickets Offers: ಅಗ್ಗದ ದರದಲ್ಲಿ ಸಿನಿಮಾ ನೋಡುವ ಅವಕಾಶ! ಈ ಬ್ಯಾಂಕ್ ನೀಡುತ್ತಿದೆ 50% ರಿಯಾಯಿತಿ

ವ್ಯಾಟ್ ಕಡಿಮೆ ಮಾಡಿದ ರಾಜ್ಯಗಳು

ಕೇಂದ್ರ ಸರ್ಕಾರ(Central Government)ವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ, ಅನೇಕ ರಾಜ್ಯಗಳು ವ್ಯಾಟ್ ಅನ್ನು ಕಡಿಮೆ ಮಾಡಿವೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕರ್ನಾಟಕ, ಪುದುಚೇರಿ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ತ್ರಿಪುರಾ, ಅಸ್ಸಾಂ, ಸಿಕ್ಕಿಂ, ಬಿಹಾರ, ಮಧ್ಯಪ್ರದೇಶ, ಗೋವಾ, ಗುಜರಾತ್, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಲಡಾಖ್. ಆದರೆ, ಬಿಜೆಪಿಯೇತರ ರಾಜ್ಯಗಳಾದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ದೆಹಲಿ ಇನ್ನೂ ವ್ಯಾಟ್ ಕಡಿತಗೊಳಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News