Petrol Diesel Price may 9th : ದಾಖಲೆ ಮಟ್ಟದಲ್ಲಿ ಏರಿಕೆಯಾದ ಕಚ್ಚಾ ತೈಲ ಬೆಲೆ, ಮತ್ತೆ ಹೆಚ್ಚುತ್ತದೆಯೇ ಪೆಟ್ರೋಲ್-ಡೀಸೆಲ್ ದರ ?

Petrol Diesel Price may 9th : ಇಂದು ಅಂದರೆ ಮೇ 9, 2022 ರಂದು, ಸತತ 33 ನೇ ದಿನ, ಪೆಟ್ರೋಲ್-ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಕಳೆದ ಬಾರಿ ಏಪ್ರಿಲ್ 6 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 80 ಪೈಸೆ ಏರಿಕೆಯಾಗಿತ್ತು. ನಿಮ್ಮ ನಗರದಲ್ಲಿ ಇಂದಿನ ಬೆಲೆ ಎಷ್ಟು ಎಂದು ತಿಳಿಯಿರಿ.

Written by - Ranjitha R K | Last Updated : May 9, 2022, 08:06 AM IST
  • ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ ಕಚ್ಚಾ ತೈಲ ಬೆಲೆ
  • ಮತ್ತೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಸಾಧ್ಯತೆ
  • ನಿಮ್ಮ ನಗರದ ಇಂದಿನ ಬೆಲೆ ತಿಳಿಯಿರಿ
Petrol Diesel Price may 9th : ದಾಖಲೆ ಮಟ್ಟದಲ್ಲಿ ಏರಿಕೆಯಾದ ಕಚ್ಚಾ ತೈಲ ಬೆಲೆ,   ಮತ್ತೆ ಹೆಚ್ಚುತ್ತದೆಯೇ ಪೆಟ್ರೋಲ್-ಡೀಸೆಲ್ ದರ ? title=
Petrol Diesel Price may 9th (file photo)

Petrol Diesel Price may 9th : ದೇಶೀಯ ಮಾರುಕಟ್ಟೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಸತತ 33 ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗುತ್ತಿದ್ದರೂ   ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಏಪ್ರಿಲ್ 6 ರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಹೆಚ್ಚಳವಾಗಿಲ್ಲ. 

ಐದು ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಬೆಲೆ ಏರಿಕೆ : 
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊನೆಯ ಬದಲಾವಣೆಯಾಗಿದ್ದು ಏಪ್ರಿಲ್ 6  2022 ರಂದು . ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳವಾಗಿದ್ದರೂ, ಭಾರತದಲ್ಲಿ ಬೆಲೆಗಳನ್ನು ಸ್ಥಿರವಾಗಿ ಇರಿಸಲಾಗಿದೆ. ಐದು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶಗಳನ್ನು ಘೋಷಿಸುವ ಮೊದಲು ತೈಲ ಬೆಲೆಗಳನ್ನು ಹಲವಾರು ತಿಂಗಳುಗಳವರೆಗೆ ಸ್ಥಿರವಾಗಿ ಇರಿಸಲಾಗಿತ್ತು. ಆದರೆ ಮಾರ್ಚ್ 22 ರಿಂದ ಏಪ್ರಿಲ್ 6 ರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 10 ರೂ.ಯಷ್ಟು ಏರಿಕೆ ಮಾಡಲಾಗಿತ್ತು.  

ಇದನ್ನೂ ಓದಿ : Car Price Rise: TATAದ ಈ ಅಗ್ಗದ 2 ಕಾರುಗಳು ಮತ್ತಷ್ಟು ದುಬಾರಿ..!

 ಪ್ರಮುಖ ನಗರದಲ್ಲಿ ತೈಲ ಬೆಲೆ : 
- ದೆಹಲಿ ಪೆಟ್ರೋಲ್ 105.41 ರೂ  ಮತ್ತು ಡೀಸೆಲ್  96.67 ರೂ ಪ್ರತಿ ಲೀಟರ್
- ಮುಂಬೈ ಪೆಟ್ರೋಲ್ 120.51 ರೂ ಮತ್ತು ಡೀಸೆಲ್  104.77 ರೂ
ಬೆಂಗಳೂರು   ಪೆಟ್ರೋಲ್ 111.09  ರೂ ಮತ್ತು ಡೀಸೆಲ್  94.79   ರೂ
-ಚೆನ್ನೈ  ಪೆಟ್ರೋಲ್  110.85 ರೂ ಮತ್ತು ಡೀಸೆಲ್ 100. 94 ರೂ 
- ಕೋಲ್ಕತ್ತಾ ಪೆಟ್ರೋಲ್  115.12 ರೂ. ಡೀಸೆಲ್ ಲೀಟರ್‌ಗೆ 99.83 ರೂ
- ಲಕ್ನೋದಲ್ಲಿ ಪೆಟ್ರೋಲ್  105.25 ರೂ ಮತ್ತು ಡೀಸೆಲ್ ಲೀಟರ್‌ಗೆ  96.83 ರೂ
- ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ 91.45 ರೂ  ಮತ್ತು ಡೀಸೆಲ್ ಲೀಟರ್‌ಗೆ  85.83 ರೂ
- ಪಾಟ್ನಾದಲ್ಲಿ ಪೆಟ್ರೋಲ್  116.23 ರೂ ಮತ್ತು ಡೀಸೆಲ್ ಲೀಟರ್‌ಗೆ 101 ರೂ.

ದಾಖಲೆಯ  ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ : 
ಮಾರ್ಚ್ ತಿಂಗಳಿನಲ್ಲಿ ಕಚ್ಚಾ ತೈಲ 114 ದಾಟಿತ್ತು. ನಂತರ ಸ್ವಲ್ಪ ಇಳಿಕೆ ಕಂಡುಬಂದಿತ್ತಾದರೂ ಮತ್ತೆ ಕಚ್ಚಾ ತೈಲ ದರದಲ್ಲಿ ಭಾರೀ ಏರಿಕೆ ಕಂಡು ಬರುತ್ತಿದೆ. ರಷ್ಯಾ -ಉಕ್ರೇನ್ ಯುದ್ಧದ ನಂತರ, ಕಚ್ಚಾ ತೈಲದ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ  : ದೇಶದ ಕೆಲವೆಡೆ ಇಂಧನ ಬೆಲೆ ಏರಿಕೆ: ಇಲ್ಲಿದೆ ನೋಡಿ ನಿಮ್ಮೂರಿನ ಪೆಟ್ರೋಲ್‌-ಡೀಸೆಲ್‌ ದರಪಟ್ಟಿ

SMS ಮೂಲಕ ಕೂಡಾ ದರ  ಪರಿಶೀಲಿಸಬಹುದು :
ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಹ ತಿಳಿಯಬಹುದು ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೆ ವೇಳೆ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News