Petrol-Diesel Price Hike: ದೇಶಾದ್ಯಂತ ಇಂದು ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ

Petrol-Diesel Price Hike: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಪ್ರಕ್ರಿಯೆ ಮುಂದುವರೆದಿದೆ. ಕಳೆದ 12 ದಿನಗಳಲ್ಲಿ 10 ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.

Written by - Yashaswini V | Last Updated : Apr 2, 2022, 07:54 AM IST
  • ಪೆಟ್ರೋಲ್-ಡೀಸೆಲ್ 80 ಪೈಸೆ ಏರಿಕೆ
  • ಬೆಲೆ ಏರಿಕೆಯ ನಂತರ, ದೆಹಲಿಯಲ್ಲಿ ಶನಿವಾರ ಪೆಟ್ರೋಲ್ 102.61 ರೂ ಮತ್ತು ಡೀಸೆಲ್ ಲೀಟರ್‌ಗೆ 93.87 ರೂ. ತಲುಪಿದೆ.
  • ಮಾರ್ಚ್ 22 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 7.20 ರೂಪಾಯಿ ಏರಿಕೆಯಾಗಿದೆ.
Petrol-Diesel Price Hike: ದೇಶಾದ್ಯಂತ ಇಂದು ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ title=
Petrol-Diesel Price Hike again: Know 2nd april 2022 petrol-diesel rate

Petrol-Diesel Price Hike: ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿದಂತೆ ಪಂಚರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ (Petrol-Diesel Price Hike)  ಪ್ರಕ್ರಿಯೆ ಮುಂದುವರೆದಿದೆ. ಕಳೆದ 12 ದಿನಗಳಲ್ಲಿ 10 ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಶನಿವಾರ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೊಮ್ಮೆ ಏರಿಕೆ ಕಂಡಿದೆ. 

ಈ ಬಾರಿಯೂ ಪೆಟ್ರೋಲ್-ಡೀಸೆಲ್ (Petrol-Diesel Price Hike) 80 ಪೈಸೆ ಏರಿಕೆಯಾಗಿದೆ. ಬೆಲೆ ಏರಿಕೆಯ ನಂತರ, ದೆಹಲಿಯಲ್ಲಿ ಶನಿವಾರ ಪೆಟ್ರೋಲ್ 102.61 ರೂ ಮತ್ತು ಡೀಸೆಲ್ ಲೀಟರ್‌ಗೆ 93.87 ರೂ.  ತಲುಪಿದೆ. ಗಮನಾರ್ಹವಾಗಿ, ಮಾರ್ಚ್ 22 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 7.20 ರೂಪಾಯಿ ಏರಿಕೆಯಾಗಿದೆ.

ಇದನ್ನೂ ಓದಿ- PNG: ಈಗ ಅಡುಗೆ ಕೋಣೆ ತಲುಪುವ ಪಿಎನ್‌ಜಿ ಕೂಡ ದುಬಾರಿ; ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ

ಹಣದುಬ್ಬರದ ಡಬಲ್ ಎಫೆಕ್ಟ್! CNG-PNG ಕೂಡ ತುಂಬಾ ದುಬಾರಿ:
ಶುಕ್ರವಾರದಂದು, ಐಜಿಎಲ್ ದೆಹಲಿಯಲ್ಲಿ ಸಿಎನ್‌ಜಿ ಬೆಲೆಯನ್ನು (CNG Price) ಕೆಜಿಗೆ 80 ಪೈಸೆ ಹೆಚ್ಚಿಸಿದೆ. ಅದೇ ಸಮಯದಲ್ಲಿ, ದೆಹಲಿ-ಎನ್‌ಸಿಆರ್‌ನಲ್ಲಿ PNG ಬೆಲೆಗಳನ್ನು  ಪ್ರತಿ ಎಸ್‌ಸಿಎಂಗೆ 5.85 ರೂ.ಗಳಷ್ಟು  ಹೆಚ್ಚಿಸಲಾಗಿದೆ. ಬೆಲೆ ಹೆಚ್ಚಳದ ನಂತರ, ದೆಹಲಿ-ಎನ್‌ಸಿಆರ್‌ನಲ್ಲಿ PNG ರೂ 41.71 / SCM ಆಗಿದೆ. ಅದೇ ಸಮಯದಲ್ಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 60.01 ರಿಂದ 60.81 ಕ್ಕೆ ಹೆಚ್ಚಿಸಲಾಗಿದೆ .

ಇದನ್ನೂ ಓದಿ- Changes From 1 April 2022: ಒಮ್ಮೆಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 250 ರೂ. ಹೆಚ್ಚಳ!

ಜೂನ್ 2017 ರಿಂದ, ಕಳೆದ 15 ದಿನಗಳ ಅಂತರರಾಷ್ಟ್ರೀಯ ದರಕ್ಕೆ ಅನುಗುಣವಾಗಿ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೊಂದಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನವೆಂಬರ್ 4, 2021 ರಿಂದ ಜಾರಿಗೆ ಬರುವಂತೆ  ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 5 ರೂ. ಮತ್ತು ಡೀಸೆಲ್‌ಗೆ ಲೀಟರ್‌ಗೆ 10 ರೂ. ಕಡಿತಗೊಳಿಸಿದ ನಂತರ, ಇಂಧನ ದರಗಳನ್ನು ಹೆಚ್ಚಿಸಲಾಗಿಲ್ಲ. ಆದರೆ, ಇದಾದ ಬಳಿಕ ಮಾರ್ಚ್ 22ರಿಂದ ಇಲ್ಲಿಯವರೆಗೆ ಪ್ರತಿ ಲೀಟರ್ ಗೆ 7.20 ರೂ. ಏರಿಕೆಯಾಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ ಲೀಟರ್‌ಗೆ 110.04 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 98.42 ರೂ. ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News