Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ!

ರಾಜ್ಯದಲ್ಲಿ ಕೂಡ 100 ಗಡಿ ದಾಟಿದ ಪೆಟ್ರೋಲ್ ಬೆಲೆ

Last Updated : Jun 7, 2021, 10:28 AM IST
  • ಇಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ
  • ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 28 ​​ಪೈಸೆ ಏರಿಕೆಯಾಗಿ 95.31 ರೂ.
  • ರಾಜ್ಯದಲ್ಲಿ ಕೂಡ 100 ಗಡಿ ದಾಟಿದ ಪೆಟ್ರೋಲ್ ಬೆಲೆ
Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ! title=

ನವದೆಹಲಿ : ಇಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ದಾಖಲೆಯ ಮಟ್ಟವನ್ನು ತಲುಪಿದೆ. ನವದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 28 ​​ಪೈಸೆ ಏರಿಕೆಯಾಗಿ 95.31 ರೂ.ಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 27 ಪೈಸೆ ಹೆಚ್ಚಳದಿಂದ 86.22 ರೂ.ಗೆ ಏರಿಕೆ ಆಗಿದೆ.

ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್(Indian Oil Corporation), ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನ ಬೆಳಿಗ್ಗೆ 6 ರಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸಿ, ವಿತರಿಸುತ್ತವೆ.

ಇದನ್ನೂ ಓದಿ : Income Tax New Portal ಇಂದಿನಿಂದ ಆರಂಭ, ತೆರಿಗೆದಾರರಿಗೆ ಲಭ್ಯವಾಗಲಿದೆ 7 ಹೊಸ ವೈಶಿಷ್ಟ್ಯ

ರಾಜ್ಯದಲ್ಲಿ ಕೂಡ ಪೆಟ್ರೋಲ್ ಬೆಲೆ(Petrol Price) 100 ಗಡಿ ದಾಟಿದೆ. ಬಳ್ಳಾರಿ, ಶಿರಸಿಯಲ್ಲಿ 100 ರೂ.ಗೆ ಏರಿಕೆ ಆಗಿದೆ. 

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ :

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 98.49 ರೂ., ಡೀಸೆಲ್ ಬೆಲೆ(Diesel Price) 91.41 ರೂ.

ಇದನ್ನೂ ಓದಿ : E-Commerce: Amazonನಿಂದ ಕನ್ನಡಿಗರನ್ನು ಅವಮಾನಿಸುವ ಸರಕು, ಕಾನೂನು ಕ್ರಮ ಎಂದ ಸರ್ಕಾರ

ದೆಹಲಿ(Delhi)ಯಲ್ಲಿ  ಪೆಟ್ರೋಲ್ ಬೆಲೆ 95.31 ರೂ., ಡೀಸೆಲ್ ಬೆಲೆ 86.22 ರೂ.

ಕೋಲ್ಕತ್ತಾದಲ್ಲಿ  ಪೆಟ್ರೋಲ್ ಬೆಲೆ(Petrol Price) 95.28 ರೂ.,  ಡೀಸೆಲ್ ಬೆಲೆ 89.07 ರೂ.

ಇದನ್ನೂ ಓದಿ : Voter ID Card Apply Online : ಆನ್ ಲೈನ್ ನಲ್ಲಿ Voter ID ಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

ಮುಂಬೈ(Mumbai)ನಲ್ಲಿ  ಪೆಟ್ರೋಲ್ ಬೆಲೆ 101.52 ರೂ., ಡೀಸೆಲ್ ಬೆಲೆ 93.98 ರೂ.

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 96.71 ರೂ., ಡೀಸೆಲ್ ಬೆಲೆ 90.92 ರೂ.

ಇದನ್ನೂ ಓದಿ : SBI Alert! ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಈ ಎರಡು ಪ್ರಮುಖ ಸುದ್ದಿಗಳನ್ನು ಓದಲು ಮರೆಯಬೇಡಿ

ಮೇ 4 ರಿಂದ 21ನೇ ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ದೇಶದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ(Petrol-Diesel Price) ಐತಿಹಾಸಿಕ ಮಟ್ಟದಲ್ಲಿ ಏರಿಕೆ ಕಂಡಿದೆ. ಈ 21 ಭಾರೀ ಏರಿಕೆಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 4.97 ರೂ ಮತ್ತು ಡೀಸಲ್ ಲೀಟರ್‌ಗೆ 5.55 ರೂ. ಏರಿಕೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News