ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಶೇ.30ರಷ್ಟು ಕಡಿಮೆಯಾಗಲಿದೆ ಟಿಕೆಟ್ ದರ!

ಪೆಟ್ರೋಲ್ ಮತ್ತು ಡೀಸೆಲ್ ಬಸ್‌ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಬಸ್‌ಗಳ ದರವು ಶೇ.30ರಷ್ಟು ಕಡಿಮೆ ಇರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Written by - Puttaraj K Alur | Last Updated : Aug 2, 2022, 09:27 PM IST
  • ಡೀಸೆಲ್ ಚಾಲಿತ ಬಸ್‌ಗಳಿಗಿಂತ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಶೇ.30ರಷ್ಟು ಕಡಿಮೆ ಶುಲ್ಕ ವಿಧಿಸಬಹುದು
  • ದೇಶದಲ್ಲಿ ಸುಮಾರು 50 ಸಾವಿರ ಎಲೆಕ್ಟ್ರಿಕ್ ಬಸ್‍ಗಳನ್ನು ಓಡಿಸುವ ಯೋಜನೆ ಇದೆ
  • ವಾಹನಗಳಲ್ಲಿ ಪೆಟ್ರೋಲ್ & ಡೀಸೆಲ್ ಬಳಸುವ ಬದಲು ಅಗ್ಗದ ಇಂಧನ ಬಳಸುವಂತೆ ಗಡ್ಕರಿ ಸಲಹೆ
ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಶೇ.30ರಷ್ಟು ಕಡಿಮೆಯಾಗಲಿದೆ ಟಿಕೆಟ್ ದರ! title=
ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ

ನವದೆಹಲಿ: ದೇಶದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ಡೀಸೆಲ್ ಚಾಲಿತ ಬಸ್‌ಗಳಿಗಿಂತ ಎಲೆಕ್ಟ್ರಿಕ್ ಬಸ್‌ಗಳು ಪ್ರಯಾಣಿಕರ ಟಿಕೆಟ್‍ಗಳ ಮೇಲೆ ಶೇ.30ರಷ್ಟು ಕಡಿಮೆ ಶುಲ್ಕ ವಿಧಿಸಬಹುದು’ ಎಂದು ಹೇಳಿದ್ದಾರೆ. ದೇಶದಾದ್ಯಂತ ಇರುವ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‍ಗಳು ದುಬಾರಿ ಬೆಲೆಯ ಡೀಸೆಲ್‍ನಿಂದ ಓಡಿದರೆ ಯಾವತ್ತೂ ಲಾಭವಾಗುವುದಿಲ್ಲ. ಡೀಸೆಲ್ ಬಸ್‌ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಬಸ್‌ಗಳ ದರವು ಶೇ.30ರಷ್ಟು ಕಡಿಮೆ ಇರುತ್ತದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಎಷ್ಟು ನಗದು ಮತ್ತು ಚಿನ್ನವನ್ನು ಇರಿಸಬಹುದು ಗೊತ್ತೇ?

ಕೇಂದ್ರ ಸರ್ಕಾರವು ದೇಶದಲ್ಲಿ ಸುಮಾರು 50 ಸಾವಿರ ಎಲೆಕ್ಟ್ರಿಕ್ ಬಸ್‍ಗಳನ್ನು ಓಡಿಸುವ ಯೋಜನೆ ಹೊಂದಿದೆ. ದೂರದೃಷ್ಟಿಯಿಂದ ದೇಶೀಯ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ವಾಹನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಬಳಸುವ ಬದಲು ವಾಹನಗಳಲ್ಲಿ ಅಗ್ಗದ ಇಂಧನಗಳಾದ ವಿದ್ಯುತ್, ಹಸಿರು ಹೈಡ್ರೋಜನ್, ಎಥೆನಾಲ್, ಬಯೋ- CNG ಮತ್ತು ಜೈವಿಕ LNGಯ ಬಳಕೆಗೆ ಉತ್ತೇಜನ ನೀಡಬೇಕು ಎಂದು ಇದೇ ವೇಳೆ ಗಡ್ಕರಿ ಸಲಹೆ ನೀಡಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ 5 ರಸ್ತೆ ಯೋಜನೆಗಳಿಗೆ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳನ್ನು 2,300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಯೋಜನೆಗಳ ಮೂಲಕ ಕೇಂದ್ರ ಸರ್ಕಾರವು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ರಸ್ತೆ ಸಂಪರ್ಕವನ್ನು ಸುಧಾರಿಸುತ್ತದೆ. ಇದು ಹೂಡಿಕೆಯ ಅವಕಾಶಗಳು ಮತ್ತು ಉದ್ಯೋಗವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಅಕ್ಕಿ, ಗೋಧಿ, ಸಕ್ಕರೆ ನಷ್ಟ ಪರಿಹಾರಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಧರಣಿ ಸತ್ಯಾಗ್ರಹ

ಇಂದೋರ್, ಸಾಗರ್, ಗ್ವಾಲಿಯರ್, ಜಬಲ್‌ಪುರ, ಧಾರ್ ಮತ್ತು ವಿದಿಶಾ ಮುಂತಾದ ಪ್ರದೇಶಗಳಲ್ಲಿ 20 ಮೇಲ್ಸೇತುವೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವರು ಘೋಷಿಸಿದರು. ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2014ರಿಂದ 2.5 ಲಕ್ಷ ಕೋಟಿ ರೂ.ನ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಗಳ ಮೌಲ್ಯವು 2024ರ ವೇಳೆಗೆ ರೂ.4 ಲಕ್ಷ ಕೋಟಿ ರೂ.ಗೆ ಏರಲಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News