ಪ್ಯಾನ್ ಕಾರ್ಡ್ ಬಳಕೆದಾರರಿಗೆ ಪ್ರಮುಖ ಮಾಹಿತಿ; ಈ ತಪ್ಪಿಗೆ 10 ಸಾವಿರ ದಂಡ..!

PAN ಕಾರ್ಡ್‌ಗೆ ಸಂಬಂಧಿಸಿದ ಒಂದು ಚಿಕ್ಕ ತಪ್ಪಿನಿಂದಾಗಿ ನಿಮಗೆ ಭಾರೀ ದೊಡ್ಡ ನಷ್ಟ ಎದುರಾಗಬಹುದು. ಆದಾಯ ತೆರಿಗೆ ಕಾಯ್ದೆ1961ರ ಸೆಕ್ಷನ್ 272B ಅಡಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ 2 PAN ಕಾರ್ಡ್‌ಗಳನ್ನು ಹೊಂದುವುದು ದೊಡ್ಡಮೊತ್ತದ ದಂಡಕ್ಕೆ ಕಾರಣವಾಗಬಹುದು.  

Written by - Puttaraj K Alur | Last Updated : Mar 13, 2022, 07:46 AM IST
  • ಪ್ಯಾನ್ ಕಾರ್ಡ್ ಇಂದು ಪ್ರತಿಯೊಂದು ಹಣಕಾಸಿನ ಕೆಲಸಕ್ಕೂ ಕಡ್ಡಾಯ ದಾಖಲೆಯಾಗಿದೆ
  • PAN ಕಾರ್ಡ್‌ಗೆ ಸಂಬಂಧಿಸಿದ ಚಿಕ್ಕ ತಪ್ಪಿನಿಂದ ನಿಮಗೆ ದೊಡ್ಡ ನಷ್ಟ ಉಂಟಾಗಬಹುದು
  • ಯಾವುದೇ ವ್ಯಕ್ತಿ 2 ಪ್ಯಾನ್ ಕಾರ್ಡ್ ಹೊಂದುವುದು ಭಾರೀ ದಂಡಕ್ಕೆ ಕಾರಣವಾಗುತ್ತದೆ
ಪ್ಯಾನ್ ಕಾರ್ಡ್ ಬಳಕೆದಾರರಿಗೆ ಪ್ರಮುಖ ಮಾಹಿತಿ; ಈ ತಪ್ಪಿಗೆ 10 ಸಾವಿರ ದಂಡ..! title=
ಒಂದು ತಪ್ಪಿಗೆ 10 ಸಾವಿರ ದಂಡ ವಿಧಿಸಬಹುದು

ನವದೆಹಲಿ: ಇಂದು ಪ್ಯಾನ್ ಕಾರ್ಡ್(PAN Card) ದೇಶದ ಪ್ರತಿಯೊಬ್ಬರಿಗೂ ಕಡ್ಡಾಯ ದಾಖಲೆಯಾಗಿದೆ. ಇದು ಇಲ್ಲದೆ ಯಾವುದೇ ಹಣಕಾಸಿನ ವಹಿವಾಟು ನಡೆಯುವುದಿಲ್ಲ. ಪ್ರತಿ ಹಣಕಾಸಿನ ವ್ಯವಹಾರ ಮಾಡಲು ಮತ್ತು ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಲು ಇದು ಅಗತ್ಯವಾಗಿರುತ್ತದೆ. ಬ್ಯಾಂಕಿನಿಂದ ಕಚೇರಿವರೆಗೆ ಇದು ಇಲ್ಲದೆ ಯಾವುದೇ ಹಣಕಾಸಿನ ಕೆಲಸ ಸಾಧ್ಯವಿಲ್ಲ.

ಇದೀಗ ಪ್ಯಾನ್ ಕಾರ್ಡ್(Pan Card Update)ಅನ್ನು ಆಧಾರ್ ಮತ್ತು ವಿವಿಧೆಡೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೊದಲು ಲಿಂಕ್ ಮಾಡುವ ಕೊನೆಯ ದಿನಾಂಕ 30 ಸೆಪ್ಟೆಂಬರ್ 2021 ಆಗಿತ್ತು. ಇದನ್ನು 31 ಮಾರ್ಚ್ 2022ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ಒಂದು ಚಿಕ್ಕ ತಪ್ಪು ಮಾಡಿದರೂ ನಿಮಗೆ ಬರೋಬ್ಬರಿ 10 ಸಾವಿರ ರೂ. ದಂಡ(Penalty) ಬೀಳುತ್ತದೆ.

ಇದನ್ನೂ ಓದಿ: FD Rules : FD ಗೆ ಸಂಬಂಧಿಸಿದ ನಿಯಮಗಲ್ಲಿ ಭಾರಿ ಬದಲಾವಣೆ ಮಾಡಿದ RBI

2 ಕಾರ್ಡ್‌ಗಳನ್ನು ಹೊಂದುವುದು ದೊಡ್ಡ ಸಮಸ್ಯೆ

ನೀವು ಎಲ್ಲೆಲ್ಲಿ ಪ್ಯಾನ್ ಸಂಖ್ಯೆಯನ್ನು ನಮೂದಿಸುತ್ತಿದ್ದೀರೋ, ನಂತರ ಪ್ಯಾನ್ ಕಾರ್ಡ್‌(PAN Card Latest News)ನಲ್ಲಿ ನೀಡಲಾದ 10 ಅಂಕಿಗಳ ಪ್ಯಾನ್ ಸಂಖ್ಯೆಯನ್ನು ಬಹಳ ಎಚ್ಚರಿಕೆಯಿಂದ ಭರ್ತಿ ಮಾಡಬೇಕು. ಇಲ್ಲಿ ಮತ್ತು ಅಲ್ಲಿ ಯಾವುದೇ ಕಾಗುಣಿತ ತಪ್ಪು ಅಥವಾ ಸಂಖ್ಯೆಯಲ್ಲಿ ಬದಲಾವಣೆಯಾಗಬಾರದು. ಒಂದು ವೇಳೆ ಇಲ್ಲಿ ಏನಾದರೂ ನೀವು ತಪ್ಪು ಮಾಡಿದರೆ ನಿಮಗೆ ಭಾರೀ ದಂಡ ಬೀಳುತ್ತದೆ.   

ನೀವು 2 ಪ್ಯಾನ್ ಕಾರ್ಡ್‌(PAN Card)ಗಳನ್ನು ಹೊಂದಿದ್ದರೂ ಸಹ ದೊಡ್ಡಮೊತ್ತದ ದಂಡ ಪಾವತಿಸಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಸಹ ಹಾಕಬಹುದು. ಆದ್ದರಿಂದ ನೀವು ಸಹ 2 ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೆ ತಕ್ಷಣವೇ ನಿಮ್ಮ 2ನೇ ಪ್ಯಾನ್ ಕಾರ್ಡ್ ಅನ್ನು ಇಲಾಖೆಗೆ ಸರೆಂಡರ್ ಮಾಡುವುದು ಉತ್ತಮ. ಆದಾಯ ತೆರಿಗೆ ಕಾಯ್ದೆ(Income Tax Department)1961ರ ಸೆಕ್ಷನ್ 272 B ಯಲ್ಲಿಯೂ ಇದಕ್ಕೆ ಅವಕಾಶವಿದೆ.

ಇದನ್ನೂ ಓದಿ: PF ಖಾತೆದಾರರಿಗೆ ಬಿಗ್ ಶಾಕ್! ಶೇ.8.10 ಕ್ಕೆ ಬಡ್ಡಿದರ ಇಳಿಕೆ ಮಾಡಿದ EPFO 

2ನೇ ಪ್ಯಾನ್ ಕಾರ್ಡ್ ಸರೆಂಡರ್ ಮಾಡುವುದು ಹೇಗೆ?

  • ಹೆಚ್ಚುವರಿ PAN ಕಾರ್ಡ್ ಅನ್ನು ಸರೆಂಡರ್ ಮಾಡುವ ಪ್ರಕ್ರಿಯೆಯು ಸುಲಭವಾಗಿದೆ. ಇದಕ್ಕಾಗಿ ನೀವು ಭರ್ತಿ ಮಾಡಬೇಕಾದ ಸಾಮಾನ್ಯ ಫಾರ್ಮ್ ಇದೆ.
  • ಇದಕ್ಕಾಗಿ ನೀವು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಿ.
  • ಈಗ ‘ಹೊಸ ಪ್ಯಾನ್ ಕಾರ್ಡ್ ಅಥವಾ/ ಮತ್ತು ಪ್ಯಾನ್ ಡೇಟಾದಲ್ಲಿನ ಬದಲಾವಣೆಗಳು ಅಥವಾ ತಿದ್ದುಪಡಿಗಾಗಿ ವಿನಂತಿ’ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಫಾರ್ಮ್ ಅನ್ನು ಈಗ ಡೌನ್‌ಲೋಡ್ ಮಾಡಿ.
  • ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಯಾವುದೇ NSDL ಕಚೇರಿಗೆ ಹೋಗಿ ಅದನ್ನು ಸಲ್ಲಿಸಬೇಕು.
  • 2ನೇ ಪ್ಯಾನ್ ಕಾರ್ಡ್ ಅನ್ನು ಸರೆಂಡರ್ ಮಾಡುವಾಗ ಫಾರ್ಮ್ ಜೊತೆಗೆ ಅದನ್ನು ಸಲ್ಲಿಸಿ.
  • ನೀವು ಇದನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು.
  • ಒಂದೇ ವಿಳಾಸದಲ್ಲಿ ಒಂದೇ ವ್ಯಕ್ತಿಯ ಹೆಸರಿನಲ್ಲಿ ಬರುವ 2 ವಿಭಿನ್ನ ಪ್ಯಾನ್ ಕಾರ್ಡ್‌ಗಳು(Double Pan Card) ಈ ವರ್ಗಕ್ಕೆ ಸೇರುತ್ತವೆ. ನೀವು 2 ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೆ ಒಂದನ್ನು ಸರೆಂಡರ್ ಮಾಡಲೇಬೇಕು. ಇಲ್ಲಿದಿದ್ದರೆ ನಿಮಗೆ ಸಮಸ್ಯೆ ಖಂಡಿತ ಎದುರಾಗುತ್ತದೆ. ದೊಡ್ಡ ಮೊತ್ತದ ದಂಡವನ್ನು ನೀವು ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News