ಪ್ಯಾನ್ ನಂಬರ್ ಬೇರೆಯವರಿಗೆ ಶೇರ್ ಮಾಡುವ ಮುನ್ನ ಎಚ್ಚರ! ಎಚ್ಚರ! ಈ ಬಗ್ಗೆ ಅಸಡ್ಡೆ ತೋರಿದ್ರೆ ತಪ್ಪಿದ್ದಲ್ಲ ಅಪಾಯ!

PAN Card: ಹಣಕಾಸು ಸಂಬಂಧಿಸಿದ ಪ್ರತಿ ಕೆಲಸಕ್ಕೂ ಪ್ಯಾನ್ ಕಾರ್ಡ್ ಬೇಕೇ ಬೇಕು. ಆದರೆ, ಪ್ಯಾನ್ ಕಾರ್ಡ್ ಸಂಬಂಧಿಸಿದ ವಿಷಯದಲ್ಲಿ ನೀವು ಸ್ವಲ್ಪ ನಿರ್ಲಕ್ಷ್ಯ ತೋರಿದ್ರೂ ಅಪಾಯ ತಪ್ಪಿದ್ದಲ್ಲ.

Written by - Yashaswini V | Last Updated : Oct 9, 2024, 11:38 AM IST
  • ಪ್ಯಾನ್ ಕಾರ್ಡ್ ಅತ್ಯಂತ ಮುಖ್ಯವಾದ ದಾಖಲೆಯಾಗಿದೆ.
  • ಪ್ಯಾನ್ ಕಾರ್ಡ್ ಇಲ್ಲದೆ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವುದು ಕಷ್ಟ
  • ಆದರೆ, ನೀವು ಯಾರಿಗಾದರೂ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ನೀಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು...
ಪ್ಯಾನ್ ನಂಬರ್ ಬೇರೆಯವರಿಗೆ  ಶೇರ್ ಮಾಡುವ ಮುನ್ನ ಎಚ್ಚರ! ಎಚ್ಚರ! ಈ ಬಗ್ಗೆ ಅಸಡ್ಡೆ ತೋರಿದ್ರೆ ತಪ್ಪಿದ್ದಲ್ಲ ಅಪಾಯ!  title=

PAN Card: ಇತ್ತೀಚಿನ ದಿನಗಳಲ್ಲಿ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಸಾಲ, ಮ್ಯೂಚುವಲ್ ಫಂಡ್ ಮತ್ತು ಷೇರು ವ್ಯಾಪಾರದಂತಹ ಪ್ರತಿ ಆರ್ಥಿಕ ಚಟುವಟಿಕೆಗಳಿಗೂ ಪ್ಯಾನ್ ಕಾರ್ಡ್ ನಂಬರ್ ಅಗತ್ಯವಿದೆ. ಆದರೆ, ನೀವು ನಿಮ್ಮ ಪ್ಯಾನ್ ನಂಬರ್ ಅನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಇಲ್ಲದಿದ್ದರೆ, ಇದು ದುರುಪಯೋಗವಾಗಬಹುದು. 

ಪ್ಯಾನ್ ಕಾರ್ಡ್ ಸಂಬಂಧಿಸಿದ ಸಣ್ಣ ನಿರ್ಲಕ್ಷ್ಯವೂ ಭಾರೀ ನಷ್ಟಕ್ಕೆ ಕಾರಣವಾಗಬಹುದು: 
ಸಾಮಾನ್ಯವಾಗಿ ಬಹುತೇಕ ಜನರು ಪ್ಯಾನ್ ಕಾರ್ಡ್ ಅನ್ನು ನಿರ್ಲಕ್ಷಿಸುತ್ತಾರೆ. ಬೇರೆಯವರು ಕೇಳಿದೊಡನೆ ಸುಲಭವಾಗಿ ತಮ್ಮ ಪ್ಯಾನ್ ನಂಬರ್ ಶೇರ್ ಮಾಡುತ್ತಾರೆ. ಆದರೆ, ಇದು ಭವಿಷ್ಯದಲ್ಲಿ ನಿಮಗೆ ಎಂತಹ ಹಾನಿಯುಂಟುಮಾಡಬಹುದು, ಇದರಿಂದ ಆಗಬಹುದಾದ ನಷ್ಟದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ... 

ಇದನ್ನೂ ಓದಿ- UMANG ಆಪ್ ಬಳಸಿ ಪಿ‌ಎಫ್ ಹಣ ವಿತ್ ಡ್ರಾ ಮಾಡಲು ಸಿಂಪಲ್ ಹಂತ-ಹಂತದ ಪ್ರಕ್ರಿಯೆ

ವಾಸ್ತವವಾಗಿ ಹ್ಯಾಕರ್ಸ್ ಎಂದರೆ ಸೈಬರ್ ಅಪರಾಧಿಗಳು ನಿಮ್ಮ ಪ್ಯಾನ್ ಸಂಖ್ಯೆಯಿಂದ ನಕಲಿ ಸಾಲಗಳು, ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದು ಅದರ ಹೊಣೆಯನ್ನು ನಿಮ್ಮ ಮೇಲೆ ಬರುವಂತೆ ಮಾಡಬಹುದು. 

ಯಾರೊಂದಿಗಾದರೂ ನಿಮ್ಮ ಪ್ಯಾನ್ ಸಂಖ್ಯೆಯನ್ನು ಹಂಚಿಕೊಂಡಿದ್ದು, ಒಂದೊಮ್ಮೆ ಅವರು ನಿಮ್ಮ ಹೆಸರಿನಲ್ಲಿ ಯಾವುದಾದರೂ ಸಾಲ ತೆಗೆದುಕೊಂಡಿದ್ದೇ ಆದಲ್ಲಿ ಆ ಸಾಲವನ್ನು ನೀವು ಮರುಪಾವತಿ ಮಾಡಬೇಕಾಗುತ್ತದೆ. ಅದೇ ರೀತಿ, ನಿಮ್ಮ ಪ್ಯಾನ್ ಸಂಖ್ಯೆಯನ್ನು ಬಳಸಿಕೊಂಡು ಯಾರಾದರೂ ಕ್ರೆಡಿಟ್ ಕಾರ್ಡ್ ಪಡೆದರೆ ನೀವು ಈ ಕ್ರೆಡಿಟ್ ಕಾರ್ಡ್‌ಗೆ ಬಿಲ್ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ- ಕಳೆದ 29 ವರ್ಷಗಳಿಂದ ಈ ಟ್ರೈನ್‍ನಲ್ಲಿ ಸಿಗ್ತಿದೆ "ಫ್ರೀ ಊಟ": ಭಾರತೀಯ ರೈಲ್ವೇಯ ಈ ರೈಲಿನ ವಿಶೇಷತೆ ಏನ್ ಗೊತ್ತಾ..?

ನಿಮ್ಮ ಹೆಸರಿನಲ್ಲಿ ಎಷ್ಟು ಸಾಲವಿದೆ ಎಂದು ತಿಳಿಯುವುದು ಹೇಗೆ? 
ಆಗಾಗ್ಗೆ ನಿಮ್ಮ CIBIL ಅಥವಾ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವ ಮೂಲಕ ನಿಮ್ಮ ಪ್ಯಾನ್ ಸಂಖ್ಯೆಯನ್ನು ಬಳಸಿಕೊಂಡು ಎಷ್ಟು ಸಾಲ ಪಡೆಯಲಾಗಿದೆ ಮತ್ತು ಎಷ್ಟು ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ವಹಿಸಲಾಗುತಿದೆ ಎಂಬ ಮಾಹಿತಿ ತಿಳಿಯಬಹುದು. 

ಇಂತಹ ಸಂದರ್ಭದಲ್ಲಿ ತಪ್ಪದೇ ದೂರು ನೀಡಿ: 
ಒಂದೊಮ್ಮೆ ನಿಮಗೆ ಅರಿವಿಲ್ಲದೆ ಕ್ರೆಡಿಟ್ ವರದಿಯಲ್ಲಿ ನೀವು ಯಾವುದೇ ರೀತಿಯ ನಕಲಿ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರುವುದು ಪತ್ತೆಯಾದರೆ ತಡಮಾಡದೆ ಸೈಬರ್ ಕ್ರೈಂ ಗೆ ದೂರು ನೀಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News