Online Payment Cost Increased: ಪೇಟಿಎಂ & ಫೋನ್ ಪೇ ಬಳಸುವ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..!

ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳು ಬಿಲ್ ಪಾವತಿಯ ಬದಲಿಗೆ Convenience Fee ಹೆಸರಿನಲ್ಲಿ ನಿಮಗೆ ದೊಡ್ಡ ಮೊತ್ತವನ್ನು ವಿಧಿಸುತ್ತಿವೆ.

Written by - Puttaraj K Alur | Last Updated : Jul 10, 2022, 08:40 PM IST
  • Paytm, Mobikwik & PhonePe ಆನ್‌ಲೈನ್ ಪಾವತಿ ಅಪ್ಲಿಕೇಶನ್‌ ಬಳಸುವ ಗ್ರಾಹಕರಿಗೆ ಶಾಕ್
  • ಮೊಬೈಲ್ ರಿಚಾರ್ಜ್ ಮತ್ತು ಬಿಲ್ ಪಾವತಿಗಳ ಮೇಲೆ Convenience Fee ಹೆಸರಿನಲ್ಲಿ ಹೆಚ್ಚುವರಿ ಶುಲ್ಕ
  • ದುಬಾರಿ ದುನಿಯಾದಲ್ಲಿ Convenience Fee ಹೆಸರಿನಲ್ಲಿ ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ
Online Payment Cost Increased: ಪೇಟಿಎಂ & ಫೋನ್ ಪೇ ಬಳಸುವ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..! title=
Convenience Fee ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿ

ನವದೆಹಲಿ: ನೀವು ಆಗಾಗ Paytm, Mobikwik & PhonePeನಂತಹ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ರೀಚಾರ್ಜ್, ವಿದ್ಯುತ್ ಬಿಲ್ ಮುಂತಾದ ಬಿಲ್‍ಗಳನ್ನು ಪಾವತಿಸುತ್ತೀರಾ..? ಹೌದು ಎಂದಾರರೇ ನೀವು ಈ ಸುದ್ದಿಯನ್ನು ಓದಲೇಬೇಕು. ನೀವು ಬಿಲ್ ಪಾವತಿಸುವ ಸಮಯದಲ್ಲಿ ವಿಶೇಷವಾಗಿ ಗಮನಹರಿಸಬೇಕಾದ ವಿಷಯದ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ.   

ವಾಸ್ತವವಾಗಿ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳು ಬಿಲ್ ಪಾವತಿಯ ಬದಲಿಗೆ Convenience Fee ಹೆಸರಿನಲ್ಲಿ ನಿಮಗೆ ದೊಡ್ಡ ಮೊತ್ತವನ್ನು ವಿಧಿಸುತ್ತಿವೆ. ಬಹುಶಃ ನಿಮಗೆ ಇದರ ಅರಿವೂ ಇರುವುದಿಲ್ಲ. ಇದರಿಂದ ನಿಮ್ಮ ಜೇಬಿಗೆ ಮತ್ತಷ್ಟು ಹೊರೆಯಾಗುವುದಂತೂ ಖಂಡಿತ. ಹೀಗಾಗಿ ಇದರ ಬಗ್ಗೆ ನೀವು ವಿಶೇಷ ಗಮನಹರಿಸುವುದ ಉತ್ತಮ.

ಇದನ್ನೂ ಓದಿ: AC-ಕೂಲರ್ & ಫ್ರಿಡ್ಜ್ ಬಳಸಿದ್ರೂ ಬರಲ್ಲ ವಿದ್ಯುತ್ ಬಿಲ್! ಸರ್ಕಾರದ ಈ ಯೋಜನೆಯಿಂದ ದೊಡ್ಡ ಲಾಭ

ಶುಲ್ಕ ವಿಧಿಸುವ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ!

ನೀವು ಬಿಲ್ ಪಾವತಿಸುವಾಗ ಅಥವಾ ರೀಚಾರ್ಜ್ ಮಾಡುವಾಗ ಸಮಯದ ಅಭಾವದಿಂದ ಅಥವಾ ಇನ್ನಾವುದೇ ಕಾರಣದಿಂದ ನೀವು ಇದರತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಈ ಕಂಪನಿಗಳು ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳು ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿವೆ. ದೆಹಲಿಯ ಲಕ್ಷ್ಮಿನಗರದ ನಿವಾಸಿ ವಿನೀತ್ ಜೈನ್ ಎಂಬುವವರು ಪೇಟಿಎಂ ಮೂಲಕ 1000 ರೂ. ವಿದ್ಯುತ್ ಬಿಲ್ ಪಾವತಿಸಿದ್ದಾರೆ. ಆದರೆ ಅವರಿಗೆ ಪೇಟಿಎಂ Convenience Fee ಹೆಸರಿನಲ್ಲಿ 20 ರೂ. ಹೆಚ್ಚುವರಿ ಶುಲ್ಕ ವಿಧಿಸಿದೆ. ಅಂದರೆ ವಿನೀತ್ ಜೈನ್ 1000 ರೂ. ವಿದ್ಯುತ್ ಬಿಲ್‍ ಬದಲಾಗಿ 1020 ರೂ. ಪಾವತಿಸಿದ್ದಾರೆ. ಹೀಗಾಗಿ ಈಗ ಆ್ಯಪ್ ಮೂಲಕ ಬಿಲ್ ಪಾವತಿಸುವುದು ದುಬಾರಿಯಾಗಿದೆ. ನೀವು ಯಾವುದದಾರೂ ಬಿಲ್ ಪಾವತಿಸುವ ವೇಳೆ Total Amountನಡಿ ಸಣ್ಣ ಅಕ್ಷರಗಳಲ್ಲಿ Convenience Fee ಎಂದು ಮೊತ್ತವನ್ನು ನಮೂದು ಮಾಡಿರುತ್ತಾರೆ. ಆದರೆ ಬಹುತೇಕರು ಇದನ್ನು ನೋಡುವ ಗೂಜಿಗೆ ಹೋಗದೆ ರಿಚಾರ್ಜ್ ಮತ್ತು ಬಿಲ್ ಪಾವತಿ ಮಾಡುತ್ತಾರೆ.

 Convenience Fee ತೆಗೆದುಕೊಳ್ಳುವ ನಿಯಮವಿಲ್ಲ!

ವಾಸ್ತವವಾಗಿ ರಿಚಾರ್ಜ್ ಮತ್ತು ಬಿಲ್ ಪಾವತಿಗಳಿಗೆ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳು ಗ್ರಾಹಕರಿಗೆ Convenience Fee ವಿಧಿಸುವ ಯಾವುದೇ ನಿಯಮವಿಲ್ಲವಂತೆ. ಆದರೂ ಜನರು ಬಳಸುವ ಆನ್‍ಲೈನ್ ಸೇವೆಗೆ Convenience Fee ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. Paytm ಕಳೆದ ಕೆಲ ದಿನಗಳಿಂದ ಮೊಬೈಲ್ ರೀಚಾರ್ಜ್‍ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಪ್ರಾರಂಭಿಸಿತು. ಮೊಬೈಲ್ ರೀಚಾರ್ಜ್‌ ಮಾಡುವ ಗ್ರಾಹಕರಿಗೆ 1 ರಿಂದ 6 ರೂ. ಶುಲ್ಕ ವಿಧಿಸಲಾಗುತ್ತಿದೆ. ನೀವು Paytm ಪ್ಲಾಟ್‌ಫಾರ್ಮ್ ಮೂಲಕ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ನೊಂದಿಗೆ ರೀಚಾರ್ಜ್ ಮಾಡಿದಾಗಲೂ ಈ ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ MobiKwik ಮತ್ತು PhonePe ಸಹ ಇತರ ಬಿಲ್ ಪಾವತಿಗಳ ಮೇಲೆ ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ Convenience Fee ವಿಧಿಸುತ್ತಿವೆ. ಕೆಲವು ಸಂದರ್ಭಗಳಲ್ಲಿ ಇದನ್ನು ‘ಪ್ಲಾಟ್‌ಫಾರ್ಮ್ ಶುಲ್ಕ’ ಎಂದೂ ತೋರಿಸಲಾಗುತ್ತಿದೆ.

ಇದನ್ನೂ ಓದಿ: Service Charge Ban: ನಿರಂತರ ದೂರುಗಳು ಬರುತ್ತಿವೆ, ಮಾರ್ಗಸೂಚಿಗಳನ್ನು ಅನುಸರಿಸದೆ ಹೋದ್ರೆ...? ಸರ್ಕಾರದ ಎಚ್ಚರಿಕೆ

Convenience Fee ನಿಂದ ಪಾರಾಗುವುದು ಹೇಗೆ..?

Convenience Fee ಹೆಸರಿನಲ್ಲಿ ವಿಧಿಸಲಾಗುತ್ತಿರುವ ಮೊತ್ತವು ಬಿಲ್ ಪಾವತಿ ಅಥವಾ ಮೊಬೈಲ್ ರೀಚಾರ್ಜ್‍ಅನ್ನು ಮತ್ತಷ್ಟು ದುಬಾರಿಯನ್ನಾಗಿಸಿದೆ. ನೀವು ಒಂದು ವೇಳೆ Convenience Fee ಪಾವತಿಸಲು ಬಯಸಿದ್ದರೆ ಇತರ ಆಯ್ಕೆಗಳಿಂದ ಬಿಲ್ ಪಾವತಿ ಅಥವಾ ಮೊಬೈಲ್ ರೀಚಾರ್ಜ್ ಮಾಡಿಸಬಹುದು. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಚೆಕ್ ಮೂಲಕ ಹಣ ಪಾವತಿಸಬಹುದು. ಇದರ ಹೊರತಾಗಿ UPI ಮೂಲಕ ಮಾಡಿದ ಪಾವತಿಗೆ ಯಾವುದೇ Convenience Fee ವಿಧಿಸುವುದಿಲ್ಲ. ಅದೇ ರೀತಿ ನೆಟ್ ಬ್ಯಾಂಕಿಂಗ್ ಮೂಲಕ ಬಿಲ್ ಪಾವತಿ ಮಾಡುವುದು ಉತ್ತಮ ಆಯ್ಕೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News