Online Fraud ತಡೆಗಟ್ಟಲು ಶೀಘ್ರದಲ್ಲೇ ಬರಲಿದೆ RBI Digita, ಏನಿದು ಹೊಸ ತಂತ್ರಜ್ಞಾನ?

RBI On Digital Fraud: ಶೀಘ್ರದಲ್ಲೇ ಆರ್‌ಬಿಐ ಡಿಜಿಟಲ್ ಇಂಡಿಯಾ ಟ್ರಸ್ಟ್ ಏಜೆನ್ಸಿ ಘೋಷಿಸುವ ಸಾಧ್ಯತೆ ಇದೆ. ಇದರಿಂದ, ಡಿಜಿಟಲ್ ವೇರಿಫಿಕೇಶನ್ ಹೊಂದಿರುವ  ಅಪ್ಲಿಕೇಶನ್‌ಗಳು ಮಾತ್ರ ರನ್ ಮಾಡಲು ಸಾಧ್ಯವಾಗಲಿದೆ. (Technology News In Kannada) .

Written by - Nitin Tabib | Last Updated : Mar 31, 2024, 07:27 PM IST
  • ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಡಿಜಿಟಾ ಅನುಮೋದಿಸಿದ ಅಪ್ಲಿಕೇಶನ್‌ಗಳನ್ನು ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳಲಿದೆ.
  • ಆರ್‌ಬಿಐ 442 ಡಿಜಿಟಲ್ ಲೆಂಡಿಂಗ್ ಆಪ್‌ಗಳ ಪಟ್ಟಿಯನ್ನು ಐಟಿ ಸಚಿವಾಲಯಕ್ಕೆ ನೀಡಿದೆ.
  • ಗೂಗಲ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
Online Fraud ತಡೆಗಟ್ಟಲು ಶೀಘ್ರದಲ್ಲೇ ಬರಲಿದೆ RBI Digita, ಏನಿದು ಹೊಸ ತಂತ್ರಜ್ಞಾನ? title=

App To Stop Digital Fraud: ಆನ್‌ಲೈನ್ ವಂಚನೆಯನ್ನು ತಡೆಗಟ್ಟಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ಇಂಡಿಯಾ ಟ್ರಸ್ಟ್ ಏಜೆನ್ಸಿ (DIGITA) ಅನ್ನು ಸ್ಥಾಪಿಸುವುದನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಸಾಲ ನೀಡುವ ಆಪ್‌ಗಳನ್ನು ಡಿಜಿಟಾ ನಿಷೇಧಿಸಲಿದೆ. ಇದರಿಂದ ನಕಲಿ ಆಪ್ ಗಳನ್ನು  ಪತ್ತೆಹಚ್ಚಲು ಮತ್ತು ಡಿಜಿಟಲ್ ವಂಚನೆಯನ್ನು ತಡೆಯಲು ಸುಲಭವಾಗಲಿದೆ (online fraud central bank to bring rbi digita to tame digital fraud). ಇದಲ್ಲದೆ, ಅಂತಹ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ (Google Play Store)ನಲ್ಲಿ ಗೋಚರಿಸುವುದಿಲ್ಲ. (Technology News In Kananda)

RBI ನ DIGITA ಎಂದರೇನು?
ಆರ್ಥಿಕ ಅಪರಾಧಗಳನ್ನು ತಡೆಯಲು DIGITA (Digital India Trust Agency) ತರಲಾಗುತ್ತಿದೆ. ಮಾಹಿತಿಯ ಪ್ರಕಾರ, ಇದು ಡಿಜಿಟಲ್ ಜಗತ್ತಿನಲ್ಲಿ ಅಕ್ರಮ ಅಪ್ಲಿಕೇಶನ್‌ಗಳ ತನಿಖೆ ನಡೆಸಲಿದೆ. ಇದರಿಂದ ಹಣಕಾಸು ಜಗತ್ತಿನಲ್ಲಿ, ಡಿಜಿಟಲ್ ಪರಿಶೀಲನೆಯನ್ನು ಹೊಂದಿರದ ಅಪ್ಲಿಕೇಶನ್‌ಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಕಂಪನಿಗಳು ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸಿದರೆ, ಅವರು ತಮ್ಮ ಅಪ್ಲಿಕೇಶನ್ ಅನ್ನು ಡಿಜಿಟಾ ಮೂಲಕ ಪರಿಶೀಲಿಸಬೇಕು. ಈ ಸಂಸ್ಥೆಯು ಆ್ಯಪ್ ಗಳನ್ನು  ಪರಿಶೀಲಿಸಿದ ನಂತರ ಆರ್‌ಬಿಐಗೆ ವರದಿಯನ್ನು ಸಲ್ಲಿಸಲಿದೆ. ಅಲ್ಲದೆ, ಸರಿಯಾದ ಅಪ್ಲಿಕೇಶನ್ ಅನ್ನು ಗುರುತಿಸಲು ಡಿಜಿಟಾ ಗ್ರಾಹಕರಿಗೆ ಸಹಾಯ ಮಾಡಲಿದೆ (online fraud central bank to bring rbi digita to tame digital fraud).

ಇದನ್ನೂ ಓದಿ-Smartphone Tricks: ಫೋನ್ ನಲ್ಲಿ ಈ ಸಂಕೇತ ಕಾಣಿಸಿಕೊಂಡರೆ ನಿಮ್ಮ ಕರೆ ರೆಕಾರ್ಡ್ ಆಗುತ್ತಿದೆ ಎಂದರ್ಥ, ನೀವೂ ತಿಳಿದುಕೊಳ್ಳಿ!

ಸರಿ ಮತ್ತು ತಪ್ಪು ಅಪ್ಲಿಕೇಶನ್‌ಗಳನ್ನು ಗುರುತಿಸುವುದು ಇದರಿಂದ ಸುಲಭವಾಗುತ್ತದೆ (Rbi on digital fraud cases)
ಡಿಜಿಟಲ್ ಪರಿಶೀಲನೆಯ ಮೂಲಕ, ಡಿಜಿಟಲ್ ಜಗತ್ತಿನಲ್ಲಿ ಸರಿ ಮತ್ತು ತಪ್ಪು ಅಪ್ಲಿಕೇಶನ್‌ಗಳನ್ನು ಗುರುತಿಸುವುದು ತುಂಬಾ ಸುಲಭವಾಗಲಿದೆ. ಇದಲ್ಲದೆ, ಡಿಜಿಟಲ್ ಸಾಲ ವಲಯದಲ್ಲಿ ಪಾರದರ್ಶಕತೆಯೂ ಇರಲಿದೆ. ಕಳೆದ ಕೆಲವು ವರ್ಷಗಳಲ್ಲಿ, ಹಣಕಾಸು ವಲಯದಲ್ಲಿ ಡಿಜಿಟಲ್ ಸಾಲಗಳ ಪಾಲು ವೇಗವಾಗಿ ಹೆಚ್ಚುತ್ತಿದೆ. ಆದರೆ, ಇದರಿಂದಾಗಿ ಡಿಜಿಟಲ್ ವಂಚನೆಯೂ ವೇಗವಾಗಿ ಹೆಚ್ಚುತ್ತಿದೆ. ಇಂತಹ ನಕಲಿ ಸಾಲದ ಆ್ಯಪ್‌ಗಳಲ್ಲಿ ಸಿಲುಕಿ ಜನರು ತುಂಬಾ ತೊಂದರೆಗೀಡಾಗಿದ್ದಾರೆ. ಪೊಲೀಸರೊಂದಿಗೆ ಈ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ.

ಇದನ್ನೂ ಓದಿ-Will Time Stop In 2029: ನಿಜವೇ? 2029 ರಲ್ಲಿ ಸಮಯ ನಿಂತುಹೋಗಲಿದೆಯಾ? ಭೂಮಿಯ ಸುತ್ತುವಿಕೆ ಕುರಿತು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ!

ಗೂಗಲ್ 2200 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ
ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಡಿಜಿಟಾ ಅನುಮೋದಿಸಿದ ಅಪ್ಲಿಕೇಶನ್‌ಗಳನ್ನು ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳಲಿದೆ. ಆರ್‌ಬಿಐ 442 ಡಿಜಿಟಲ್ ಲೆಂಡಿಂಗ್  ಆಪ್‌ಗಳ ಪಟ್ಟಿಯನ್ನು ಐಟಿ ಸಚಿವಾಲಯಕ್ಕೆ ನೀಡಿದೆ. ಗೂಗಲ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸೆಪ್ಟೆಂಬರ್ 2022 ರಿಂದ ಆಗಸ್ಟ್ 2023 ರವರೆಗೆ, ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಸರಿಸುಮಾರು 2200 ಡಿಜಿಟಲ್ ಲೆಂಡಿಂಗ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ತನ್ನ ಹೊಸ ನೀತಿಯಲ್ಲಿ, ಆರ್‌ಬಿಐ ಅನುಮೋದಿಸಿದ ಅಪ್ಲಿಕೇಶನ್‌ಗಳನ್ನು ಮಾತ್ರ ಅನುಮೋದಿಸಲು ಗೂಗಲ್ ನಿರ್ಧರಿಸಿದೆ. ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕೋರಿಕೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News