Onion Price Hike: ಗಗನಕ್ಕೇರುತ್ತಿದೆ ಈರುಳ್ಳಿ ಬೆಲೆ... ಕೆಜಿ ದರ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ!!

Onion Rate Hike: ಟೊಮೆಟೊ ಬಳಿಕ ಇದೀಗ ಈರುಳ್ಳಿ ಬೆಲೆ ಗಗನಕ್ಕೇರಿದೆ. ದೇಶಾದ್ಯಂತ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. 

Written by - Chetana Devarmani | Last Updated : Oct 28, 2023, 07:01 AM IST
  • ಟೊಮೆಟೊ ಬಳಿಕ ಈರುಳ್ಳಿ ಬೆಲೆ ಹೆಚ್ಚಳ
  • ಗಗನಕ್ಕೇರುತ್ತಿದೆ ಈರುಳ್ಳಿ ದರ
  • ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆ
Onion Price Hike: ಗಗನಕ್ಕೇರುತ್ತಿದೆ ಈರುಳ್ಳಿ ಬೆಲೆ... ಕೆಜಿ ದರ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ!! title=
Onion

Onion Price Hike in India : ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಮ್ಮೆಲೇ ಶೇ.57ರಷ್ಟು ಬೆಲೆ ಏರಿಕೆಯಿಂದಾಗಿ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ದೇಶದ ಬಹುತೇಕ ಭಾಗಗಳಲ್ಲಿ ಒಂದು ಕಿಲೋ ಈರುಳ್ಳಿ 50-60 ರೂ. ಆಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ದೇಶದೆಲ್ಲೆಡೆ ಈರುಳ್ಳಿ ಬೆಲೆ ಏರುತ್ತಲೇ ಇದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಇದೇ ವೇಳೆಗೆ ಒಂದು ಕಿಲೋ ಈರುಳ್ಳಿ 30 ರೂಪಾಯಿ ಇತ್ತು, ಆದರೆ ಈಗ ಪ್ರದೇಶವಾರು ಕಿಲೋಗೆ 50-60 ರೂಪಾಯಿ ಇದೆ. ದೆಹಲಿಯಲ್ಲಿ ಈರುಳ್ಳಿ ಕೆಜಿಗೆ 47-50 ರೂಪಾಯಿ ಇದ್ದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 60 ರೂಪಾಯಿ ಇದೆ. 

ಕರ್ನಾಟಕದಲ್ಲೂಈರುಳ್ಳಿ ಬೆಲೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚುತ್ತಿದ್ದು, ಆತಂಕಕಾರಿಯಾಗಿದೆ. ಟೊಮೆಟೊ ಬಳಿಕ ಈಗ ಈರುಳ್ಳಿ ಆ ಮಟ್ಟಕ್ಕೆ ಬರುವುದು ಅನುಮಾನ. ಸಂಗ್ರಹವಾಗಿರುವ ಈರುಳ್ಳಿಯನ್ನು ಸಬ್ಸಿಡಿಯಲ್ಲಿ ಮಾರಾಟ ಮಾಡಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದರಿಂದ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಬಿಸ್ನೆಸ್ ಅಲ್ಲದೆ ಇತರ ಕಡೆ ಹೂಡಿಕೆ ಮಾಡಿ ಲಾಭ ಗಳಿಸಬೇಕೆ? ಈ ಸಂಗತಿಗಳನ್ನು ನೆನಪಿನಲ್ಲಿಡಿ! 

ಈರುಳ್ಳಿ ಬೆಲೆ ಹೆಚ್ಚಿರುವ ರಾಜ್ಯಗಳಿಗೆ ದಾಸ್ತಾನು ಮಾಡಿರುವ ಈರುಳ್ಳಿಯನ್ನು ಪೂರೈಸಲು ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಸಂಗ್ರಹವಾಗಿರುವ ಈರುಳ್ಳಿಯನ್ನು ಬೆಲೆ ಹೆಚ್ಚಿರುವ ಪ್ರದೇಶಗಳಿಗೆ ಸಾಗಿಸುವ ಪ್ರಕ್ರಿಯೆ ಆಗಸ್ಟ್‌ನಲ್ಲಿ ಆರಂಭವಾಗಿದ್ದು, ಇದುವರೆಗೆ 22 ರಾಜ್ಯಗಳಿಗೆ 1.7 ಲಕ್ಷ ಟನ್ ಈರುಳ್ಳಿಯನ್ನು ಸರಬರಾಜು ಮಾಡಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ತಿಳಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಚಿಲ್ಲರೆ ಈರುಳ್ಳಿ ಮಾರಾಟವನ್ನು ನಡೆಸುತ್ತಿವೆ. 

ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು?

ಈ ಬಾರಿಯ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದರಿಂದ ಖಾರಿಫ್ ಹಂಗಾಮಿನಲ್ಲಿ ಈರುಳ್ಳಿ ನಾಟಿ ಮಾಡಲು ವಿಳಂಬವಾಗಿದೆ. ಇದರಿಂದ ಆಗಲೇ ಸಿಗಬೇಕಾದ ಬೆಳೆ ಕೈಸೇರಿಲ್ಲ. ರಬಿಯಲ್ಲಿ ಕೊಯ್ಲು ಮಾಡಿದ ದಾಸ್ತಾನು ಬಹುತೇಕ ಖಾಲಿಯಾಗಿದೆ. ಬೇಡಿಕೆ ಮತ್ತು ಪೂರೈಕೆ ಸರಪಳಿಯಲ್ಲಿನ ಹಾನಿಯಿಂದಾಗಿ, ಈರುಳ್ಳಿ ಬೆಲೆ ಹೆಚ್ಚುತ್ತಿದೆ. ಸಗಟು ಮತ್ತು ಚಿಲ್ಲರೆ ವಲಯದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. 2023-24ರ ಆರ್ಥಿಕ ವರ್ಷಕ್ಕೆ ಎನ್‌ಸಿಸಿಎಫ್, ಎನ್‌ಎಎಫ್‌ಇಡಿ ಜಂಟಿಯಾಗಿ 5 ಲಕ್ಷ ಟನ್ ಈರುಳ್ಳಿ ದಾಸ್ತಾನು ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ 2 ಲಕ್ಷ ಟನ್ ಈರುಳ್ಳಿ ಸಂಗ್ರಹಿಸಲು ಸಿದ್ಧತೆ ನಡೆಸಲಾಗಿದೆ. ಈ ಈರುಳ್ಳಿ ಈಗ ಬೇರೆ ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮನೆಯಿಂದಲೇ ಈ ಉದ್ಯಮ ಆರಂಭಿಸಿ ಲಕ್ಷಾಂತರ ಹಣಗಳಿಕೆ ಮಾಡಬಹುದು! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News