ನವದೆಹಲಿ : ಇದು ಹಿರಿಯ ನಾಗರಿಕರಿಗೆ ತುಂಬಾ ಮಹತ್ವದ ಮಾಹಿತಿಯಾಗಿದೆ. NPS ಚಂದಾದಾರರು ಈಗ ಸಂಪೂರ್ಣ ಹಣವನ್ನು ಒಂದೇ ಬಾರಿ ಹಿಂಪಡೆಯಬಹುದಾಗಿದೆ. ಶೀಘ್ರದಲ್ಲೇ ಈ ಸೌಲಭ್ಯ ಜಾರಿಗೆ ಬರಲಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪಿಂಚಣಿದಾರರಿಗೆ ಹೊಸ ಆಯ್ಕೆಯನ್ನು ನೀಡಲು ಸಿದ್ಧವಾಗಿದೆ.
ಸರ್ಕಾರ, ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(National Pension System) ಯೋಜನೆ ನಡೆಸುತ್ತಿದೆ. ಜನರನ್ನು ಆಕರ್ಷಿಸಲು ಇದ್ರಲ್ಲಿ ಕಾಲಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗಳನ್ನು ಮಾಡುತ್ತದೆ. ಚಂದಾದಾರರ ಸಂಪೂರ್ಣ ಕಾಪರ್ಸ್ 5 ಲಕ್ಷ ರೂಪಾಯಿಯಾಗಿದ್ದರೆ ಈ ಮೊತ್ತವನ್ನು ಒಂದೇ ಬಾರಿ ಹಿಂಪಡೆಯಬಹುದು.
ಇದನ್ನೂ ಓದಿ : Amazon Prime Day ಸೇಲ್ : ಜೂನ್ 21-22 ರಿಂದ ಆರಂಭ?
ಈ ಹಿಂದೆ ಕೇವಲ 2 ಲಕ್ಷ ರೂ. ಮಾತ್ರ ಹಿಂಪಡೆಯಬಹುದಿತ್ತು. ಅದಕ್ಕೂ ಕೆಲವೊಂದು ಷರತ್ತುಗಳಿದ್ದವು. ಅಲ್ಲದೆ ಮೂರು ವರ್ಷಗಳ ನಂತ್ರವೇ ಹಣ ಹಿಂಪಡೆಯಬೇಕಾಗಿತ್ತು(Money Withdrawal). ಪೂರ್ಣ ಹೂಡಿಕೆಯ ಶೇ. 25ರಷ್ಟನ್ನು ಮಾತ್ರ ಹಿಂಪಡೆಯಬಹುದಾಗಿತ್ತು. ಮಕ್ಕಳ ಶಿಕ್ಷಣ, ಮದುವೆ, ಮನೆ ಖರೀದಿ ಮತ್ತು ಗಂಭೀರ ಖಾಯಿಲೆ ಚಿಕಿತ್ಸೆಗಾಗಿ ಮಾತ್ರ ಹಣ ಪಡೆಯಬಹುದಾಗಿದೆ.
ಇದನ್ನೂ ಓದಿ : Financial Planning Tips: 30 ವರ್ಷಕ್ಕೂ ಮುನ್ನ ಈ 5 ಕೆಲಸ ಮಾಡಿ, ಜೀವನವಿಡೀ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ
NPS ನಲ್ಲಿ ಹೂಡಿಕೆ ಮಾಡುವವರ ಗರಿಷ್ಠ ವಯಸ್ಸನ್ನು 70 ವರ್ಷಕ್ಕೇರಿಸುವಂತೆ ಸಲಹೆ ನೀಡಲಾಗಿದೆ. ಈ ಹಿಂದೆ ಗರಿಷ್ಠ ವಯಸ್ಸು 65 ವರ್ಷವಾಗಿತ್ತು. ಇದಲ್ಲದೆ ಈ ವರ್ಷ 10 ಲಕ್ಷ ಹೊಸಬರನ್ನು ಈ ವ್ಯವಸ್ಥೆಯಡಿ ತರುವ ಗುರಿಯನ್ನು PFRD ಹೊಂದಿದೆ. 60ನೇ ವಯಸ್ಸಿನಲ್ಲಿಯೇ NPS ಯಲ್ಲಿ ಹೂಡಿಕೆ ಮಾಡಿದಲ್ಲಿ ಅವರು ಖಾತೆಯನ್ನು 75 ವರ್ಷ ವಯಸ್ಸಿನವರೆಗೆ ಇಟ್ಟುಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.