New Pension System Calculation: ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು, ನೀವು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವುದು ಅವಶ್ಯಕ. ಷೇರುಪೇಟೆಯಲ್ಲಿ ಖಂಡಿತಾ ಲಾಭವಿದೆ ಆದರೆ ಅಪಾಯದ ಅಂಶವೂ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಅಪಾಯ ಮುಕ್ತವಾಗಿ ಉಳಿಯುವ ಮೂಲಕ ನೀವು ಹಣವನ್ನು ಗಳಿಸಲು ಬಯಸಿದರೆ, ನಿಮಗೆ ಅನೇಕ ಹೂಡಿಕೆ ಆಯ್ಕೆಗಳು ಲಭ್ಯವಿವೆ. ಆ ಆಯ್ಕೆಗಳಲ್ಲಿ ನ್ಯೂ ಪೆನ್ಷನ್ ಸ್ಕೀಮ್ (ಹೊಸ ಪಿಂಚಣಿ ವ್ಯವಸ್ಥೆ) ಕೂಡ ಒಂದು. ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ನೀವು ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಬಹುದು.
150 ರೂ. ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸಿ:
ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ವೃದ್ಧಾಪ್ಯವನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಬಹುದು. ಇದರಲ್ಲಿ ದಿನಕ್ಕೆ 150 ರೂಪಾಯಿ ಉಳಿಸಿದರೂ ನಿವೃತ್ತಿಯ ಸಮಯದಲ್ಲಿ ನೇರವಾಗಿ 1 ಕೋಟಿ ಸಿಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಹೂಡಿಕೆ ಮಾಡುವುದು ತುಂಬಾ ಸುಲಭ ಮತ್ತು ಕಡಿಮೆ ಅಪಾಯ. ಎನ್‌ಪಿಎಸ್ ಮಾರುಕಟ್ಟೆ ಸಂಬಂಧಿತ ಹೂಡಿಕೆಯಾಗಿದ್ದರೂ ಸಹ ಇದು ಸುರಕ್ಷಿತ ಹೂಡಿಕೆ ಆಗಿದೆ.
ಎನ್‌ಪಿಎಸ್ ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೊಡ್ಡ ಲಾಭ ಗಳಿಸಿ:
ಎನ್‌ಪಿಎಸ್ ಮಾರುಕಟ್ಟೆ ಸಂಬಂಧಿತ ನಿವೃತ್ತಿ ಆಧಾರಿತ ಹೂಡಿಕೆಯ ಆಯ್ಕೆಯಾಗಿದೆ. ಈ ಯೋಜನೆಯ ಅಡಿಯಲ್ಲಿ, ನೀವು ಎನ್‌ಪಿಎಸ್‌ನ ಹಣವನ್ನು ಎರಡು ಸ್ಥಳಗಳಲ್ಲಿ ಹೂಡಿಕೆ ಮಾಡುತ್ತೀರಿ, ಈಕ್ವಿಟಿ ಅಂದರೆ ಷೇರು ಮಾರುಕಟ್ಟೆ ಮತ್ತು ಸಾಲ ಅಂದರೆ ಸರ್ಕಾರಿ ಬಾಂಡ್‌ಗಳು ಮತ್ತು ಕಾರ್ಪೊರೇಟ್ ಬಾಂಡ್‌ಗಳು. ಖಾತೆಯನ್ನು ತೆರೆಯುವ ಸಮಯದಲ್ಲಿ ಈಕ್ವಿಟಿಗೆ ಎಷ್ಟು ಎನ್‌ಪಿಎಸ್ ಹಣ ಹೋಗುತ್ತದೆ ಎಂಬುದನ್ನು ನೀವು ನಿರ್ಧರಿಸಬಹುದು. ಸಾಮಾನ್ಯವಾಗಿ ಹಣದ 75% ವರೆಗೆ ಈಕ್ವಿಟಿಗೆ ಹೋಗಬಹುದು. ಅಂದರೆ, ಇದರಲ್ಲಿ ನೀವು PPF ಅಥವಾ EPF ಗಿಂತ ಸ್ವಲ್ಪ ಹೆಚ್ಚು ಆದಾಯವನ್ನು ಪಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ- PAN link with Aadhaar : 4 ತಿಂಗಳೊಳಗೆ ಈ ಕೆಲಸ ಮಾಡಿ, ಇಲ್ಲದಿದ್ದರೆ ಬಂದ್ ಆಗುತ್ತೆ ನಿಮ್ಮ ಪಾನ್ ಕಾರ್ಡ್!
ಈ ರೀತಿ ನೀವು ಮಿಲಿಯನೇರ್ ಆಗಬಹುದು:
ನೀವು ಈಗಷ್ಟೇ ಕೆಲಸವನ್ನು ಪ್ರಾರಂಭಿಸಿದ್ದೀರಿ ಮತ್ತು ನಿಮಗೆ ಹೆಚ್ಚು ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ, ನೀವು ಎನ್‌ಪಿಎಸ್‌ನಲ್ಲಿ ದಿನಕ್ಕೆ ಕೇವಲ 150 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಬೃಹತ್ ಮೊತ್ತವನ್ನು ಕಲೆ ಹಾಕಬಹುದು. ಉದಾಹರಣೆಗೆ, ನಿಮಗೆ ಈಗ 25 ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ... ನೀವು ತಿಂಗಳಿಗೆ 4500 ರೂಪಾಯಿಗಳನ್ನು (ಅಂದರೆ ದಿನಕ್ಕೆ 150 ರೂ. ) ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದರೆ 60 ವರ್ಷ ವಯಸ್ಸಿಗೆ ನೀವು ನಿವೃತ್ತಿಯಾಗುವ ವೇಳೆಗೆ ಇದರ ಮೆಚ್ಯೂರಿಟಿಗೆ ನೀವು ಒಪ್ಪಿಗೆ ನೀಡಿದರೆ, ಅಂದರೆ 35 ವರ್ಷಗಳವರೆಗೆ ನಿರಂತರವಾಗಿ ಹೂಡಿಕೆ ಮಾಡುತ್ತೀರಿ ಎಂದಾದರೆ ಇದರಲ್ಲಿ ಕನಿಷ್ಠ 8% ದರದಲ್ಲಿ ಆದಾಯ ಪಡೆಯುತ್ತೀರಿ ಎಂದು ಭಾವಿಸೋಣ. ಹಾಗಾದಲ್ಲಿ, ನೀವು ನಿವ್ರುತ್ತಿಯಾದಾಗ, , ನಿಮ್ಮ ಒಟ್ಟು ಪಿಂಚಣಿ ಸಂಪತ್ತು ರೂ.1 ಕೋಟಿಯಾಗಿರುತ್ತದೆ.
ಎನ್‌ಪಿಎಸ್‌ನಲ್ಲಿ ಹೂಡಿಕೆಯ ಆರಂಭಿಕ ವಯಸ್ಸು- 25 ವರ್ಷಗಳು
ಮಾಸಿಕ ಹೂಡಿಕೆ - 4500 ರೂ.
ಹೂಡಿಕೆಯ ಅವಧಿ - 35 ವರ್ಷಗಳು
ಅಂದಾಜು ಆದಾಯ - 8%
ಎನ್‌ಪಿಎಸ್ ಇನ್ವೆಸ್ಟ್ಮೆಂಟ್ ಲೆಡ್ಜರ್
ಒಟ್ಟು ಹೂಡಿಕೆ 18.90 ಲಕ್ಷ ರೂ.
ಒಟ್ಟು ಬಡ್ಡಿ 83.67 ಲಕ್ಷ ರೂ.
ಪಿಂಚಣಿ ಸಂಪತ್ತು 1.02 ಕೋಟಿ ರೂ.
ಒಟ್ಟು ತೆರಿಗೆ ಉಳಿತಾಯ 5.67 ಲಕ್ಷ ರೂ.
ಇದನ್ನೂ ಓದಿ- ನೀವು Credit Card ಕಳೆದುಕೊಂಡರೆ, ತಕ್ಷಣ ಈ 5 ಕೆಲಸ ಮಾಡಿ!
ಪಿಂಚಣಿ ಎಷ್ಟು ಸಿಗುತ್ತದೆ:
ಈಗ ನೀವು ಈ ಎಲ್ಲಾ ಹಣವನ್ನು ಒಂದೇ ಬಾರಿಗೆ ಹಿಂಪಡೆಯಲು ಸಾಧ್ಯವಿಲ್ಲ, ನೀವು ಅದರಲ್ಲಿ 60% ಮಾತ್ರ ಹಿಂಪಡೆಯಬಹುದು, ಉಳಿದ 40% ಅನ್ನು ನೀವು ವರ್ಷಾಶನ ಯೋಜನೆಯಲ್ಲಿ ಹಾಕಬೇಕು, ಇದರಿಂದ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯುತ್ತೀರಿ. ನೀವು ವರ್ಷಾಶನದಲ್ಲಿ 40% ಹಣವನ್ನು ಹಾಕುತ್ತೀರಿ ಎಂದು ಭಾವಿಸೋಣ. ಆದ್ದರಿಂದ ನೀವು 61.54 ಲಕ್ಷ ರೂಪಾಯಿಗಳ ಒಟ್ಟು ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಮತ್ತು ಬಡ್ಡಿಯು 8% ಎಂದು ಊಹಿಸಿ, ನಂತರ ನೀವು ಪ್ರತಿ ತಿಂಗಳು 27,353 ಸಾವಿರ ರೂಪಾಯಿಗಳ ಪಿಂಚಣಿ ಪಡೆಯುತ್ತೀರಿ.
ಪಿಂಚಣಿಯ ಲೆಕ್ಕಾಚಾರ:-
ವರ್ಷಾಶನ 40%
ಅಂದಾಜು ಬಡ್ಡಿ ದರ 8%
ಹಿಂಪಡೆದ ಒಟ್ಟು ಮೊತ್ತ 61.54 ಲಕ್ಷ ರೂ.
ಮಾಸಿಕ ಪಿಂಚಣಿ 27,353 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.