Pensionಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟ, PFRDA ತರುತ್ತಿದೆ ಈ ಜಬರ್ದಸ್ತ್ ಸ್ಕೀಮ್

NPS Assured Return Scheme: PFRDA ಈ ಯೋಜನೆಗೆ ಸಲಹೆಗಾರರ ​​ನೇಮಕಾತಿಯನ್ನು ಆರಂಭಿಸಿದೆ. ಈ ಸಲಹೆಗಾರರು ಈ ಯೋಜನೆಯ ವಿನ್ಯಾಸವನ್ನು ಸಿದ್ಧಪಡಿಸುತ್ತಿದ್ದು, ಈ ಯೋಜನೆಯ ಕುರಿತು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Aug 22, 2021, 06:04 PM IST
  • NPS ಅಡಿ ಶೀಘ್ರವೇ ಖಾತರಿ ರಿಟರ್ನ್ ಸಿಗಲಿದೆ.
  • PFRDA ಸಲಹೆಗಾರರ ನೇಮಕಾತಿಗೆ RPF ಜಾರಿಗೊಳಿಸಿದೆ
  • PFRDA ಇದುವರೆಗೆ ಈ ರೀತಿಯ ನಿಶ್ಚಿತ ಅಥವಾ ಖಾತರಿ ರಿಟರ್ನ್ ನೀಡುವ ಯೋಜನೆಯನ್ನು
Pensionಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟ, PFRDA ತರುತ್ತಿದೆ ಈ ಜಬರ್ದಸ್ತ್ ಸ್ಕೀಮ್ title=
Assured Return Scheme (File Photo)

ನವದೆಹಲಿ: NPS Assured Return Scheme - ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಒಂದು ಅದ್ಭುತ ಯೋಜನೆ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಪಿಂಚಣಿ ನಿಯಂತ್ರಕ ಪ್ರಾಧಿಕಾರ (PFRDA) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (Nationa Pension System) ಅಡಿಯಲ್ಲಿ ಕನಿಷ್ಠ ಖಾತರಿ ರಿಟರ್ನ್ ಯೋಜನೆಯನ್ನು (MARS) ತರಲಿದೆ. ಇದಕ್ಕಾಗಿ ತಯಾರಿ ಕೂಡ ಆರಂಭವಾಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ.

ಇದಕ್ಕಾಗಿ ಸಲಹೆಗಾರರನ್ನು ನೇಮಿಸುತ್ತಿದೆ PFRDA
ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA) ಈ ಯೋಜನೆಯನ್ನು ರೂಪಿಸಲು ಸಲಹೆಗಾರರಿಗೆ ಪ್ರಸ್ತಾವನೆಗಾಗಿ (RFP) ವಿನಂತಿ ಜಾರಿಗೊಳಿಸಿದೆ. ಕಳೆದ ವರ್ಷ ಪಿಎಫ್‌ಆರ್‌ಡಿಎ ಅಧ್ಯಕ್ಷ ಸುಪ್ರತಿಮ್ ದಾಸ್ ಬಂಡೋಪಾಧ್ಯಾಯ ಅವರು ಈ ಯೋಜನೆಯ ಬಗ್ಗೆ ಎಂಬುದು ಇಲ್ಲಿ ಉಲ್ಲೇಖನೀಯ. 'ಈ ಕುರಿತು ಪಿಂಚಣಿ ನಿಧಿಗಳು ಮತ್ತು ಆಕ್ಚುವರಿಯಲ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಈ ಸಂಭಾಷಣೆಯ ಆಧಾರದ ಮೇಲೆ, ಯೋಜನೆಯನ್ನು ತಯಾರಿಸಲಾಗುತ್ತದೆ. ಪಿಎಫ್‌ಆರ್‌ಡಿಎ ಕಾಯಿದೆಯಡಿ ಕನಿಷ್ಠ ಖಾತರಿಯ ರಿಟರ್ನ್ ಯೋಜನೆಯನ್ನು (Assured Return Scheme) ಅನುಮತಿಸಲಾಗಿದೆ. ಪಿಂಚಣಿ ನಿಧಿ ಯೋಜನೆಗಳ ಅಡಿಯಲ್ಲಿ ನಿರ್ವಹಿಸಲ್ಪಡುವ ಹಣವನ್ನು ಮಾರುಕಟ್ಟೆಯಿಂದ ಗುರುತಿಸಲಾಗಿದೆ. ನಿಸ್ಸಂಶಯವಾಗಿ, ಇದರಲ್ಲಿ ಕೆಲವು ಏರಿಳಿತಗಳಿವೆ. ಅವುಗಳ ಮೌಲ್ಯಮಾಪನವು ಮಾರುಕಟ್ಟೆ ಸ್ಥಿತಿಯನ್ನು ಆಧರಿಸಿದೆ.

ಸಲಹೆಗಾರರ ಕೆಲಸ ಏನು?
PFRDA RFP ಕರಡು ಪ್ರಕಾರ, NPS  ಗ್ಯಾರಂಟಿ  ರಿಟರ್ನ್ ನೀಡುವ ಈ ಯೋಜನೆಯನ್ನು ಸಿದ್ಧಪಡಿಸಲು ಸಲಹೆಗಾರರ ನಿಯುಕ್ತಿಯಿಂದ PFRDA ಹಾಗೂ ಸರ್ವಿಸ್ ಪ್ರೊವೈಡರ್ ನಡುವೆ ಪ್ರಿನ್ಸಿಪಾಲ್ ಏಜೆಂಟರು ಸಂಬಂಧ ಕಲ್ಪಿಸಬಾರದು.  ಪಿಎಫ್‌ಆರ್‌ಡಿಎ ಕಾಯಿದೆಯ ಸೂಚನೆಗಳ ಪ್ರಕಾರ, ಚಂದಾದಾರರು ಎನ್‌ಪಿಎಸ್ ಅಡಿಯಲ್ಲಿ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಇದು 'ಕನಿಷ್ಠ ಖಾತರಿಯ ರಿಟರ್ನ್' ನೀಡುತ್ತದೆ, ಅಂತಹ ಯೋಜನೆಯನ್ನು ನಿಯಂತ್ರಕ ನೋಂದಾಯಿತ ಪಿಂಚಣಿ ನಿಧಿಯಿಂದ ನೀಡಬೇಕಾಗುತ್ತದೆ. ಈ ರೀತಿಯಾಗಿ ಸಲಹೆಗಾರರು ಪಿಂಚಣಿ ನಿಧಿಯಿಂದ ಅಸ್ತಿತ್ವದಲ್ಲಿರುವ ಮತ್ತು ಸಂಭಾವ್ಯ ಚಂದಾದಾರರಿಗಾಗಿ ನಿವೃತ್ತಿಯ(Retirement) ನಂತರ 'ಕನಿಷ್ಠ ಖಾತರಿಯ ರಿಟರ್ನ್' ಯೋಜನೆಯನ್ನು ಸಿದ್ಧಪಡಿಸಬೇಕು ಎನ್ನಲಾಗಿದೆ.

ಇದನ್ನೂ ಓದಿ-New Pension System : ಈ ಯೋಜನೆಯಲ್ಲಿ ಹೂಡಿಕೆ ಮಾಡಿ ನಿವೃತ್ತಿ ಮೊದಲು ಮಿಲಿಯನೇರ್ ಆಗಿ ನಂತರ ಪ್ರತಿ ತಿಂಗಳು ₹50,000 ಪಿಂಚಣಿ

ಇಂತಹ ಸ್ಕೀಮ್ ಇದುವರೆಗೂ ಸಿದ್ಧಗೊಂಡಿಲ್ಲ
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಮತ್ತು ಅಟಲ್ ಪಿಂಚಣಿ ಯೋಜನೆ (APY) ಸಿದ್ಧಪಡಿಸಲು ಹಾಗೂ ವೈಶಿಷ್ಟ್ಯಗಳನ್ನು ರೂಪಿಸುವಲ್ಲಿ ಮತ್ತು ಜೋಡಿಸುವಲ್ಲಿ ಪಿಎಫ್‌ಆರ್‌ಡಿಎ ಸಾಕಷ್ಟು ಕೆಲಸ ಮಾಡಿದೆ, ಆದರೆ ಇವೆಲ್ಲವೂ ಕೇಂದ್ರ ಸರ್ಕಾರದ ಯೋಜನೆಗಳಾಗಿವೆ. ಪಿಎಫ್‌ಆರ್‌ಡಿಎ ಪ್ರಸ್ತುತ ತರಲು ಯೋಚಿಸುತ್ತಿರುವ ಯೋಜನೆ ಅದರ ಮೊದಲ ನೈಜ ಯೋಜನೆಯಾಗಿದೆ. ಇದು ಕೂಡ ವಿಶೇಷವಾಗಿರುತ್ತದೆ ಏಕೆಂದರೆ ಪಿಎಫ್‌ಆರ್‌ಡಿಎ ಇಲ್ಲಿಯವರೆಗೆ ಅಂತಹ ಯಾವುದೇ ಖಾತರಿ ಯೋಜನೆಯನ್ನು ನಡೆಸುತ್ತಿಲ್ಲ. ಪಿಎಫ್‌ಆರ್‌ಡಿಎ ಈ ಪಿಂಚಣಿ ಯೋಜನೆಯ ಖಾತರಿಯನ್ನು ಮಾರುಕಟ್ಟೆ ಲಿಂಕ್ ಮಾಡಲಾಗುವುದು ಎಂದು ಹೇಳುತ್ತದೆ. ಹೂಡಿಕೆಯ ಮೇಲಿನ ಲಾಭದ ಖಾತರಿಯ ಭಾಗವನ್ನು ನಿಧಿ ವ್ಯವಸ್ಥಾಪಕರು ನಿರ್ಧರಿಸಬೇಕು.

ಇದನ್ನೂ ಓದಿ-NPS: ಪ್ರತಿನಿತ್ಯ ₹50 ಹೂಡಿಕೆ ಮಾಡಿ ನಿವೃತ್ತಿಯ ನಂತರ ಪಡೆಯಿರಿ ₹34 ಲಕ್ಷ : ಇದು ಹೂಡಿಕೆ ಮಾಡಲು ಉತ್ತಮ ಮಾರ್ಗ! 

ಯಾರು NPS ತೆಗೆದುಕೊಳ್ಳಬಹುದು?
ಕೇಂದ್ರ ಸರ್ಕಾರವು 1 ಜನವರಿ 2004 ರಂದು ತನ್ನ ಉದ್ಯೋಗಿಗಳಿಗೆ NPS ಅನ್ನು ಕಡ್ಡಾಯವಾಗಿ ಜಾರಿಗೊಳಿಸಿದೆ.. ಇದರ ನಂತರ ಎಲ್ಲಾ ರಾಜ್ಯಗಳು ತಮ್ಮ ಉದ್ಯೋಗಿಗಳಿಗೆ NPS ಅನ್ನು ಅಳವಡಿಸಿಕೊಂಡಿವೆ. 2009 ರ ನಂತರ, ಈ ಯೋಜನೆಯನ್ನು ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೂ ತೆರೆಯಲಾಗಿದೆ. ನಿವೃತ್ತಿಯ ನಂತರ, ನೌಕರರು NPS ನ ಒಂದು ಭಾಗವನ್ನು ಹಿಂಪಡೆಯಬಹುದು, ಉಳಿದವರು ನಿಯಮಿತ ಆದಾಯಕ್ಕಾಗಿ ವರ್ಷಾಶನವನ್ನು ತೆಗೆದುಕೊಳ್ಳಬಹುದು. 18 ರಿಂದ 60 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ-National Pension Scheme: ಪ್ರತಿದಿನ 50 ರೂ. ಹೂಡಿದರೆ ಸಿಗಲಿದೆ 34 ಲಕ್ಷ ರೂ. ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News