Petrol Diesel Price may 9th :ಸರ್ಕಾರಿ ತೈಲ ಕಂಪನಿಗಳು ಇಂದು ಅಂದರೆ ಮೇ 10 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ 33 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ದೆಹಲಿ ಸೇರಿದಂತೆ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ 100 ದಾಟಿದೆ. ಇದರೊಂದಿಗೆ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 113.46 ಡಾಲರ್‌ಗೆ ತಲುಪಿದೆ. ಇಇಷ್ಟಾದರೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗದಿರುವುದು ಕೊಂಚ ಸಮಾಧಾನಕರ ಸಂಗತಿ.
ಇಲ್ಲಿ ಅತಿ ಕಡಿಮೆ ಬೆಲೆಯ ಪೆಟ್ರೋಲ್ ಮಾರಾಟವಾಗುತ್ತಿದೆ :
ದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದರೆ, ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ ಅತ್ಯಂತ ಅಗ್ಗವಾಗಿ ಮಾರಾಟವಾಗುತ್ತಿದೆ. ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 91.45 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 85.83 ರೂ. ಇದಲ್ಲದೇ ದೇಶದಲ್ಲೇ ಅತ್ಯಂತ ದುಬಾರಿ ಪೆಟ್ರೋಲ್ ಮಹಾರಾಷ್ಟ್ರದ ಪರ್ಭಾನಿಯಲ್ಲಿ ಮಾರಾಟವಾಗುತ್ತಿದೆ. ಇಲ್ಲಿ ಲೀಟರ್ ಗೆ 123.47 ರೂ.ಗೆ ಮಾರಾಟವಾಗುತ್ತಿದೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಅತ್ಯಂತ ದುಬಾರಿ ಡೀಸೆಲ್ ಅಂದರೆ ಲೀಟರ್‌ಗೆ 107.68 ರೂ ಮಾರಾಟವಾಗುತ್ತಿದೆ.
ಇದನ್ನೂ ಓದಿ : Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಮತ್ತಷ್ಟು ಏರಿಕೆ
ಪ್ರಮುಖ ನಗರದಲ್ಲಿ ತೈಲ ಬೆಲೆ :
- ದೆಹಲಿ ಪೆಟ್ರೋಲ್ 105.41 ರೂ ಮತ್ತು ಡೀಸೆಲ್ 96.67 ರೂ ಪ್ರತಿ ಲೀಟರ್
- ಮುಂಬೈ ಪೆಟ್ರೋಲ್ 120.51 ರೂ ಮತ್ತು ಡೀಸೆಲ್ 104.77 ರೂ
ಬೆಂಗಳೂರು ಪೆಟ್ರೋಲ್ 111.09 ರೂ ಮತ್ತು ಡೀಸೆಲ್ 94.79 ರೂ
-ಚೆನ್ನೈ ಪೆಟ್ರೋಲ್ 110.85 ರೂ ಮತ್ತು ಡೀಸೆಲ್ 100. 94 ರೂ
- ಕೋಲ್ಕತ್ತಾ ಪೆಟ್ರೋಲ್ 115.12 ರೂ. ಡೀಸೆಲ್ ಲೀಟರ್‌ಗೆ 99.83 ರೂ
- ಲಕ್ನೋದಲ್ಲಿ ಪೆಟ್ರೋಲ್ 105.25 ರೂ ಮತ್ತು ಡೀಸೆಲ್ ಲೀಟರ್‌ಗೆ 96.83 ರೂ
- ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ 91.45 ರೂ ಮತ್ತು ಡೀಸೆಲ್ ಲೀಟರ್‌ಗೆ 85.83 ರೂ
- ಪಾಟ್ನಾದಲ್ಲಿ ಪೆಟ್ರೋಲ್ 116.23 ರೂ ಮತ್ತು ಡೀಸೆಲ್ ಲೀಟರ್‌ಗೆ 101 ರೂ.
ಇದನ್ನೂ ಓದಿ : ಹಣದುಬ್ಬರ ಎಫೆಕ್ಟ್: ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ
SMS ಮೂಲಕ ಕೂಡಾ ದರ ಪರಿಶೀಲಿಸಬಹುದು :
ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಹ ತಿಳಿಯಬಹುದು ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೆ ವೇಳೆ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.