Budget 2023: ಬರುವ ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾತಾಮನ್ ವರ್ಷ 2023ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ನಿಂದ ಜನಸಾಮಾನ್ಯರು ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದಾರೆ. ಇವೆಲ್ಲವುಗಳ ನಡುವೆ ಸರ್ಕಾರ ಈ ಬಾರಿ ಪಿಎಲ್ಐ ಯೋಜನೆಯನ್ನು ವಿಸ್ತರಿಸುವ ಸಾಧ್ಯತೆ ಇದೆ. ಮುಂಬರುವ ಬಜೆಟ್ನಲ್ಲಿ ಆಟಿಕೆಗಳು, ಸೈಕಲ್ಗಳು, ಚರ್ಮ ಮತ್ತು ಪಾದರಕ್ಷೆಗಳ ತಯಾರಿಕೆಗೆ ಆರ್ಥಿಕ ಪ್ರೋತ್ಸಾಹವನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ.
ಈಗಾಗಲೇ ಹಣ ಬಿಡುಗಡೆಯಾಗಿದೆ
ಹೆಚ್ಚಿನ ಉದ್ಯೋಗವಿರುವ ಪ್ರದೇಶಗಳಿಗೆ ಉತ್ಪಾದನಾ ಆಧಾರಿತ ಪ್ರೋತ್ಸಾಹ (ಪಿಎಲ್ಐ ಯೋಜನೆ) ಯೋಜನೆಯ ಪ್ರಯೋಜನಗಳನ್ನು ಒದಗಿಸಲು ಸರ್ಕಾರ ಅದನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ವರದಿಮಾಡಿವೆ. ವಾಹನಗಳು ಮತ್ತು ವಾಹನ ಘಟಕಗಳು, ದೊಡ್ಡ ಎಲೆಕ್ಟ್ರಾನಿಕ್ ಉಪಕರಣಗಳು, ಔಷಧಗಳು, ಜವಳಿ, ಆಹಾರ ಉತ್ಪನ್ನಗಳು, ಹೆಚ್ಚಿನ ದಕ್ಷತೆಯ ಸೋಲಾರ್ ಪಿವಿ ಮಾಡ್ಯೂಲ್ಗಳು, ಸುಧಾರಿತ ರಾಸಾಯನಿಕ ಕೋಶಗಳು ಮತ್ತು ವಿಶೇಷ ಉಕ್ಕು ಸೇರಿದಂತೆ ಒಟ್ಟು 14 ವಲಯಗಳಲ್ಲಿ ಸುಮಾರು 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪಿಎಲ್ಐ ಯೋಜನೆಯನ್ನು ಸರ್ಕಾರ ಈಗಾಗಲೇ ಜಾರಿಗೊಳಿಸಿದೆ.
ಇದನ್ನೂ ಓದಿ-ನೀವೂ ವಿವಾಹಿತರಾಗಿದ್ದಲ್ಲಿ ಮಾಸಿಕ ರೂ. 18,500 ಪಡೆಯಲು ಮಾರ್ಚ್ 31ರೊಳಗೆ ಈ ಕೆಲಸ ಮಾಡಿ
ಈ ಕುರಿತು ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ
ಈ ಕ್ಷೇತ್ರಗಳಲ್ಲಿ ದೇಶೀಯ ತಯಾರಕರನ್ನು ಸ್ಪರ್ಧಾತ್ಮಕ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ 'ಚಾಂಪಿಯನ್'ಗಳನ್ನಾಗಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಪಿಎಲ್ಐ ಯೋಜನೆಯನ್ನು ಆಟಿಕೆಗಳು, ಚರ್ಮದಂತಹ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸುವ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ಬಜೆಟ್ನಲ್ಲಿ ಈ ಕುರಿತು ಘೋಷಣೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ-ಉಚಿತ ಪಡಿತರ ಪಡೆಯುವ ಕೋಟ್ಯಾಂತರ ಜನರಿಗೊಂದು ಶಾಕಿಂಗ್ ಸುದ್ದಿ!
ಈ ಹಣವನ್ನು ಹಲವು ಕ್ಷೇತ್ರಗಳಿಗೆ ವೆಚ್ಚ ಮಾಡಲಾಗುವುದು
ಈಗಾಗಲೇ ಸರ್ಕಾರ ಪಿಎಲ್ಐ ಯೋಜನೆಗೆ ಬಿಡುಗಡೆ ಮಾಡಿರುವ ಎರಡು ಲಕ್ಷ ಕೋಟಿ ರೂ.ಗಳಲ್ಲಿ ಸ್ವಲ್ಪ ಹಣ ಉಳಿದಿದೆ ಎಂದು ಮೂಲವೊಂದು ಮಾಹಿತಿ ನೀಡಿದ್ದು. ಇದನ್ನು ಇತರ ಪ್ರದೇಶಗಳಲ್ಲಿ ಅನ್ವಯಿಸಬಹುದೇ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ ಎನ್ನಲಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಹಣಕಾಸು ವರ್ಷದ ಸಾಮಾನ್ಯ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.