Big Update: ಪ್ರಯಾಣಿಕರಿಗಾಗಿ ಬಂಪರ್ ಘೋಷಣೆ ಮೊಳಗಿಸಿದ ನಿತೀನ್ ಗಡ್ಕರಿ, ಕೇಳಿ ಕುಣಿದು ಕುಪ್ಪಳಿಸುವಿರಿ!

Big Update On Electric Vehicle Costing: ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಮಧ್ಯೆ ಕೇಂದ್ರ ಸಚಿವ ನಿತಿನ್ ಗಡ್ಕರಿ ವಾಹನ ಪ್ರಿಯರಿಗೆ ಭರ್ಜರಿ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ.  

Written by - Nitin Tabib | Last Updated : Mar 23, 2023, 07:16 PM IST
  • ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ,
  • ಇಡೀ ದೇಶದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಸರ್ಕಾರವು ವಿಸ್ತೃತ ಯೋಜನೆಯನ್ನು ಹೊಂದಿದ್ದು,
  • ಅದರ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದಿದ್ದಾರೆ.
Big Update: ಪ್ರಯಾಣಿಕರಿಗಾಗಿ ಬಂಪರ್ ಘೋಷಣೆ ಮೊಳಗಿಸಿದ ನಿತೀನ್ ಗಡ್ಕರಿ, ಕೇಳಿ ಕುಣಿದು ಕುಪ್ಪಳಿಸುವಿರಿ! title=
ನಿತೀನ್ ಗಡ್ಕರಿ ಮಹತ್ವದ ಘೋಷಣೆ!

Big Update On Electric Vehicle Costing: ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಮಧ್ಯೆ ಕೇಂದ್ರ ಸಚಿವ ನಿತಿನ್ ಗಡ್ಕರಿ ವಾಹನ ಪ್ರಿಯರಿಗೆ ಭರ್ಜರಿ ಸುದ್ದಿ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ, ದೇಶದಾದ್ಯಂತ ಎಲೆಕ್ಟ್ರಿಕ್ ವಾಹನದ ಕ್ರೇಜ್ ಬಹಳ ವೇಗವಾಗಿ ಹೆಚ್ಚುತ್ತಿದೆ, ಆದರೆ ಅದರ ದುಬಾರಿ ಬೆಲೆಯಿಂದಾಗಿ, ಜನರು ಅದನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಕೈಗೊಂಡ ವಿಶೇಷ ನಿರ್ಧಾರದ ನಂತರ ನಿಮಗೆ ಎಲೆಕ್ಟ್ರಿಕ್ ವಾಹನಗಳು ಅಗ್ಗವಾಗಿ ಸಿಗಲಿವೆ. ಪ್ರಸ್ತುತ ಡೀಸೆಲ್ ಮತ್ತು ಸಿಎನ್‌ಜಿ ಕಾರುಗಳು ಪೆಟ್ರೋಲ್ ಕಾರುಗಳಿಗಿಂತ ಹೆಚ್ಚು ದುಬಾರಿಯಾಗಿವೆ.

ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ವಿಸ್ತ್ರತ ಯೋಜನೆ
ಎಲ್ಲವೂ ಅಂದುಕೊಂಡಂತೆ ನಡೆದರೆ ಎಲೆಕ್ಟ್ರಿಕ್ ಬಸ್ ಗಳ ಓಡಾಟಕ್ಕೆ  ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಇದು ಒಂದು ವರ್ಷದಲ್ಲಿ ವಾಸ್ತವಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಇಡೀ ದೇಶದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಸರ್ಕಾರವು ವಿಸ್ತೃತ ಯೋಜನೆಯನ್ನು ಹೊಂದಿದ್ದು, ಅದರ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದಿದ್ದಾರೆ. ಪೆಟ್ರೋಲ್ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳ ಬೆಲೆ ತುಂಬಾ ಹೆಚ್ಚಾಗಿದೆ.  ಕೇಂದ್ರ ಸಚಿವರ ಈ ಹೇಳಿಕೆಯ ಬಳಿಕ ಕಾರು ಖರೀದಿಸಲು ಯೋಜಿಸುತ್ತಿರುವ ಜನರಿಗೆ ಸಾಕಷ್ಟು ಖುಷಿ ಸಿಗಲಿದೆ.

ಇದನ್ನೂ ಓದಿ-Big News: ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ!

ಮುಂಬರುವ ಯುಗ ಇಲೆಕ್ಟ್ರಿಕ್ ವಾಹನಗಳ ಯುಗ
ಭಾರತದಲ್ಲಿ ಮುಂಬರುವ ಸಮಯವು ಎಲೆಕ್ಟ್ರಿಕ್ ಮೊಬಿಲಿಟಿ ಸಮಯವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ವಿದ್ಯುತ್ ಇಂಧನವು ಶೀಘ್ರದಲ್ಲೇ ವಾಸ್ತವಕ್ಕೆ ಬರಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಎಲೆಕ್ಟ್ರಿಕ್ ವಾಹನದ ಪ್ರತಿಯೊಂದು ವರ್ಗದಲ್ಲೂ, ವಾಹನಗಳ ಮಾರಾಟದಲ್ಲಿ ಶೇ. 800 ಪ್ರತಿಶತದಷ್ಟು ಜಿಗಿತವನ್ನು ನಾವು ಕಾಣಬಹುದು ಎಂದು ಹೇಳಿದ್ದಾರೆ. ಗಡ್ಕರಿ ಪ್ರಕಾರ, ದೇಶದಲ್ಲಿ ಇದುವರೆಗೆ 17 ಲಕ್ಷ ಇವಿಗಳು ನೋಂದಣಿಯಾಗಿವೆ. ದೇಶದಲ್ಲಿ ಹೈಡ್ರೋಜನ್ ಕಾರುಗಳ ಮೇಲೆ ಕೆಲಸ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಅಂತಹ ವಾಹನಗಳು ರಸ್ತೆಗಳಲ್ಲಿ ಓಡಾಡಲಿವೆ.

ಇದನ್ನೂ ಓದಿ-7th Pay Commission: ಯುಗಾದಿ ದಿನ ಮೋದಿ ಸರ್ಕಾರದ ವತಿಯಿಂದ ಸರ್ಕಾರಿ ನೌಕರರಿಗೆ 27,000 ರೂ.ಗಳ ಭಾರಿ ಉಡುಗೊರೆ!

ಪ್ರಯಾಣದ ಸಮಯ ಕಡಿಮೆ ಮಾಡಲಾಗುವುದು
ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗ್ಪುರದಿಂದ ಪುಣೆಗೆ ಹೋಗುವ ಜನರಿಗೆ ಘೋಷಣೆ ಮಾಡಿದ್ದರು. ನಾಗ್ಪುರದಿಂದ ಪುಣೆಗೆ ಹೋಗುವ ಜನರ ಪ್ರಯಾಣದ ಸಮಯವನ್ನು ಎಂಟು ಗಂಟೆಗಳಿಗೆ ಇಳಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ. ಪ್ರಸ್ತುತ  ಈ ಅಂತರವನ್ನು  ಕವರ್ ಮಾಡಲು 14 ಗಂಟೆಗಳವರೆಗೆ ಸಮಯಾವಕಾಶ ಬೇಕಾಗುತ್ತದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಛತ್ರಪತಿ ಸಂಭಾಜಿ ನಗರ್  ಬಳಿ ಹೊಸದಾಗಿ ಉದ್ದೇಶಿಸಲಾದ ಪುಣೆ-ಛತ್ರಪತಿ ಸಂಭಾಜಿನಗರ ಆಕ್ಸಿಸ್ ಕಂಟ್ರೋಲ್ ಗ್ರೀನ್ ಎಕ್ಸ್‌ಪ್ರೆಸ್‌ವೇಗೆ ನಾಗ್ಪುರ-ಮುಂಬೈ ಸಮೃದ್ಧಿ ಮಹಾಮಾರ್ಗ್ ಅನ್ನು ಸಂಪರ್ಕಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News