LPG Price Update: ಹೊಸ ವರ್ಷದಂದೇ ಗ್ರಾಹಕರಿಗೆ ಎಲ್ಪಿಜಿ ಬೆಲೆ ಏರಿಕೆ ಬಿಸಿ

ತೈಲ ಕಂಪನಿಗಳು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ನಿಗದಿಪಡಿಸುತ್ತವೆ. ವರ್ಷಕ್ಕೆ 14.2 ಕೆಜಿಯ 12 ಸಿಲಿಂಡರ್‌ಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. 

Written by - Yashaswini V | Last Updated : Jan 1, 2021, 11:40 AM IST
  • ವರ್ಷಕ್ಕೆ 14.2 ಕೆಜಿಯ 12 ಸಿಲಿಂಡರ್‌ಗಳನ್ನು ಸರ್ಕಾರ ಸಬ್ಸಿಡಿ ಬೆಲೆಗೆ ನೀಡುತ್ತದೆ
  • ಹೆಚ್ಚಿನ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬೇಕು
  • ತೈಲ ಕಂಪನಿಗಳು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರುಗಳ ಬೆಲೆಯನ್ನು ನಿಗದಿಪಡಿಸುತ್ತವೆ
LPG Price Update: ಹೊಸ ವರ್ಷದಂದೇ ಗ್ರಾಹಕರಿಗೆ ಎಲ್ಪಿಜಿ ಬೆಲೆ ಏರಿಕೆ ಬಿಸಿ title=
LPG cylinders price (File Image)

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಗಳನ್ನು ಏರಿಸಿ ಬಡ ಗ್ರಾಹಕರಿಗೆ ಬರೆ ಎಳೆದಿದೆ.

ಒಂದು ರೀತಿಯಲ್ಲಿ ಈ ವರ್ಷ ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಏರಿಕೆಯಿಂದ ಆರಂಭವಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) ಪ್ರತಿ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರುಗಳ ಬೆಲೆಗಳನ್ನು ಪರಿಶೀಲಿಸುತ್ತದೆ ಮತ್ತು ಹೊಸ ದರಗಳನ್ನು ಪ್ರಕಟಿಸುತ್ತದೆ. ಅದೇ ರೀತಿ ಇಂದು ಕೂಡ ದರ ಪರಿಷ್ಕರಣೆ ಮಾಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ 19 ಕೆಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದೆ.

14.2 ಕೆಜಿ ಎಲ್‌ಪಿಜಿ  ಸಿಲಿಂಡರ್ ಬೆಲೆ ಹೆಚ್ಚಿಸಿಲ್ಲ (14.2 kg LPG cylinder price not increased):
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ವೆಬ್ ಸೈಟ್ (Web Site) ಪ್ರಕಾರ ದೆಹಲಿಯಲ್ಲಿ  14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ (LPG cylinders) ಬೆಲೆ 694 ರೂ., ಕೋಲ್ಕತ್ತಾದಲ್ಲಿ 720.50 ರೂ., ಮುಂಬೈನಲ್ಲಿ 694 ರೂ. ಮತ್ತು ಚೆನ್ನೈನಲ್ಲಿ 710 ರೂ. ಇದೆ.

ಇದನ್ನೂ ಓದಿ:  LPG Booking Through WhatsApp: ಇನ್ಮುಂದೆ ಈ ನಂಬರ್ ಗಳ ಮೂಲಕವೂ LPG ಸಿಲಿಂಡರ್ ಬುಕ್ ಮಾಡಬಹುದು

ಇದಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಎಲ್‌ಪಿಜಿಯ ಬೆಲೆಯನ್ನು ಎರಡು ಬಾರಿ ಹೆಚ್ಚಿಸಿತ್ತು. ಡಿಸೆಂಬರ್ 3 ರಂದು 50 ರೂ. ಹೆಚ್ಚಳ ಮಾಡಲಾಗಿತ್ತು. ಇದರ ನಂತರ ಡಿಸೆಂಬರ್ 15ರಂದು 50 ರೂ. ಹೆಚ್ಚಿಸಲಾಗಿತ್ತು. ಡಿಸೆಂಬರ್‌ನಲ್ಲಿ 14.2 ಕೆಜಿ ದೇಶೀಯ ಮತ್ತು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳಲ್ಲಿ ಸಬ್ಸಿಡಿ ಇಲ್ಲದೆ ಈ ಹೆಚ್ಚಳ ಮಾಡಲಾಗಿದೆ.

ಆದರೀಗ 19 ಕೆಜಿ ಎಲ್ಪಿಜಿ ಸಿಲಿಂಡರ್ ದುಬಾರಿಯಾಗಿದೆ  (19 kg LPG cylinder expensive):
 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ (GAS cylinders) ಬೆಲೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ವೆಬ್ ಸೈಟ್ (Web Site) ಪ್ರಕಾರ ದೆಹಲಿಯಲ್ಲಿ 1,349 ರೂ., ಇದು ಮೊದಲು 1,332 ರೂ. ಇತ್ತು. ಈಗ ಪ್ರತಿ ಸಿಲಿಂಡರ್‌ ಮೇಲೆ 17 ರೂ. ಏರಿಸಲಾಗಿದೆ. ಇತರ ಮೆಟ್ರೋ ನಗರಗಳಾದ ಕೋಲ್ಕತ್ತಾದಲ್ಲಿ ಇದರ ಬೆಲೆ 1,387.50 ರೂ.ನಿಂದ 22.50 ರೂ. ಏರಿಸಿ 1,410 ರೂ. ಮಾಡಲಾಗಿದೆ. ಮುಂಬೈಯಲ್ಲಿ ಇದು 1280.50 ರಿಂದ 1297.50 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಇದರ ಬೆಲೆ 1446.50 ರೂ.ಗಳಿಂದ 1463.50 ರೂ.ಗೆ ಏರಿಕೆಯಾಗಿದೆ.

ಇದನ್ನೂ ಓದಿ: LPG Cylinder ಮೇಲೆ ಪಡೆಯಿರಿ 500 ರೂ. ಕ್ಯಾಶ್‌ಬ್ಯಾಕ್

ಗ್ಯಾಸ್ ಸಿಲಿಂಡರ್‌ಗಳಿಗೆ ಸರ್ಕಾರ ಸಹಾಯಧನ ನೀಡುತ್ತದೆ (Government gives subsidy on gas cylinders) :
ವರ್ಷಕ್ಕೆ 14.2 ಕೆಜಿಯ 12 ಸಿಲಿಂಡರ್‌ಗಳನ್ನು ಸರ್ಕಾರ ಸಬ್ಸಿಡಿ ಬೆಲೆಗೆ ನೀಡುತ್ತದೆ. ಹೆಚ್ಚಿನ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬೇಕು. ತೈಲ ಕಂಪನಿಗಳು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರುಗಳ ಬೆಲೆಯನ್ನು ನಿಗದಿಪಡಿಸುತ್ತವೆ.

ಎಲ್‌ಪಿಜಿ ಬೆಲೆಗಳನ್ನು ನೀವು ಈ ರೀತಿ ಪರಿಶೀಲಿಸಬಹುದು (This is how you can check LPG prices):
ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಲು ನೀವು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಇಲ್ಲಿನ ಕಂಪನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಈ ಲಿಂಕ್‌ನಲ್ಲಿ, ನಿಮ್ಮ ನಗರ ಅನಿಲ ಸಿಲಿಂಡರ್‌ನ ಬೆಲೆಯನ್ನು ನೀವು ಪರಿಶೀಲಿಸಬಹುದು.

ಇದನ್ನೂ ಓದಿ: ಪ್ರತಿ ವಾರ ಬದಲಾಗಲಿದೆಯೇ LPG ಬೆಲೆ! ಇದರ ಸತ್ಯಾಸತ್ಯತೆ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News