New Tyre Design: ವಾಹನ ಸವಾರರಿಗೊಂದು ಕೆಲಸದ ಸುದ್ದಿ, ಅಕ್ಟೋಬರ್ 1 ರಿಂದ ಬದಲಾಗಲಿವೆ ನಿಮ್ಮ ವಾಹನಗಳ ಟೈರ್

New Tyre Design Rule 2022 - ಒಂದು ವೇಳೆ ನೀವೂ ಕೂಡ ವಾಹನದ ಮಾಲೀಕರಾಗಿದ್ದರೆ, ಈ ಸುದ್ದಿ ನಿಮಗಾಗಿ ಮತ್ತು ಇದನ್ನು ನೀವು ತಪ್ಪದೆ ಓದಲೇಬೇಕು, ಅಕ್ಟೋಬರ್ 1,  2022 ರಿಂದ ನಿಮ್ಮ ವಾಹನಗಳ ಟೈರ್ ವಿನ್ಯಾಸ ಬದಲಾಗಲಿದೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯಿದೆಯಲ್ಲಿ (ಎಂವಿಎ) ಹಲವು ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಟೈರ್ ವಿನ್ಯಾಸ ಕೂಡ ಶಾಮೀಲಾಗಿದೆ. ಅಕ್ಟೋಬರ್ 1 ರಿಂದ ಹೊಸ ವಿನ್ಯಾಸದ ಟೈರ್ ಗಳು ದೇಶದಲ್ಲಿ ಬರಲು ಪ್ರಾರಂಭಿಸಲಿವೆ.  

Written by - Nitin Tabib | Last Updated : Jul 10, 2022, 01:29 PM IST
  • ಒಂದು ವೇಳೆ ನೀವೂ ಕೂಡ ವಾಹನದ ಮಾಲೀಕರಾಗಿದ್ದರೆ,
  • ಈ ಸುದ್ದಿ ನಿಮಗಾಗಿ ಮತ್ತು ಇದನ್ನು ನೀವು ತಪ್ಪದೆ ಓದಲೇಬೇಕು,
  • ಅಕ್ಟೋಬರ್ 1, 2022 ರಿಂದ ನಿಮ್ಮ ವಾಹನಗಳ ಟೈರ್ ವಿನ್ಯಾಸ ಬದಲಾಗಲಿದೆ.
New Tyre Design: ವಾಹನ ಸವಾರರಿಗೊಂದು ಕೆಲಸದ ಸುದ್ದಿ, ಅಕ್ಟೋಬರ್ 1 ರಿಂದ ಬದಲಾಗಲಿವೆ ನಿಮ್ಮ ವಾಹನಗಳ ಟೈರ್ title=
New Tyre Design

New Motor Vehicle Act - ಒಂದು ವೇಳೆ ನೀವೂ ಕೂಡ ವಾಹನದ ಮಾಲೀಕರಾಗಿದ್ದರೆ, ಈ ಸುದ್ದಿ ನಿಮಗಾಗಿ ಮತ್ತು ಇದನ್ನು ನೀವು ತಪ್ಪದೆ ಓದಲೇಬೇಕು, ಅಕ್ಟೋಬರ್ 1,  2022 ರಿಂದ ನಿಮ್ಮ ವಾಹನಗಳ ಟೈರ್ ವಿನ್ಯಾಸ ಬದಲಾಗಲಿದೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯಿದೆಯಲ್ಲಿ (ಎಂವಿಎ) ಹಲವು ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಟೈರ್ ವಿನ್ಯಾಸ ಕೂಡ ಶಾಮೀಲಾಗಿದೆ. ಅಕ್ಟೋಬರ್ 1 ರಿಂದ ಹೊಸ ವಿನ್ಯಾಸದ ಟೈರ್ ಗಳು ದೇಶದಲ್ಲಿ ಬರಲು ಪ್ರಾರಂಭಿಸಲಿವೆ. ಆದರೆ ಹೊಸ ಟೈರ್ ಪಡೆಯಲು ಜನರಿಗೆ ಸಾಕಷ್ಟು ಸಮಯಾವಕಾಶ ನೀಡಲಾಗುವುದು, ಈ ಅವಕಾಶ ನಿಮಗೆ ಮಾರ್ಚ್ 31 ರವರೆಗೆ ಇರಲಿದೆ. ಈ ಹೊಸ ವಿನ್ಯಾಸದ ಟೈರ್‌ಗಳನ್ನು 1ನೇ ಏಪ್ರಿಲ್ 2023 ರಿಂದ ಪ್ರತಿ ವಾಹನದಲ್ಲಿ ಅಳವಡಿಸುವುದು ಕಡ್ಡಾಯವಾಗಿರಲಿದೆ. ಹಾಗೆ ಮಾಡಲು ವಿಫಲವಾದರೆ ಅದು ಕ್ರಮಕ್ಕೆ ಕಾರಣವಾಗಲಿದೆ. ಹೊಸ ನಿಯಮ ಏನೆಂದು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ.

ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆ
ಪ್ರಸ್ತುತ ನೀವು ಮಾರುಕಟ್ಟೆಯಿಂದ ಯಾವುದೇ ವಸ್ತುವನ್ನು ಖರೀದಿಸಿದಾಗ ಅಥವಾ ಸೇವೆಯನ್ನು ತೆಗೆದುಕೊಂಡಾಗ, ನೀವು ಅದರ ರೇಟಿಂಗ್ ಅನ್ನು ಸಹ ನೋಡುತ್ತೀರಿ ಎಂಬುದನ್ನು ನೀವು ಗಮನಿಸದೇ ಇರಬಹುದು, ಆದರೆ ಟೈರ್‌ಗಳ ವಿಷಯದಲ್ಲಿ ಇದು ಇದುವರೆಗೆ ಇರಲಿಲ್ಲ. ಮೋಟಾರು ವಾಹನ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಸರ್ಕಾರ ಇದೀಗ ಟೈರ್‌ಗಳಿಗೆ ಸ್ಟಾರ್ ರೇಟಿಂಗ್ ಅನ್ನು ಕಡ್ಡಾಯಗೊಳಿಸಿದೆ. ಹೊಸ ಸೌಲಭ್ಯದ ಅಡಿಯಲ್ಲಿ, ಗ್ರಾಹಕರು ಅದನ್ನು ಖರೀದಿಸುವ ಮೊದಲು ಟೈರ್‌ಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ.

ಟೈರ್ ಪ್ರಕಾರಗಳು
ಟೈರ್ ಗಳ ಬಗ್ಗೆ ಮಾತನಾಡುವುದಾದರೆ, ಟೈರ್ ಪ್ರಕಾರಗಳು ಯಾವುವು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ. ತಜ್ಞರ ಪ್ರಕಾರ, 3 ವಿಧದ ಟೈರ್ಗಳಿವೆ. ಮೊದಲನೆಯದು C1 ಮತ್ತು ಇದು ಪ್ರಯಾಣಿಕ ಕಾರಿಗೆ ಮೀಸಲಾಗಿದೆ. ಎರಡನೇಯದಾಗಿ C2 ಇದು ಸಣ್ಣ ವಾಣಿಜ್ಯ ವಾಹನಗಳಲ್ಲಿ ಬಳಸಲ್ಪಡುತ್ತದೆ. ಮೂರನೇ ವರ್ಗದ ಟೈರ್‌ಗಳು C3 ಆಗಿದ್ದು, ಇದನ್ನು ಭಾರೀ ವಾಣಿಜ್ಯ ವಾಹನಗಳಲ್ಲಿ ಬಳಸಲಾಗುತ್ತದೆ.

ವಿನ್ಯಾಸವನ್ನು ಬದಲಾಯಿಸುವ ಹಿಂದಿನ ಉದ್ದೇಶ
ಟೈರ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಾಡಿದ ಬದಲಾವಣೆಗಳ ಅಡಿಯಲ್ಲಿ, ಇದೀಗ ಟೈರ್‌ಗಳಿಗೆ ಮೂರು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಈ ಮೂರು ನಿಯತಾಂಕಗಳು ರೋಲಿಂಗ್ ರೇಸಿಸ್ಟೆನ್ಸ್, ವೇಟ್ ಗ್ರಿಪ್ ಮತ್ತು ರೋಲಿಂಗ್ ಸೌಂಡ್ ಎಮಿಶನ್ಸ್. ಟೈರ್ ಕಂಪನಿಗಳು ಇದೀಗ ಈ ಮೂರು ಮಾನದಂಡಗಳನ್ನು ಅನುಸರಿಸಬೇಕಾಗಲಿದೆ ಮತ್ತು ಬಿಐಎಸ್ ಮಾನದಂಡಗಳ ಆಧಾರದ ಮೇಲೆ ಟೈರ್‌ಗಳನ್ನು ತಯಾರಿಸಬೇಕು. ಹೊಸ ವ್ಯವಸ್ಥೆಯಿಂದ ತಯಾರಿಸಲಾಗುವ ಟೈರ್‌ಗಳು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರಲಿವೆ.

ಇದನ್ನು ಅರ್ಥಮಾಡಿಕೊಳ್ಳಿ
ನಾವು ಮೇಲೆಯೇ ಹೇಳಿದಂತೆ ಇನ್ಮುಂದೆ ಟೈರ್ ತಯಾರಕ ಕಂಪನಿಗಳು ಟೈರ್‌ಗಳನ್ನು 3 ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಜನರು ಈ ಮಾನದಂಡಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ.

>> ರೋಲಿಂಗ್ ರೆಸಿಸ್ಟೆನ್ಸ್- ರೋಲಿಂಗ್ ರೆಸಿಸ್ಟೆನ್ಸ್ ಎಂದರೆ ಕಾರು ಅಥವಾ ವಾಹನವನ್ನು ಎಳೆಯಲು ಅಥವಾ ಪುಲ್ ಮಾಡಲು ಬಳಸುವ ಶಕ್ತಿ. ಪ್ರತಿರೋಧ ಕಡಿಮೆಯಿದ್ದರೆ ಟೈರ್ ಹೆಚ್ಚು ಬಲವನ್ನು ಪ್ರಯೋಗಿಸಬೇಕಾಗುತ್ತದೆ.

ಇದನ್ನೂ ಓದಿ-Service Charge Ban: ನಿರಂತರ ದೂರುಗಳು ಬರುತ್ತಿವೆ, ಮಾರ್ಗಸೂಚಿಗಳನ್ನು ಅನುಸರಿಸದೆ ಹೋದ್ರೆ...? ಸರ್ಕಾರದ ಎಚ್ಚರಿಕೆ

>> ವೇಟ್ ಗ್ರಿಪ್- ಮಳೆಗಾಲದಲ್ಲಿ ಒದ್ದೆಯಾದ ರಸ್ತೆಯಲ್ಲಿ ಟೈರ್‌ಗಳು ತುಂಬಿಕೊಳ್ಳುವುದನ್ನು ನೀವು ನೋಡಿರಬಹುದು. ಇದರಿಂದ ಕೆಲವೊಮ್ಮೆ ಅಪಘಾತಗಳೂ ಸಂಭವಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ತೂಕದ ಹಿಡಿತದ ಮೇಲೆ ಹೆಚ್ಚಿನ ಗಮನವನ್ನು ನೀಡಲಾಗಿದೆ. ವೆಟ್ ಗ್ರಿಪ್ ಟೈರ್ ಮೇಲ್ಮೈ ಮತ್ತು ರೇಸ್ ಟ್ರ್ಯಾಕ್ ನಡುವಿನ ಘರ್ಷಣೆಯಾಗಿದೆ. ಹೊಸ ವಿನ್ಯಾಸದಲ್ಲಿ ಇದನ್ನು ಸುಧಾರಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ-Gold-Sliver Price: ಇಂದು ದೇಶದಲ್ಲಿ ಹೇಗಿದೆ ಚಿನ್ನ-ಬೆಳ್ಳಿ ದರ? ಇಲ್ಲಿದೆ ನೋಡಿ ಸಂಪೂರ್ಣ ವಿವರ

>> ರೋಲಿಂಗ್ ಸೌಂಡ್ ಎಮಿಷನ್ಸ್- ಟೈರ್ ಸ್ವಲ್ಪ ಹಳೆಯದಾದಾಗ ವಾಹನ ಚಾಲನೆಯಲ್ಲಿರುವಾಗ ಟೈರ್‌ನಿಂದ ಶಬ್ದ ಕೇಳುವುದನ್ನು ನೀವು ಗಮನಿಸಬಹುದು. ಇದರಿಂದ ಸಾಕಷ್ಟು ಶಬ್ದ ಉಂಟಾಗುತ್ತದೆ. ಈ ಹಿನ್ನೆಲೆ ಹೊಸ ವಿನ್ಯಾಸದಲ್ಲಿ ಕೆಲಸ ಮಾಡುವಂತೆ ಟೈರ್ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News