Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್

 Indian Railways New Rules: ಭಾರತೀಯ ರೈಲ್ವೆ ಹಲವು ಹೆಚ್ಚುವರಿ ಕೋಚ್‌ಗಳನ್ನು ಆರಂಭಿಸಲಿದೆ. ಇದರಲ್ಲಿ AC-3 ಟೈರ್ ನ ಎಕಾನೋಮಿ ಕ್ಲಾಸ್ ಕೂಡಾ ಸೇರಿದೆ.

Written by - Ranjitha R K | Last Updated : Aug 8, 2021, 10:54 AM IST
  • ಭಾರತೀಯ ರೈಲ್ವೆಯ ಹೊಸ ನಿಯಮ
  • ಟಿಕೆಟ್ ಮಾಡುವ ವೇಳೆ ಈ ಕೋಡ್ ನೆನಪಿರಲಿ
  • ಹೊಸ ಬುಕಿಂಗ್ ಕೋಡ್ ಕೋಚ್ ಕೋಡ್ ತಿಳಿಯಿರಿ
Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್  title=
ಭಾರತೀಯ ರೈಲ್ವೆಯ ಹೊಸ ನಿಯಮ (PHOTO ZEE NEWS)

ನವದೆಹಲಿ : Indian Railways New Rules: ರೈಲ್ವೆ ಪ್ರಯಾಣಿಕರಿಗೆ ಒಂದು ಪ್ರಮುಖ ಸುದ್ದಿ ಇದೆ. ಈಗ ರೈಲು ಟಿಕೆಟ್ ಕಾಯ್ದಿರಿಸುವಾಗ (Train ticket booking),  ಕೆಲವು ವಿಶೇಷ ಕೋಡ್ ಗಳನ್ನೂ ನೆನೆಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಟಿಕೆಟ್ ಬುಕ್ ಮಾಡುವ ವೇಳೆ  ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಭಾರತೀಯ ರೈಲ್ವೆ ಸೀಟುಗಳ ಬುಕಿಂಗ್ ಕೋಡ್ (booking code) ಮತ್ತು ಕೋಚ್ ಕೋಡ್ ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ರೈಲ್ವೆ ತನ್ನ ರೈಲುಗಳಲ್ಲಿ ಹೊಸ ರೀತಿಯ ಕೋಡ್ ಅನ್ನು ಪರಿಚಯಿಸಿದೆ. ಈ ಕೋಡ್ ಮೂಲಕ, ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವಾಗ ಆದ್ಯತೆಯ ಆಸನವನ್ನು ಆಯ್ಕೆ ಮಾಡಬಹುದು. 

ಟಿಕೆಟ್ ಕಾಯ್ದಿರಿಸುವಾಗ ಈ ಕೋಡ್ ನೆನಪಿರಲಿ : 
ಭಾರತೀಯ ರೈಲ್ವೆ (Indian Railway) ಹಲವು ಹೆಚ್ಚುವರಿ ಕೋಚ್‌ಗಳನ್ನು ಆರಂಭಿಸಲಿದೆ. ಇದರಲ್ಲಿ AC-3 ಟೈರ್ ನ ಎಕಾನೋಮಿ ಕ್ಲಾಸ್ ಕೂಡಾ ಸೇರಿದೆ.  ಈ ರೀತಿಯ ಕೋಚ್ ನಲ್ಲಿ 83 ಬರ್ತ್‌ಗಳಿರುತ್ತವೆ. ಇಲ್ಲಿಯವರೆಗೆ ಇಕಾನಮಿ ಕ್ಲಾಸ್‌ನ ಥರ್ಡ್ ಎಸಿ ಕೋಚ್‌ಗಳಲ್ಲಿ ಬುಕಿಂಗ್‌ಗೆ ಶುಲ್ಕವನ್ನು ನಿಗದಿಪಡಿಸಲಾಗಿಲ್ಲ.

ಇದನ್ನೂ ಓದಿ :  ಹೂಡಿಕೆದಾರರಿಗೆ ಭರ್ಜರಿ ಸಿಹಿ ಸುದ್ದಿ! ಮುಂದಿನ ವಾರ ಭಾರತದಲ್ಲಿ ಆರಂಭವಾಗಲಿವೆ 4 ಪ್ರಮುಖ IPO 

ವಿಸ್ಟಾಡೋಮ್ ಕೋಚ್ ತುಂಬಾ ವಿಶೇಷವಾಗಿದೆ : 
ವಾಸ್ತವವಾಗಿ, ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು, ರೈಲ್ವೇಸ್ ಈ ರೀತಿಯ ಕೋಚ್ ಅನ್ನು ಪರಿಚಯಿಸುತ್ತಿದೆ. ವಿಸ್ಟಾಡೋಮ್ ಕೋಚ್‌ನ (vistadome coach
 ) ಅತಿದೊಡ್ಡ ವೈಶಿಷ್ಟ್ಯವೆಂದರೆ ಪ್ರಯಾಣಿಕರು ರೈಲಿನಿಂದ ಹೊರಗಿನ ನೋಟವನ್ನು ನೋಡಬಹುದು. ಈ ಕೋಚ್‌ಗಳ ಚಾವಣಿಯು  ಗಾಜಿನಿಂದ ಕೂಡಿದೆ. ಪ್ರತಿಯೊಂದು ರಾಜ್ಯದಲ್ಲೂ ವಿಸ್ಟಾಡೋಮ್ ಕೋಚ್  ಇರುವ ಕನಿಷ್ಠ ಒಂದು ರೈಲು (Train) ಚಲಿಸಲಿದೆ. ಪ್ರಸ್ತುತ ಈ ವಿಸ್ಟಾಡೋಮ್ ಕೋಚ್ ಮುಂಬೈನ ದಾದರ್‌ನಿಂದ ಗೋವಾದ ಮಡಗಾಂವ್‌ ವೆರೆಗೆ ಚಲಿಸುತ್ತಿದೆ. 

ಏನಿದು ಹೊಸ ಬುಕಿಂಗ್ ಕೋಡ್ ಮತ್ತು ಕೋಚ್ ಕೋಡ್ : 

ಎಲ್ಲಾ ವಲಯಗಳ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಈ ಎಲ್ಲಾ ವರ್ಗಗಳ ಕೋಚ್‌ಗಳು ಮತ್ತು ಸೀಟುಗಳ ಕೋಡ್‌ಗಳ (Seat code) ಕುರಿತು ಸೂಚನೆ ನೀಡಲಾಗಿದೆ. ಯಾವ ಕೋಚ್ ನ ಬುಕಿಂಗ್ ಕೋಡ್ ಯಾವುದು ನೋಡೋಣ.. 

ಕೋಚ್ ಕ್ಲಾಸ್  ಬುಕಿಂಗ್ ಕೋಡ್  ಕೋಚ್ ಕೋಡ್
ವಿಸ್ಟಾಡೋಮ್   V.S           AC DV           
ಸ್ಲೀಪರ್    S.L.       S
ಎಸಿ ಚೇರ್ ಕಾರ್  C.C     C
ಥರ್ಡ್ ಎಸಿ  3A    B
ಎಸಿ ತ್ರೀ ಟೈರ್ ಇಕಾನಮಿ   3E M
ಸೆಕೆಂಡ್ ಎಸಿ   2A      A
ಗರಿಬ್ ರಥ ಎಸಿ ಟೈರ್   3A     G
ಗರಿಬ್ ರಥ್ ಚೇರ್ ಕಾರ್  CC J
ಫಸ್ಟ್ ಎಸಿ  1A     H
ಎಕ್ಸಿಕ್ಯುಟಿವ್ ಕ್ಲಾಸ್  E.C    E
ಅನುಭವಿ ಕ್ಲಾಸ್   E.A         K
ಫಸ್ಟ್ ಕ್ಲಾಸ್   F.C F
ವಿಸ್ಟಾಡೋಮ್ ಎಸಿ  E.V EV

ಇದನ್ನೂ ಓದಿ : Crypto Currencyಗಳ ಹೆಚ್ಚಾಗುತ್ತಿರುವ ಪ್ರಭಾವದ ಕುರಿತು ಆತಂಕ ವ್ಯಕ್ತಪಡಿಸಿದ IMF ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News