ಈ ತಿಂಗಳು ಮಾರುಕಟ್ಟೆಗೆ ಬರಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್

iVOOMi Energy Electric Scooter: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ iVOOMi ಎನರ್ಜಿ ತನ್ನ ಎಸ್1 ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಬುಕ್ಕಿಂಗ್ ಆರಂಭಿಸಿದೆ. ಕಂಪನಿಯು ಜೂನ್ ಮಧ್ಯದಿಂದ ತನ್ನ ವಿತರಣೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಈ ಸ್ಕೂಟರ್‌ನಲ್ಲಿ ಲಿ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ, ಇದು ಬೇಗನೆ ಚಾರ್ಜ್ ಆಗುತ್ತದೆ ಎನ್ನಲಾಗಿದೆ.

Written by - Yashaswini V | Last Updated : Jun 1, 2022, 09:57 AM IST
  • ಕಂಪನಿಯು ತನ್ನ ಎಸ್1 ಇ-ಸ್ಕೂಟರ್ ಬುಕ್ಕಿಂಗ್ ಅನ್ನು ಮೇ 30 ರಿಂದ ಪ್ರಾರಂಭಿಸಿದೆ
  • ಮಹಾರಾಷ್ಟ್ರ ಮೂಲದ ಕಂಪನಿಯು ಈ ವರ್ಷದ ಮಾರ್ಚ್‌ನಲ್ಲಿ ಎರಡು ಇ-ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡಿತ್ತು
  • ಕಂಪನಿಯು ಎಸ್1 ಮತ್ತು ಜೀತ್‌ನ ಎರಡು ರೂಪಾಂತರಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು
ಈ ತಿಂಗಳು ಮಾರುಕಟ್ಟೆಗೆ ಬರಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ title=
iVOOMi Energy Electric Scooter

iVOOMi ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್:  ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ iVOOMi ಎನರ್ಜಿ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಜೂನ್ ಮಧ್ಯದಿಂದ ತನ್ನ ವಿತರಣೆಯನ್ನು ಪ್ರಾರಂಭಿಸುವುದಾಗಿ ಮಾಹಿತಿ ನೀಡಿದೆ. ಅದೇ ಸಮಯದಲ್ಲಿ, ಈ ಸ್ಕೂಟರ್ ಅನ್ನು ಖರೀದಿಸಲು ಇಷ್ಟಪಡುವ ಜನರಿಗಾಗಿ ಅದರ ಬುಕಿಂಗ್ ಅನ್ನು ಪ್ರಾರಂಭಿಸಲಾಗಿದೆ. 

ಕಂಪನಿಯು ತನ್ನ ಎಸ್1 ಇ-ಸ್ಕೂಟರ್ ಬುಕ್ಕಿಂಗ್ ಅನ್ನು ಮೇ 30 ರಿಂದ ಪ್ರಾರಂಭಿಸಿದೆ ಮತ್ತು ಜೂನ್ ಮಧ್ಯದಿಂದ ವಿತರಣೆಯನ್ನು ಪ್ರಾರಂಭಿಸುತ್ತದೆ. ಮಹಾರಾಷ್ಟ್ರ ಮೂಲದ ಕಂಪನಿಯು ಈ ವರ್ಷದ ಮಾರ್ಚ್‌ನಲ್ಲಿ ಎರಡು ಇ-ಸ್ಕೂಟರ್ ಮಾದರಿಗಳು ಎಸ್1 ಮತ್ತು ಜೀತ್‌ನ ಎರಡು ರೂಪಾಂತರಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಜೀತ್ ಬೆಲೆ ರೂ 82,990 ಮತ್ತು ಜೀತ್ ಪ್ರೊ ಬೆಲೆ ರೂ 95,990 ಆಗಿದೆ. ಅದೇ ಸಮಯದಲ್ಲಿ, ಎಸ್1 ನ ಬೆಲೆಯನ್ನು 84,999 ರೂ. ನಿಗದಿಗೊಳಿಸಲಾಗಿದೆ. ಕಂಪನಿಯ  ಎಸ್1 ಇ-ಸ್ಕೂಟರ್ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ಐಸಿಎಟಿ) ನಿಂದ ಅನುಮೋದನೆ ಪಡೆದಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.  

ಇದನ್ನೂ ಓದಿ- LPG Price 1 June: ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

ಸ್ಕೂಟರ್ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಗೇಮ್ ಚೇಂಜರ್ ಆಗಲಿದೆ:
ಎಸ್1 ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಗೇಮ್ ಚೇಂಜರ್ ಎಂದು ಸಾಬೀತುಪಡಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ಮತ್ತು ನಮ್ಮ ಘನ-ಸ್ಥಿತಿಯ ಎಲೆಕ್ಟ್ರಿಕ್ ಕಾರ್ಯಕ್ಷಮತೆಯನ್ನು ಪ್ರದರ್ಶಿಸಲು ನಾವು ಇದನ್ನು ಒಂದು ಅವಕಾಶವಾಗಿ ನೋಡುತ್ತೇವೆ ಎಂದು iVOOMi ಎನರ್ಜಿಯ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಸುನಿಲ್ ಬನ್ಸಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಇದರಲ್ಲಿ ಅಳವಡಿಸಲಾಗಿರುವ ಮೋಟಾರ್, ಇದು ಅತ್ಯುತ್ತಮ ಚಾಲನಾ ಅನುಭವ ಮತ್ತು ದಕ್ಷತೆಯನ್ನು ಒದಗಿಸುತ್ತದೆ ಎಂದೂ ಸಹ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ, ಎಸ್1 2kW ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಿದೆ, ಇದು ಗಂಟೆಗೆ 50-54 ಕಿಲೋಮೀಟರ್ ವೇಗವನ್ನು ಒದಗಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ 60V, 2kWh ಸ್ವ್ಯಾಪ್ ಮಾಡಬಹುದಾದ Li-ion ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು ಬ್ಯಾಟರಿಯನ್ನು ಕಡಿಮೆ ಸಮಯದಲ್ಲಿ ಚಾರ್ಜ್ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- PM Kisan Update: ಪಿಎಂ ಕಿಸಾನ್ ಯೋಜನೆಯ 11 ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಟೆಸ್ಟ್ ಡ್ರೈವಿಂಗ್: 
ಕಂಪನಿಯ ಪ್ರಕಾರ, ಇದು ಸಂಪೂರ್ಣವಾಗಿ ಚಾರ್ಜ್ ಆಗಲು 3-4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಒಮ್ಮೆ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ಬಳಿಕ ಇದು 100 ಕಿಮೀ ವರೆಗೆ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಪುಣೆ, ನಾಗ್ಪುರ, ಗೊಂಡಿಯಾ, ಮುಂಬೈ, ನಾಂದೇಡ್, ಕೊಲ್ಹಾಪುರ, ಇಚಲಕರಂಜಿ, ಅಹ್ಮದ್‌ನಗರ, ಸೂರತ್, ಭಾವನಗರ, ಆದಿಪುರ, ಕಚ್‌ನಂತಹ ನಗರಗಳ ಹಲವಾರು ಟಚ್‌ಪಾಯಿಂಟ್‌ಗಳಲ್ಲಿ ಮೇ 28 ರಿಂದ ತನ್ನ ವಾಹನವು ಟೆಸ್ಟ್ ಡ್ರೈವಿಂಗ್ ಗಾಗಿ  ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಈ ಇ-ಸ್ಕೂಟರ್‌ನ ಟೆಸ್ಟ್ ರೈಡ್ ಅನ್ನು 749 ರೂ.ಗೆ ಮುಂಗಡವಾಗಿ ಬುಕ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News