Debit Card Safety Tips: ಡೆಬಿಟ್ ಕಾರ್ಡ್ ಬಳಸುವಾಗ ಎಂದಿಗೂ ಈ ತಪ್ಪು ಮಾಡಬೇಡಿ..!

ಡೆಬಿಟ್ ಕಾರ್ಡ್ ಸುರಕ್ಷತೆ: ವಹಿವಾಟು ಮಾಡುವಾಗ ನಿಮ್ಮ ಸುರಕ್ಷತೆಗಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳನ್ನು ಪೂರೈಸಲು, ನಿಮ್ಮ ವೈಯಕ್ತಿಕ ಭದ್ರತೆ ಹೆಚ್ಚಿಸಲು, ವಂಚನೆ ಮತ್ತು ಕಳ್ಳತನದ ಅಪಾಯ ಕಡಿಮೆ ಮಾಡಲು ವಿಶೇಷ ಕಾಳಜಿ ವಹಿಸಿಕೊಳ್ಳಬೇಕು.

Written by - Puttaraj K Alur | Last Updated : Jun 4, 2023, 04:40 PM IST
  • ಡೆಬಿಟ್ ಕಾರ್ಡ್‌ಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬುದನ್ನು ತಿಳಿಯುವುದು ಮುಖ್ಯ
  • ವಹಿವಾಟು ನಡೆಸುವಾಗ ಸ್ವಂತ ಸುರಕ್ಷತೆಗಾಗಿ ಎಚ್ಚರಿಕೆ ವಹಿಸುವುದು ನಿಮ್ಮ ಹಿತಾಸಕ್ತಿಯಾಗಿದೆ
  • ಡೆಬಿಟ್ ಕಾರ್ಡ್ ಬಳಕೆ ವೇಳೆ ಸ್ವಲ್ಪ ಎಚ್ಚರ ತಪ್ಪಿದ್ರೂ ನಿಮಗೆ ತೊಂದರೆ ತಪ್ಪಿದ್ದಲ್ಲ
Debit Card Safety Tips: ಡೆಬಿಟ್ ಕಾರ್ಡ್ ಬಳಸುವಾಗ ಎಂದಿಗೂ ಈ ತಪ್ಪು ಮಾಡಬೇಡಿ..! title=
ಡೆಬಿಟ್ ಕಾರ್ಡ್ ಸುರಕ್ಷತೆ

ನವದೆಹಲಿ: ಡೆಬಿಟ್ ಕಾರ್ಡ್‌ಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬುದನ್ನು ತಿಳಿಯುವ ಮೂಲಕ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ರಕ್ಷಿಸಬಹುದು. ವಹಿವಾಟು ನಡೆಸುವಾಗ ಸ್ವಂತ ಸುರಕ್ಷತೆಗಾಗಿ ಎಚ್ಚರಿಕೆ ವಹಿಸುವುದು ನಿಮ್ಮ ಹಿತಾಸಕ್ತಿಯಾಗಿದೆ. ನಿಮ್ಮ ಎಲ್ಲಾ ಹಣಕಾಸಿನ ಅಗತ್ಯ ಪೂರೈಸಲು, ವೈಯಕ್ತಿಕ ಭದ್ರತೆ ಹೆಚ್ಚಿಸಲು, ವಂಚನೆ ಮತ್ತು ಗುರುತಿನ ಕಳ್ಳತನದ ಅಪಾಯ ಕಡಿಮೆ ಮಾಡಲು ನೀವು ಹೆಚ್ಚಿನ ಕಾಳಜಿ ವಹಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ನಾವು ನಿಮಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಮೂಲಕ ನೀವು ಡೆಬಿಟ್ ಕಾರ್ಡ್ ಅನ್ನು ಸುರಕ್ಷಿತವಾಗಿರಿಸಬಹುದು.

ಇದನ್ನೂ ಓದಿ: Edible Oil Price: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ ಈ ರಾಜ್ಯ ಸರ್ಕಾರ, ಇಲ್ಲಿದೆ ಲೇಟೆಸ್ಟ್ ದರ

ನಿಮ್ಮ ಡೆಬಿಟ್ ಕಾರ್ಡ್ ರಕ್ಷಿಸುವುದು ಹೇಗೆ?

- ನಿಮ್ಮ ಪಿನ್ ನೆನಪಿಡಿ. ಡೆಬಿಟ್ ಕಾರ್ಡ್‌ ಮೇಲೆ ಮತ್ತು ಬೇರೆಲ್ಲಿಯೂ ಅದನ್ನು ಬರೆಯಬೇಡಿ.

- ನಿಮ್ಮ ಕಾರ್ಡ್‌ಗಳನ್ನು ನಗದು ಇದ್ದಂತೆ ರಕ್ಷಿಸಿ.

- ಎಟಿಎಂನಲ್ಲಿ ವಹಿವಾಟು ಮಾಡುವಾಗ ನಿಮ್ಮ ರಸೀದಿಯನ್ನು ತೆಗೆದುಕೊಳ್ಳಿ. ಇದಲ್ಲದೆ ನೀವು ಹೊರಗೆ ಯಾವುದೇ ವಹಿವಾಟು ನಡೆಸಿದರೆ ಅಲ್ಲಿಯೂ ರಶೀದಿಯನ್ನು ಪಡೆಯಿರಿ.

- ಕಾರ್ಡ್ ಕಳೆದುಹೋದರೆ ಅಥವಾ ಕಳ್ಳತನವಾದರೆ ತಕ್ಷಣವೇ ವರದಿ ಮಾಡಿ. ಈ ಮಾಹಿತಿಯನ್ನು ಬ್ಯಾಂಕಿಗೂ ನೀಡಿ.

- ವಹಿವಾಟು ಮಾಡುವಾಗ ನಿಮ್ಮ ಕಾರ್ಡ್ ಮೇಲೆ ಕಣ್ಣಿಡಿ. ನಿಮ್ಮ ಕಾರ್ಡ್ ಅನ್ನು ಯಾರಿಗಾದರೂ ನೀಡುವುದು ಅವರಿಗೆ ನಗದು ನೀಡಿದಂತೆ ಆದ್ದರಿಂದ ನಿಮ್ಮ ಕಾರ್ಡ್ ಅನ್ನು ಯಾವಾಗಲೂ ನಿಮ್ಮೊಂದಿಗೆ ಕೊಂಡೊಯ್ಯಿರಿ.

- ಪ್ರತಿ ಖರೀದಿಯ ನಂತರ ನೀವು ನಿಮ್ಮ ಕಾರ್ಡ್ ಅನ್ನು ವಾಪಸ್ ತೆಗೆದುಕೊಳ್ಳಿರಿ. ವಹಿವಾಟಿನ ಸಮಯದಲ್ಲಿ ಯಾವುದೇ ಚಟುವಟಿಕೆಯು ನಿಮ್ಮನ್ನು ಚಿಂತೆಗೀಡುಮಾಡಿದರೆ, ವರದಿ ಮಾಡಲು ತಕ್ಷಣವೇ ಬ್ಯಾಂಕ್‌ಗೆ ಕರೆ ಮಾಡಿ.

- ಕಾಲಕಾಲಕ್ಕೆ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸುತ್ತಿರಿ.

- ಅನುಮಾನಾಸ್ಪದವಾಗಿ ಕಾಣುವ ಯಾವುದೇ ಸ್ಥಳದಲ್ಲಿ ಡೆಬಿಟ್ ಕಾರ್ಡ್ ಅನ್ನು ಎಂದಿಗೂ ಸ್ವೈಪ್ ಮಾಡಬೇಡಿ.

- ನಿಮ್ಮ ಕಾರ್ಡ್ ಅನ್ನು ಯಾರಿಗೂ ಕೊಡಬೇಡಿ. ನಿಮ್ಮ ಡೆಬಿಟ್ ಕಾರ್ಡ್ ಅನ್ನು ಎಂದಿಗೂ ಕಾಣದಂತೆ ಬಿಡಬೇಡಿ.

- ಆನ್‌ಲೈನ್ ವಹಿವಾಟುಗಳನ್ನು ಮಾಡುವಾಗ ನಿಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಎಲ್ಲಿಯಾದರೂ ಸೇವ್‍ ಮಾಡುವ ಮೊದಲು, ವೆಬ್‌ಸೈಟ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿರಿ.

ಹೀಗೆ ಮಾಡಿದ್ರೆ ನೀವು ಡೆಬಿಟ್ ಕಾರ್ಡ್ ವಂಚನೆಯಿಂದ ಪಾರಾಗುತ್ತೀರಿ. ನೀವು ಯಾವುದೇ ರೀತಿ ಹಣದ ವಂಚನೆಗೆ ಬಲಿಯಾಗುವುದಿಲ್ಲ.

ಇದನ್ನೂ ಓದಿ: Hero ಕಂಪನಿಯ ಹೊಸ 100ಸಿಸಿ ಬೈಕ್, ಬೆಲೆ ಕೇವಲ 60 ಸಾವಿರ ಮಾತ್ರ, ಮೈಲೆಜ್ ಕೂಡ ಜಬ್ಬರ್ದಸ್ತ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News