Mutual Fund vs SSY : ಹೆಣ್ಣು ಮಗುವಿಗೆ ಉತ್ತಮ ಉಳಿತಾಯ ಯೋಜನೆ ಯಾವುದು?

Mutual Fund v/s SSY : ನಿಮ್ಮ ಮಗಳಿಗೆ ಯಾವ ಯೋಜನೆ ಉತ್ತಮ ಎನ್ನುವುದನ್ನು ತಿಳಿ ದುಕೊಳ್ಳುವುದರಲ್ಲಿ ನೀವು ಗೊಂದಲಕ್ಕೊಳಗಾಗಿದ್ದರೆ, ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ. 

Written by - Ranjitha R K | Last Updated : Jan 25, 2024, 01:02 PM IST
  • SSY ಯಲ್ಲಿ ಹೂಡಿಕೆ ಮಾಡಿದರೆ ಸಿಗುವ ಬಡ್ಡಿ ಮೊತ್ತ ಎಷ್ಟು ?
  • ಸುಕನ್ಯಾ ಸಮೃದ್ಧಿ ಯೋಜನೆ VS ಇಕ್ವಿಟಿ ಮ್ಯೂಚುಯಲ್ ಫಂಡ್
  • ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳ ಆದಾಯ
Mutual Fund vs SSY : ಹೆಣ್ಣು ಮಗುವಿಗೆ ಉತ್ತಮ ಉಳಿತಾಯ ಯೋಜನೆ ಯಾವುದು?  title=

Mutual Fund v/s SSY : ನಿಮಗೂ  ಹೆಣ್ಣು ಮಗಳಿದ್ದು, ಅವಳ ಭವಿಷ್ಯದ ಬಗ್ಗೆ ಚಿಂತೆ  ಕಾಡುತ್ತಿದ್ದರೆ ಇನ್ನು ನಿರಾಳವಾಗಿರಿ. ಇಂದಿನ ಕಾಲದಲ್ಲಿ, ಹೂಡಿಕೆಗಾಗಿ ಅನೇಕ ಯೋಜನೆಗಳನ್ನು  ಜಾರಿಗೆ ತರಲಾಗಿದೆ. ಈ ಯೋಜಬೇಗಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳ ಭವಿಷ್ಯವನ್ನು  ಸುಭದ್ರವಾಗಿ ಇರಿಸಬಹುದು. 

ಸರ್ಕಾರದ ಯೋಜನೆಗಳ ಜೊತೆಗೆ ಹಣವನ್ನು ಮ್ಯೂಚುವಲ್ ಫಂಡ್‌ಗಳಲ್ಲಿಯೂ ಹೂಡಿಕೆ ಮಾಡಬಹುದು.ಆದರೆ, ನಿಮ್ಮ ಮಗಳಿಗೆ ಯಾವ ಯೋಜನೆ ಉತ್ತಮ ಎನ್ನುವುದನ್ನು ತಿಳಿ ದುಕೊಳ್ಳುವುದರಲ್ಲಿ ನೀವು ಗೊಂದಲಕ್ಕೊಳಗಾಗಿದ್ದರೆ, ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ. ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ  ಹೆಚ್ಚು ಆದಾಯ ಸಿಗುತದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ. 

ಇದನ್ನೂ ಓದಿ : ಅಯೋಧ್ಯೆಯ ರಾಮ ಮಂದಿರ ನೀಡಲಿದೆಯೇ ಭಾರತದ 6.8% ಪ್ರವಾಸೋದ್ಯಮ ಜಿಡಿಪಿಗೆ ಉತ್ತೇಜನ?

SSY ಯಲ್ಲಿ ಹೂಡಿಕೆ ಮಾಡಿದರೆ ಸಿಗುವ ಬಡ್ಡಿ ಮೊತ್ತ ಎಷ್ಟು ?: 
ಪ್ರಸ್ತುತ, ಸುಕನ್ಯಾ ಸಮೃದ್ದಿ ಯೋಜನೆಯು (SSY) 8.2 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಈ ಬಡ್ಡಿಯನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಖಾತೆಗೆ ವರ್ಗಾಯಿಸುತ್ತದೆ.   ಸರ್ಕಾರ ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಿಸುತ್ತದೆ.ಈ ಸರ್ಕಾರಿ ಯೋಜನೆಯನ್ನು ವರ್ಷಕ್ಕೆ ಕೇವಲ 250 ರೂಗಳಲ್ಲಿ ಪ್ರಾರಂಭಿಸಬಹುದು. ಈ ಖಾತೆಯನ್ನು ಮಗುವಿನ ಹುಟ್ಟಿನಿಂದ 10 ವರ್ಷದವರೆಗೆ ಯಾವಾಗ ಬೇಕಾದರೂ ತೆರೆಯಬಹುದು. ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 1.50 ಲಕ್ಷ ರೂ.ಯನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 

ಸುಕನ್ಯಾ ಸಮೃದ್ಧಿ ಯೋಜನೆ VS ಇಕ್ವಿಟಿ ಮ್ಯೂಚುಯಲ್ ಫಂಡ್:
ಸುಕನ್ಯಾ ಸಮೃದ್ಧಿ ಯೋಜನೆ (SSY) ಒಂದು ಸರ್ಕಾರಿ ಯೋಜನೆಯಾಗಿದ್ದು, ಸ್ಥಿರ ಆದಾಯ ಒದಗಿಸುತ್ತದೆ. ಆದರೆ ಮ್ಯೂಚುಯಲ್ ಫಂಡ್ ನಿಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಾಧನವಾಗಿದೆ. ಇದರಲ್ಲಿ ಅಪಾಯವಿದೆ. ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ, ನಿಮ್ಮ ಮಗಳಿಗೆ 21 ವರ್ಷ ತುಂಬುವವರೆಗೆ, ಅಂದರೆ ಲಾಕ್-ಇನ್ ಅವಧಿಯವರೆಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ :  ಭಾರತದಲ್ಲಿ ಚಿನ್ನದ ದರದಲ್ಲಿ ಕುಸಿತ: ನಿಮ್ಮ ನಗರದ ಇಂದಿನ 24 ಕ್ಯಾರೆಟ್‌ ಬೆಲೆ ಪರಿಶೀಲಿಸಿ!

ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳ ಆದಾಯ:
AMFI ಡೇಟಾ ಪ್ರಕಾರ, ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳು ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಬಹಳ ದೊಡ್ಡ ಮಟ್ಟದ ಆದಾಯವನ್ನು ಒದಗಿಸಿವೆ. ನಿಪ್ಪಾನ್ ಇಂಡಿಯಾ ಮೌಲ್ಯ ನಿಧಿಯು ಶೇಕಡಾ 42.38 ರಷ್ಟು ಆದಾಯ ನೀಡಿದರೆ, ಆದಿತ್ಯ ಬಿರ್ಲಾ ಸನ್ ಲೈಫ್ ಪ್ಯೂರ್ ವ್ಯಾಲ್ಯೂ ಫಂಡ್ ಶೇ.43.02ರಷ್ಟು ಆದಾಯ ನೀಡಿದೆ. ಆದರೆ, ಆಕ್ಸಿಸ್ ವ್ಯಾಲ್ಯೂ ಫಂಡ್ ಶೇಕಡಾ 40.16 ಮತ್ತು ಎಸ್‌ಬಿಐ ಲಾಂಗ್ ಟರ್ಮ್ ಇಕ್ವಿಟಿ ಫಂಡ್ ಶೇಕಡಾ 40 ರವರೆಗಿನ್ ಆದಾಯ ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News