Elon Musk: ಎಲೋನ್‌ ಮಸ್ಕ್‌ ಟ್ವಿಟ್ಟರ್‌ ಅಕೌಂಟ್‌ನ ಅರ್ಧದಷ್ಟು ಫಾಲೋವರ್ಸ್‌ ಫೇಕ್‌..!?

SparkToro ಎಂಬ ಆಡಿಟ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಎಲಾನ್‌ ಮಸ್ಕ್‌ ಅವರ ಅಕೌಂಟ್‌ನಲ್ಲಿ 90.3 ಮಿಲಿಯನ್‌ ಫಾಲೋವರ್ಸ್‌ ಇದ್ದು, ಅದರಲ್ಲಿ ಶೇ.53.3ರಷ್ಟು ಅಕೌಂಟ್‌ಗಳು ಸ್ಪ್ಯಾಮ್ ಖಾತೆಗಳು ಮತ್ತು ಸಕ್ರಿಯವಾಗಿಲ್ಲದ ಖಾತೆಗಳು ಎಂದು ತಿಳಿದುಬಂದಿದೆ. ಆದರೆ ಈ ಸರ್ವೇ ಎಷ್ಟರ ಮಟ್ಟಿಗೆ ನಿಜ ಎಂದು ಹೇಳಲು ಸಾಧ್ಯವಿಲ್ಲ. 

Written by - Bhavishya Shetty | Last Updated : May 3, 2022, 12:56 PM IST
  • ಎಲೋನ್‌ ಮಸ್ಕ್‌ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಫೇಕ್‌ ಫಾಲೋವರ್ಸ್‌
  • ಶೇ. 53.3ರಷ್ಟು ಅಕೌಂಟ್‌ ಫೇಕ್‌ ಎಂದ ವರದಿ
  • ಆನ್‌ಲೈನ್‌ ಎಡಿಟಿಂಗ್‌ ಟೂಲ್‌ ಬಹಿರಂಗ
Elon Musk: ಎಲೋನ್‌ ಮಸ್ಕ್‌ ಟ್ವಿಟ್ಟರ್‌ ಅಕೌಂಟ್‌ನ ಅರ್ಧದಷ್ಟು ಫಾಲೋವರ್ಸ್‌ ಫೇಕ್‌..!? title=
Elon Musk

ಅಮೇರಿಕನ್ ಬಿಲಿಯನೇರ್ ಮತ್ತು ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಮಾಲೀಕರಾಗಿದ್ದಾರೆ. ಪ್ರತಿ ಷೇರಿಗೆ 54.20 ಡಾಲರ್​ನಂತೆ 44 ಶತಕೋಟಿ ಡಾಲರ್​ ನೀಡಿ ಟ್ವಿಟರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ ಟ್ವಿಟ್ಟರ್‌ ಮಾಲೀಕನ ಖಾತೆಯಲ್ಲಿಯೇ ಅರ್ಧಕ್ಕಿಂತ ಹೆಚ್ಚು ಅಕೌಂಟ್‌ಗಳು ಫೇಕ್‌ ಎಂದು ಆನ್‌ಲೈನ್‌ ಎಡಿಟಿಂಗ್‌ ಟೂಲ್‌ ಬಹಿರಂಗಪಡಿಸಿದೆ. 

ಇದನ್ನು ಓದಿ: Rahul Gandhi: ನೈಟ್‌ ಪಾರ್ಟಿ ಮೂಡ್‌ನಲ್ಲಿ ರಾಹುಲ್‌ ಗಾಂಧಿ... ವೈರಲ್‌ ಆಗ್ತಿದೆ ವಿಡಿಯೋ

SparkToro ಎಂಬ ಆಡಿಟ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಎಲೋನ್ ಮಸ್ಕ್ ಅವರ ಅಕೌಂಟ್‌ನಲ್ಲಿ 90.3 ಮಿಲಿಯನ್‌ ಫಾಲೋವರ್ಸ್‌ ಇದ್ದು, ಅದರಲ್ಲಿ ಶೇ.53.3ರಷ್ಟು ಅಕೌಂಟ್‌ಗಳು ಸ್ಪ್ಯಾಮ್ ಖಾತೆಗಳು ಮತ್ತು ಸಕ್ರಿಯವಾಗಿಲ್ಲದ ಖಾತೆಗಳು ಎಂದು ತಿಳಿದುಬಂದಿದೆ. ಆದರೆ ಈ ಸರ್ವೇ ಎಷ್ಟರ ಮಟ್ಟಿಗೆ ನಿಜ ಎಂದು ಹೇಳಲು ಸಾಧ್ಯವಿಲ್ಲ. 

ಎಲೋನ್‌ ಮಸ್ಕ್‌ರನ್ನು ಫಾಲೋ ಮಾಡುವ 1 ಲಕ್ಷ ಖಾತೆಗಳಲ್ಲಿ 2 ಸಾವಿರ ಖಾತೆಗಳನ್ನು ಮಾದರಿಯಾಗಿ ತೆಗೆದುಕೊಂಡು ಈ ಸರ್ವೆ ನಡೆಸಲಾಗಿದೆ. ಈ ವಿಶ್ಲೇಷಣೆ ನಡೆಸುವಾಗ ಅದರಲ್ಲಿ ಶೇ. 25 ರಷ್ಟು ಮಂದಿಯ ಖಾತೆಗಳು ಸ್ಪ್ಯಾಮ್ ಮತ್ತು ಸಕ್ರಿಯವಾಗಿಲ್ಲದ ಖಾತೆಗಳಾಗಿದ್ದವು ಎಂದು SparkToro ತಿಳಿಸಿದೆ. 

ಇದನ್ನು ಓದಿ: ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟರ್ ಭವಿಷ್ಯ ಅಸ್ಪಷ್ಟ.. ಸಿಇಒ ಪರಾಗ್ ಅಗರವಾಲ್ ಹೀಗೆಂದಿದ್ದೇಕೆ?

ಇನ್ನು ಎಲಾನ್ ಮಸ್ಕ್ ಅವರು ವಿಶ್ವದ ಶ್ರೀಮಂತ ಉದ್ಯಮಿ. ಟೆಸ್ಲಾ ಕಂಪನಿಯ ಮಾಲೀಕರಾಗಿರುವ ಅವರು ಇತ್ತೀಚೆಗೆ ಟ್ವಿಟ್ಟರ್‌ ಸಂಸ್ಥೆಯ ಒಡೆತನವನ್ನು ಸಾಧಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News