ಜುಲೈ 20ಕ್ಕೆ ಹೊರಬೀಳಲಿದೆಯಾ ಈ ನಿರ್ಧಾರ? ಲಕ್ಷಾಂತರ ಜನರಿಗೆ ಸಿಗಲಿದೆ ಅದರ ಲಾಭ!

Modi Government: ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರದ ಪರವಾಗಿ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.(Business News In Kannada) ಸದ್ಯಕ್ಕೆ ಪಿಂಚಣಿದಾರರು ಕನಿಷ್ಠ ಪಿಂಚಣಿ ಮೊತ್ತ ಹೆಚ್ಚಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.  

Written by - Nitin Tabib | Last Updated : Jul 19, 2023, 06:49 PM IST
  • ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಪಿಂಚಣಿ ಯೋಜನೆ ಇಪಿಎಸ್-95 ಅಡಿಯಲ್ಲಿ ಬರುವ ಪಿಂಚಣಿದಾರರಿಗೆ
  • ಕನಿಷ್ಠ ಪಿಂಚಣಿ ಸೇರಿದಂತೆ ಇತರೆ ಬೇಡಿಕೆಗಳಿಗಾಗಿ ಪಿಂಚಣಿದಾರರು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
  • ಪ್ರಸ್ತುತ, ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ರೂ 1,000 ಪಿಂಚಣಿ ನಿಗದಿಪಡಿಸಲಾಗಿದೆ.
ಜುಲೈ 20ಕ್ಕೆ ಹೊರಬೀಳಲಿದೆಯಾ ಈ ನಿರ್ಧಾರ? ಲಕ್ಷಾಂತರ ಜನರಿಗೆ ಸಿಗಲಿದೆ ಅದರ ಲಾಭ! title=

ನವದೆಹಲಿ: ಪ್ರಸ್ತುತ ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೌಕರವರ್ಗದ ಬೇಡಿಕೆ ಇರುವುದು ನಿಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ನೀವೂ ಪಿಂಚಣಿ ಲಾಭ ಪಡೆಯುತ್ತಿದ್ದರೆ, ಈ ಪ್ರಮುಖ ಸುದ್ದಿ ಕೇವಲ ನಿಮಗಾಗಿ ಮಾತ್ರ.  ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರದ (Minimum Pension Update) ಪರವಾಗಿ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ಪಿಂಚಣಿದಾರರು ಕನಿಷ್ಠ ಪಿಂಚಣಿ ಮೊತ್ತ ಹೆಚ್ಚಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

2014 ರಲ್ಲಿ ಜಾರಿಗೆ ತರಲಾಯಿತು
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಪಿಂಚಣಿ ಯೋಜನೆ ಇಪಿಎಸ್-95 ಅಡಿಯಲ್ಲಿ ಬರುವ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಸೇರಿದಂತೆ ಇತರೆ ಬೇಡಿಕೆಗಳಿಗಾಗಿ ಪಿಂಚಣಿದಾರರು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಪ್ರಸ್ತುತ, ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ರೂ 1,000 ಪಿಂಚಣಿ ನಿಗದಿಪಡಿಸಲಾಗಿದೆ. ಈ ವ್ಯವಸ್ಥೆಯನ್ನು (Business News In Kannada) ಸೆಪ್ಟೆಂಬರ್, 2014 ರಲ್ಲಿ ಜಾರಿಗೆ ತರಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಜುಲೈ 20 ರಂದು ಮುಷ್ಕರ ನಡೆಯಲಿದೆ
ಇಪಿಎಸ್-95 ರಾಷ್ಟ್ರೀಯ ಹೋರಾಟ ಸಮಿತಿ (ಎನ್‌ಎಸಿ) ಬುಧವಾರ ನೀಡಿರುವ ಹೇಳಿಕೆಯಲ್ಲಿ ತಮ್ಮ  ಬೇಡಿಕೆಗಳನ್ನು ಬೆಂಬಲಿಸಿ ಜುಲೈ 20 ರ ಗುರುವಾರ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದೆ. ಹೇಳಿಕೆಯ ಪ್ರಕಾರ, ಇಪಿಎಸ್-95 ರಾಷ್ಟ್ರೀಯ ಸಂಘರ್ಷ ಸಮಿತಿಯು ಇಪಿಎಸ್-95 ಪಿಂಚಣಿದಾರರು ಎಂದು ಕರೆಯಲ್ಪಡುವ ಕೈಗಾರಿಕಾ, ಸಾರ್ವಜನಿಕ, ಸಹಕಾರ, ಖಾಸಗಿ ವಲಯಗಳ ನಿವೃತ್ತ ಉದ್ಯೋಗಿಗಳನ್ನು ಪ್ರತಿನಿಧಿಸುತ್ತದೆ. ಇವರು ರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದರು ಆದರೆ ಅವರು ಅತ್ಯಂತ ಕಡಿಮೆ ಪಿಂಚಣಿ ಮೊತ್ತದಿಂದ ತೀವ್ರತರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಪಿಂಚಣಿದಾರರು ಕಡಿಮೆ ಪಿಂಚಣಿಯಿಂದ ಕಂಗಾಲಾಗಿದ್ದಾರೆ
ನ್ಯಾಕ್ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ (ನಿವೃತ್ತ) ಮಾತನಾಡಿ, ಈ ಪಿಂಚಣಿದಾರರು ಅತ್ಯಲ್ಪ ಪಿಂಚಣಿಯಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಮತ್ತು ತಮ್ಮ ಕುಟುಂಬ ಮತ್ತು ಸಮಾಜದಲ್ಲಿ ತಮ್ಮ ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜುಲೈ 20 ರಂದು ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಅಶೋಕ್ ರಾವುತ್ ಮತ್ತು ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರು ಘೋಷಿಸಿದ್ದಾರೆ. ಮತ್ತಷ್ಟು ಬೆಂಬಲವನ್ನು ಪಡೆಯಲು, ದೇಶಾದ್ಯಂತ ಪಿಂಚಣಿದಾರರು ಅದೇ ದಿನ ಪ್ರಮುಖ ಸ್ಥಳಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಕನಿಷ್ಠ ಪಿಂಚಣಿ 7500 ರೂ
ಪಿಂಚಣಿದಾರರು ಮಾಸಿಕ ಮೂಲ ಪಿಂಚಣಿ 7,500 ರೂ.ಗಳಿಗೆ ಹೆಚ್ಚಿಸುವುದರ ಜೊತೆಗೆ ಜೊತೆಗೆ ತುಟ್ಟಿ ಭತ್ಯೆ, ಪಿಂಚಣಿದಾರರ ಸಂಗಾತಿಗೆ ಉಚಿತ ಆರೋಗ್ಯ ಸೌಲಭ್ಯಗಳು ಮತ್ತು ಇಪಿಎಸ್ 95 ವ್ಯಾಪ್ತಿಗೆ ಬರದ ನಿವೃತ್ತ ನೌಕರರನ್ನು ಸೇರಿಸಿ ಮಾಸಿಕ 5,000 ರೂ. ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ಇದನ್ನೂ ಓದಿ-ದೇಶದ ಬಡವರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ರೇಲ್ವೆ ಸಚಿವ, ಚಲಿಸಲಿದೆ ಈ ವಿಶೇಷ ರೈಲು!

12ರಷ್ಟು ಭವಿಷ್ಯ ನಿಧಿಗೆ ಹೋಗುತ್ತದೆ
ನೌಕರರ ಪಿಂಚಣಿ ಯೋಜನೆಯಡಿ ಬರುವ ನೌಕರರ ಮೂಲ ವೇತನದ ಶೇ.12ರಷ್ಟು,  ಭವಿಷ್ಯ ನಿಧಿಗೆ ಸೇರುತ್ತಿರುವುದು ಇಲ್ಲಿ  ಗಮನಾರ್ಹ. ಇದೇ ವೇಳೆ, ಉದ್ಯೋಗದಾತರ ಪಾಲಿನ ಶೇ. 12 ರಲ್ಲಿ, ಶೇ. 8.33 ಉದ್ಯೋಗಿ ಪಿಂಚಣಿ ಯೋಜನೆಗೆ ಹೋಗುತ್ತದೆ. ಇದಲ್ಲದೇ ಸರ್ಕಾರವು ಪಿಂಚಣಿ ನಿಧಿಗೆ ಶೇ.1.16 ರಷ್ಟು ಕೊಡುಗೆ ನೀಡುತ್ತದೆ.

ಇದನ್ನೂ ಓದಿ-ಹಣ ಹೂಡಿಕೆ ಮಾಡಬೇಕೆ? ಈ ಸಲಹೆಗಳನ್ನು ಅನುಸರಿಸಿ ಸಂಭಾವ್ಯ ಹಾನಿಯಿಂದ ಪಾರಾಗಿ!

ಅನೇಕ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ
ಸರ್ಕಾರ ಸಾರ್ವಜನಿಕರ ಕಲ್ಯಾಣಕ್ಕಾಗಿ ಹಲವಾರು ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇಪಿಎಸ್ ನೌಕರರು ತಮ್ಮ ಸಂಪೂರ್ಣ ಸೇವೆಯಲ್ಲಿ ಪಿಂಚಣಿ ನಿಧಿಗೆ ಕೊಡುಗೆ ನೀಡಿದ ನಂತರ ಕೇವಲ ನಾಮಮಾತ್ರ ಪಿಂಚಣಿ ಮೊತ್ತವನ್ನು ಪಡೆಯುತ್ತಿದ್ದಾರೆ ಎಂದು ರಾವುತ್ ಹೇಳಿದ್ದಾರೆ, ಈ ಮುಂಗಾರು ಅಧಿವೇಶನದಲ್ಲಿಯೂ  ಪಿಂಚಣಿ ಹೆಚ್ಚಿಸಿಲ್ಲ, ಹೀಗಾಗಿ ಪಿಂಚಣಿದಾರರು ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News