LPG Cylinder ಬೆಲೆ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ, ಸಿಗಲಿದೆ ಅಗ್ಗದ ದರದಲ್ಲಿ ಸಿಲಿಂಡರ್!

LPG Price Update: ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ  ಗ್ಯಾಸ್ ಬೆಲೆಗೆ ಕಡಿವಾಣ ಹಾಕಲು, ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಸರ್ಕಾರಿ ತೈಲ ಕಂಪನಿಗಳು ದೇಶಾದ್ಯಂತ ಹೊಸ ಗ್ಯಾಸ್ ಬೆಲೆ ವ್ಯವಸ್ಥೆಯನ್ನು ಪರಿಚಯಿಸಲು ಹೊರಟಿದ್ದು, ಇದು ಸಾಮಾನ್ಯ ಜನರಿಗೆ ಭಾರಿ ಪರಿಹಾರವನ್ನು ನೀಡಲಿದೆ ಎನ್ನಲಾಗುತ್ತಿದೆ.   

Written by - Nitin Tabib | Last Updated : Apr 14, 2023, 08:22 PM IST
  • ಸರ್ಕಾರವು 6 ಏಪ್ರಿಲ್ 2023 ರಂದು ಈ ಕುರಿತಾದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು.
  • ಇದರ ಅಡಿಯಲ್ಲಿ, ಸರ್ಕಾರವು ದೇಶೀಯವಾಗಿ ಉತ್ಪಾದಿಸಲಾಗುವ
  • ಅನಿಲದ ಬೆಲೆಗಳನ್ನು ಮಾಸಿಕ ಆಧಾರದ ಮೇಲೆ ನಿಗದಿಪಡಿಸಲಿದೆ ಎಂದಿದೆ.

Trending Photos

LPG Cylinder ಬೆಲೆ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ, ಸಿಗಲಿದೆ ಅಗ್ಗದ ದರದಲ್ಲಿ ಸಿಲಿಂಡರ್! title=
LPG Price Update

LPG Price Update: ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಗ್ಯಾಸ್ ಬೆಲೆಗೆ ಕಡಿವಾಣ ಹಾಕಲು ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಸರ್ಕಾರಿ ತೈಲ ಕಂಪನಿಗಳು ದೇಶಾದ್ಯಂತ ಹೊಸ ಗ್ಯಾಸ್ ಬೆಲೆ ವ್ಯವಸ್ಥೆಯನ್ನು ಪರಿಚಯಿಸಲು ಹೊರಟಿದ್ದು, ಇದು ಸಾಮಾನ್ಯ ಜನರಿಗೆ ಪರಿಹಾರವನ್ನು ನೀಡಲಿದೆ. ಇದರೊಂದಿಗೆ ಗ್ಯಾಸ್ ಬೆಲೆಯಲ್ಲಿಯೂ ಕೂಡ ಇಳಿಕೆಯಾಗಲಿದೆ. ದೇಶದ ಹೊಸ ಅನಿಲ ಬೆಲೆ ವ್ಯವಸ್ಥೆಯು ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ (OIL) ನಂತಹ ಅನಿಲ ಕಂಪನಿಗಳ ಆದಾಯವನ್ನು ಕಡಿಮೆ ಮಾಡಲಿದೆ.

ಎಸ್ & ಪಿ ರೇಟಿಂಗ್ಸ್ ಈ ಮಾಹಿತಿ ನೀಡಿದೆ
ಈ ಕುರಿತು ಎಸ್ ಆ್ಯಂಡ್ ಪಿ ರೇಟಿಂಗ್ಸ್ ಶುಕ್ರವಾರ ಮಾಹಿತಿ ನೀಡಿದೆ. ಆದಾಗ್ಯೂ, ಹೊಸ ಮಾನದಂಡಗಳು ಕ್ಲಿಷ್ಟಕರವಾದ ಕ್ಷೇತ್ರಗಳಿಂದ ಉತ್ಪಾದಿಸುವ ಅನಿಲದ ಬೆಲೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಂತಹ ಕಂಪನಿಗಳು ಅಂತಹ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತವೆ.

ಸರ್ಕಾರ ಏಪ್ರಿಲ್ 6 ರಂದು ಈ ಕುರಿತು ಘೋಷಿಸಿದೆ
ಸರ್ಕಾರವು 6 ಏಪ್ರಿಲ್ 2023 ರಂದು  ಈ ಕುರಿತಾದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಇದರ ಅಡಿಯಲ್ಲಿ, ಸರ್ಕಾರವು ದೇಶೀಯವಾಗಿ ಉತ್ಪಾದಿಸಲಾಗುವ ಅನಿಲದ ಬೆಲೆಗಳನ್ನು ಮಾಸಿಕ ಆಧಾರದ ಮೇಲೆ ನಿಗದಿಪಡಿಸಲಿದೆ ಎಂದಿದೆ. ಈ ದರವು ಹಿಂದಿನ ತಿಂಗಳಲ್ಲಿ ಭಾರತೀಯ ಕಚ್ಚಾ ಬ್ಯಾಸ್ಕೆಟ್‌ನ (ಭಾರತದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಸರಾಸರಿ ಬೆಲೆ) ಶೇಕಡಾ 10 ರಷ್ಟಿರಲಿದೆ ಎನ್ನಲಾಗಿದೆ.

ಇದನ್ನೂ ಓದಿ-NPS Big Update: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ! ಮೋದಿ ಸರ್ಕಾರದ ಈ ನಿರ್ಧಾರ ನಿಮಗೂ ಸಂತಸ ನೀಡಲಿದೆ!

ಬೆಲೆ ಪರಿಷ್ಕರಣೆ ಮೊದಲ 6 ತಿಂಗಳಿಗೊಮ್ಮೆ ನಡೆಯುತ್ತಿತ್ತು.
ಸರ್ಕಾರವು ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ (ಯೂನಿಟ್) ಗೆ US$4 ಕಡಿಮೆ ಮಿತಿಯನ್ನು ಮತ್ತು ಗ್ಯಾಸ್ ಬೆಲೆಗೆ ಪ್ರತಿ ಯೂನಿಟ್‌ಗೆ $6.5 ರ ಮೇಲಿನ ಮಿತಿಯನ್ನು ನಿಗದಿಪಡಿಸಿದೆ. "ಹೊಸ ಅನಿಲ ಬೆಲೆ ನಿಯಮಗಳು ಹೆಚ್ಚು ತ್ವರಿತ ಬೆಲೆ ಪರಿಷ್ಕರಣೆಗಳಿಗೆ ಕಾರಣವಾಗುತ್ತವೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಎಸ್ & ಪಿ ಗ್ಲೋಬಲ್ ರೇಟಿಂಗ್ಸ್‌ನ ಕ್ರೆಡಿಟ್ ವಿಶ್ಲೇಷಕ ಶ್ರುತಿ ಜಟಾಕಿಯಾ ಹೇಳಿದ್ದಾರೆ. ಮೊದಲು ಆರು ತಿಂಗಳಿಗೊಮ್ಮೆ ಬೆಲೆಗಳನ್ನು ಪರಿಶೀಲಿಸಲಾಗುತ್ತಿತ್ತು.

ಇದನ್ನೂ ಓದಿ-New Pension Rule: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಬಂಪರ್ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, ಹೆಚ್ಚಾಗಲಿದೆ ಪಿಂಚಣಿ ಮತ್ತು ವೇತನ!

ರೇಟಿಂಗ್ ಕಂಪನಿ ಈ ಹೇಳಿಕೆ ನೀಡಿದೆ
ಕಡಿಮೆ ಬೆಲೆಯ ಮಿತಿ ಎಂದರೆ ONGC ತನ್ನ ಅನಿಲ ಉತ್ಪಾದನೆಯ ಮೇಲೆ ಪ್ರತಿ ಯೂನಿಟ್‌ಗೆ ಕನಿಷ್ಠ $ 4 ಬೆಲೆಯನ್ನು ಪಡೆಯಲು ಸಾಧ್ಯವಾಗಲಿದೆ ಎಂದು S&P ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂತರಾಷ್ಟ್ರೀಯ ನೈಸರ್ಗಿಕ ಅನಿಲದ ಬೆಲೆಗಳು ಐತಿಹಾಸಿಕ ಮಟ್ಟದಲ್ಲಿ  ಕಡಿಮೆಯಾಗಿದ್ದರೂ ಸಹ. ಅದೇ ರೀತಿ, ಬೆಲೆಗಳ ಮೇಲಿನ ಮಿತಿಯು ONGC ಗಾಗಿ ಗಳಿಕೆಯ ಬೆಳವಣಿಗೆಯನ್ನು ಮಿತಿಗೊಳಿಸುತ್ತದೆ. ವಿಶೇಷವಾಗಿ ಪ್ರಸ್ತುತ ಹೆಚ್ಚಿದ ಬೆಲೆಗಳ ನಡುವೆ ಇದು ಕಂಡುಬರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News