DA Hike Approved: ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆ

7th Pay Commission Latest News Today: ಚೈತ್ರ ನವರಾತ್ರಿ ಹಬ್ಬ ಹಾಗೂ ರಂಜಾನ್ ಹಬ್ಬದ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ಉಡುಗೊರೆ ಸಿಕ್ಕಿದೆ. ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆ ಸೂಚಿಸಿದೆ. ಈ ಬಾರಿ ಮೋದಿ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸಿದೆ. ಇದರಿಂದ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾದಂತಾಗಿದೆ.  

Written by - Nitin Tabib | Last Updated : Mar 24, 2023, 09:55 PM IST
  • ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು
  • ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) 4% ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.
  • ತುಟ್ಟಿ ಭತ್ಯೆಯ ಹೆಚ್ಚಿದ ದರಗಳು ಜನವರಿ 2023 ರಿಂದ ಅನ್ವಯವಾಗುತ್ತದೆ.
DA Hike Approved: ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆ title=
ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

DA Hike Latest News Today:  ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.4 ಹೆಚ್ಚಿಸಲಾಗಿದೆ. ಅದಕ್ಕೆ ಕೇಂದ್ರ  ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದಾಗಿ ಇದೀಗ  ಕೇಂದ್ರ ಸರ್ಕಾರಿ ನೌಕರರಿಗೆ 42% ದರದಲ್ಲಿ ತುಟ್ಟಿ ಭತ್ಯೆ ನೀಡಲಾಗುವುದು. ಮಾರ್ಚ್ ತಿಂಗಳ ಸಂಬಳದ ಜೊತೆಗೆ ಈ ಹಣ ಪಾವತಿಯಾಗಲಿದೆ. ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) 4% ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ತುಟ್ಟಿ ಭತ್ಯೆಯ ಹೆಚ್ಚಿದ ದರಗಳು ಜನವರಿ 2023 ರಿಂದ ಅನ್ವಯವಾಗುತ್ತದೆ. ನೌಕರರು ಮತ್ತು ಪಿಂಚಣಿದಾರರು ಈ ಬಾಕಿಯನ್ನು ಪಡೆಯುತ್ತಾರೆ. ಇದರಿಂದ ಸರಕಾರ ಬೊಕ್ಕಸಕ್ಕೆ  ಪ್ರತಿ ವರ್ಷ 12815 ಕೋಟಿ ರೂ.ಗಳ ಆರ್ಥಿಕ ಹೊರೆ ಬೀಳಲಿದೆ.

ಸಿಸಿಇಎ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ
ಶುಕ್ರವಾರ ಸಂಜೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳ ಘೋಷಿಸಲಾಗಿದೆ. ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ತುಟ್ಟಿ ಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಲಾಗಿದೆ. ತುಟ್ಟಿಭತ್ಯೆ ಇದೀಗ  ಒಟ್ಟು ಶೇ.42ಕ್ಕೆ ಏರಿಕೆಯಾಗಿದೆ.

4% DA ಹೆಚ್ಚಳವು ಜನವರಿ 2023 ರಿಂದ ಅನ್ವಯಿಸಲಿದೆ
AICPI-IW ಅಂಕಿ-ಅಂಶಗಳ ಆಧಾರದ ಮೇಲೆ, ಹಣದುಬ್ಬರವನ್ನು ಲೆಕ್ಕಹಾಕುವ ಮೂಲಕ ಉದ್ಯೋಗಿಗಳಿಗೆ ಭತ್ಯೆಯನ್ನು ನೀಡಲಾಗುತ್ತದೆ. ಇದನ್ನು ಪ್ರತಿ 6 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ತುಟ್ಟಿಭತ್ಯೆ ಜನವರಿಗೆ 4% ಹೆಚ್ಚಾಗಿದೆ. ಇದು ಜನವರಿಯಿಂದಲೇ ಜಾರಿಗೆ ಬರಲಿದೆ. ಜನವರಿಯ ಮೊದಲು, ತುಟ್ಟಿಭತ್ಯೆ 38% ದರದಲ್ಲಿ ನೀಡಲಾಗುತ್ತಿತ್ತು. ಮಾರ್ಚ್‌ನಲ್ಲಿ ಘೋಷಣೆ ಮಾಡಿರುವುದರಿಂದ ಜನವರಿ ಮತ್ತು ಫೆಬ್ರವರಿಯ ಬಾಕಿಯನ್ನೂ ನೀಡಲಾಗುವುದು.

ಮಾರ್ಚ್ ತಿಂಗಳ ಸಂಬಳದಲ್ಲಿ ಹಣ ಬರಲಿದೆ
ತುಟ್ಟಿಭತ್ಯೆಗೆ ಔಪಚಾರಿಕ ಅನುಮೋದನೆಯನ್ನು ಘೋಷಿಸಲಾಗಿದ್ದು, ಅದನ್ನು ಶೇ.42ಕ್ಕೆ ಹೆಚ್ಚಿಸಲಾಗುವುದು. ಸಚಿವ ಸಂಪುಟದ ಅನುಮೋದನೆಯ ನಂತರ ಹಣಕಾಸು ಸಚಿವಾಲಯವು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ. . ಅಧಿಸೂಚನೆ ನಂತರ ಕೇಂದ್ರ ನೌಕರರಿಗೆ ವೇತನ ನೀಡಲಾಗುವುದು. ಮಾರ್ಚ್ ತಿಂಗಳ ವೇತನದಲ್ಲಿ ಹೊಸ ತುಟ್ಟಿಭತ್ಯೆ ನೀಡುವುದು ಖಚಿತವಾಗಿದೆ.

ಎರಡು ತಿಂಗಳ ಡಿಎ ಬಾಕಿ
ಹಣಕಾಸು ಸಚಿವಾಲಯವು ತುಟ್ಟಿಭತ್ಯೆಯ ಹೆಚ್ಚಳವನ್ನು ಸೂಚಿಸಿದಾಗ, ಪಾವತಿ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಮಾರ್ಚ್ ತಿಂಗಳ ಸಂಬಳದಲ್ಲಿ ಈ ಹೆಚ್ಚಳ ಪಾವತಿಸಲಾಗುವ ನಿರೀಕ್ಷೆ ಇದೆ. ಆದರೆ, 4% ಹೆಚ್ಚಳದೊಂದಿಗೆ, ತುಟ್ಟಿಭತ್ಯೆ (DA) ಅನ್ನು ಜನವರಿ 2023 ರಿಂದ ಅನ್ವಯಿಸುವಂತೆ ಪರಿಗಣಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ, ನೌಕರರು 2 ತಿಂಗಳ ಡಿಎ ಬಾಕಿಯನ್ನು ಪಡೆಯುತ್ತಾರೆ. ಪೇ ಬ್ಯಾಂಡ್ 3 ರ ಒಟ್ಟು ಹೆಚ್ಚಳವು ತಿಂಗಳಿಗೆ 720 ರೂ. ಅಂದರೆ ಅವರು ಜನವರಿ ಮತ್ತು ಫೆಬ್ರವರಿಗೆ 720X2=1440 ರೂಪಾಯಿಗಳ ಬಾಕಿಯನ್ನು ಪಡೆಯುತ್ತಾರೆ. ಈ ಹೆಚ್ಚಳವು ಮೂಲ ವೇತನದ ಮೇಲೆ ಇರುತ್ತದೆ.

ಇದನ್ನೂ ಓದಿ-BIG Update: ಆದಾಯ ತೆರಿಗೆ ಪಾವತಿದಾರರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ! ಇಲ್ಲಿದೆ ವಿವರ

ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಹೇಗೆ ನಿರ್ಧರಿಸಲಾಯಿತು?
ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರದ ಲೆಕ್ಕಾಚಾರ ನಡೆಸುತ್ತದೆ. ಇದಕ್ಕಾಗಿ, ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಕಾರ್ಮಿಕ ಬ್ಯೂರೋ ಕಾರ್ಮಿಕ ಸಚಿವಾಲಯದ ಭಾಗವಾಗಿದೆ. ಕಳೆದ ವರ್ಷ ಜುಲೈ 2022 ರಲ್ಲಿ 4% ರಷ್ಟು DA ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಶೇ.4ರಷ್ಟು ಹೆಚ್ಚಿಸಲಾಗಿದೆ. ಜನವರಿ 31, 2023 ರಂದು ಬಿಡುಗಡೆಯಾದ CPI-IW ದತ್ತಾಂಶದಿಂದ, ತುಟ್ಟಿ ಭತ್ಯೆಯಲ್ಲಿ 4.23% ಹೆಚ್ಚಳ ಎಂದು ನಿರ್ಧರಿಸಲಾಯಿತು. ಆದರೆ, ಇದನ್ನು ರೌಂಡ್ ಫಿಗರ್ ಅಂದರೆ ಪೂರ್ಣ ಅಂಕಿಯಲ್ಲಿ ಭಾವಿಸಲಾಗುತ್ತದೆ, ಆದ್ದರಿಂದ ಇದು 4% ಆಗಿದೆ.

ಇದನ್ನೂ ಓದಿ-Big Update: ಪ್ರಯಾಣಿಕರಿಗಾಗಿ ಬಂಪರ್ ಘೋಷಣೆ ಮೊಳಗಿಸಿದ ನಿತೀನ್ ಗಡ್ಕರಿ, ಕೇಳಿ ಕುಣಿದು ಕುಪ್ಪಳಿಸುವಿರಿ!

ಪಿಂಚಣಿದಾರರಿಗೂ ದೊಡ್ಡ ಕೊಡುಗೆ
7 ನೇ ವೇತನ ಆಯೋಗದ ಅಡಿಯಲ್ಲಿ, ಸರ್ಕಾರವು ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಉಡುಗೊರೆಗಳನ್ನು ನೀಡಿದೆ. ಡಿಎ ಹೆಚ್ಚಳದ ಜೊತೆಗೆ, ಡಿಯರ್‌ನೆಸ್ ರಿಲೀಫ್ (ಡಿಆರ್ ಹೈಕ್) ಸಹ 4% ಹೆಚ್ಚಾಗಿದೆ. ಅಂದರೆ ಪಿಂಚಣಿದಾರರಿಗೆ 42% ದರದಲ್ಲಿ ತುಟ್ಟಿಭತ್ಯೆ ನೀಡಲಾಗುವುದು. ಒಟ್ಟಿನಲ್ಲಿ ಮೋದಿ ಸರ್ಕಾರ 7ನೇ ವೇತನ ಆಯೋಗದ ಅಡಿಯಲ್ಲಿ ನೌಕರರು ಮತ್ತು ಪಿಂಚಣಿದಾರರ ಹಣವನ್ನು ಹೆಚ್ಚಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News