ಕಾಂಡೋಮ್ ರಾಶಿಯ ಮುಂದೆ ಮಾಡೆಲ್ ಗಳ ಮಾರ್ಜಾಲ ನಡಿಗೆ...ವಿಶೇಷ ಫ್ಯಾಶನ್ ಷೋ ನೀವು ನೋಡಿ

Milan Fashion Week 2023-24: ಮಿಲನ್ ಫ್ಯಾಶನ್ ವೀಕ್ 2023 ಕುರಿತು ಎಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಈ ಫ್ಯಾಶನ್ ವೀಕ್ ಮೂಲಕ, ಉಡುಪು ತಯಾರಿಕಾ ದೈತ್ಯ ಡೀಸೆಲ್ ತನ್ನ ಹೊಸ ಕಲೆಕ್ಷನ್ ಬಿಡುಗಡೆ ಮಾಡಿದೆ. ಇದರೊಂದಿಗೆ ರಾಂಪ್ ವಾಕ್ ಗೆಂದು ಹಾಕಿದ್ದ ಸೆಟ್ ನಲ್ಲಿ ಕಾಂಡೋಮ್ ಗಳ ಪರ್ವತ ಜನರ ಭಾರಿ ಆಕರ್ಷಣೆಗೆ ಕಾರಣವಾಗಿದೆ.  

Edited by - Nitin Tabib | Last Updated : Feb 24, 2023, 10:27 PM IST
  • ಈ ಫ್ಯಾಷನ್ ವೀಕ್‌ನಲ್ಲಿ ಕಾಂಡೋಮ್‌ಗಳ ರಾಶಿಯೇ ಆಕರ್ಷಣೆಯ ಕೇಂದ್ರವಾಗಿತ್ತು,
  • ಇದು ಪ್ರೇಕ್ಷಕರಲ್ಲಿ ಏಕಕಾಲದಲ್ಲಿ ಆಶ್ಚರ್ಯ ಮತ್ತು ಕುತೂಹಲ ಎರಡನ್ನು ಸೃಷ್ಟಿಸಿದೆ.
  • ವಿಶ್ವದಾದ್ಯಂತ ಸುರಕ್ಷಿತ ಲೈಂಗಿಕ ಸಂದೇಶವನ್ನು ಪ್ರಚಾರ ಮಾಡಲು ಕಂಪನಿಯು ಬಯಸುತ್ತದೆ ಎಂದು ಹೇಳಿಕೊಂಡಿದೆ.
ಕಾಂಡೋಮ್ ರಾಶಿಯ ಮುಂದೆ ಮಾಡೆಲ್ ಗಳ ಮಾರ್ಜಾಲ ನಡಿಗೆ...ವಿಶೇಷ ಫ್ಯಾಶನ್ ಷೋ ನೀವು ನೋಡಿ title=
ಮಿಲಾನ್ ಫ್ಯಾಶನ್ ವೀಕ್

 ಮಿಲನ್ ಫ್ಯಾಶನ್ ವೀಕ್ 2023 ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಆರಂಭಗೊಂಡಿದೆ, ಅದನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ಫ್ಯಾಷನ್ ವೀಕ್‌ನಲ್ಲಿ ಕಲಾವಿದರು, ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡಬೇಕಾದ ಸೆಟ್ ಮೇಲೆ ನಿರ್ಮಿಸಲಾಗಿದ್ದ ಬೆಟ್ಟವೊಂದು ಭಾರಿ ಜನಮನ ಸೆಳೆದಿದೆ. ಈ ಫ್ಯಾಶನ್ ವೀಕ್‌ನಲ್ಲಿ ಸೆಟ್‌ನಲ್ಲಿ ನಿರ್ಮಿಸಲಾಗಿದ್ದ ಪರ್ವತಕ್ಕಾಗಿ ಕಾಂಡೋಮ್‌ ಗಳನ್ನು ಬಳಸಲಾಗಿತ್ತು ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಹೌದು, ಬುಧವಾರ ಆರಂಭವಾದ ವಾಕ್ ಶೋನಲ್ಲಿ ಮಾಡೆಲ್‌ಗಳು ಕಾಂಡೋಮ್‌ಗಳ ದೈತ್ಯ ಪರ್ವತದ ಸುತ್ತಲೂ ತಮ್ಮ ಮಾರ್ಜಾಲ ನಡಿಗೆಯನ್ನು ಪ್ರದರ್ಶಿಸಿದ್ದಾರೆ. ಪ್ರಸಿದ್ಧ ಬಟ್ಟೆ ಬ್ರ್ಯಾಂಡ್ ಡೀಸೆಲ್ ಹೊಸ ಕಲೆಕ್ಷನ್ ಬಂದಿದೆ, ಅದರ ಬಿಡುಗಡೆಯ ಥೀಮ್ ಸ್ವಾತಂತ್ರ್ಯ, ಆನಂದ ಮತ್ತು ಪ್ರಯೋಗ . ಕಂಪನಿಯ ಹೊಸ ಕಲೆಕ್ಷನ್ ಜನರ ಗಮನ ಸೆಳೆದಿದೆ.

 
 
 
 
 

 
 
 
 
 
 
 
 
 
 
 

A post shared by Diesel (@diesel)

ಕಾಂಡೋಮ್ ರಾಶಿ ಆಕರ್ಷಣೆಯ ಕೇಂದ್ರವಾಗಿತ್ತು
ಅಂದಹಾಗೆ, ಈ ಫ್ಯಾಷನ್ ವೀಕ್‌ನಲ್ಲಿ ಕಾಂಡೋಮ್‌ಗಳ ರಾಶಿಯೇ  ಆಕರ್ಷಣೆಯ ಕೇಂದ್ರವಾಗಿತ್ತು, ಇದು ಪ್ರೇಕ್ಷಕರಲ್ಲಿ ಏಕಕಾಲದಲ್ಲಿ ಆಶ್ಚರ್ಯ ಮತ್ತು ಕುತೂಹಲ ಎರಡನ್ನು ಸೃಷ್ಟಿಸಿದೆ.  ಈ ಕಾಂಡೋಮ್ ರಾಶಿಯ ಸಹಾಯದಿಂದ ವಿಶ್ವದಾದ್ಯಂತ ಸುರಕ್ಷಿತ ಲೈಂಗಿಕ ಸಂದೇಶವನ್ನು ಪ್ರಚಾರ ಮಾಡಲು ಕಂಪನಿಯು ಬಯಸುತ್ತದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ-ದೇಶಾದ್ಯಂತದ ರೈತರಿಗೊಂದು ಭಾರಿ ಸಂತಸದ ಸುದ್ದಿ, ಈ ಕೆಲಸಕ್ಕೆ ಮೋದಿ ಸರ್ಕಾರ ನೀಡುತ್ತಿದೆ 3 ಲಕ್ಷ ರೂ.!

ಇದಕ್ಕಾಗಿ ಡೀಸೆಲ್ ಡ್ಯೂರೆಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬಟ್ಟೆ ತಯಾರಕ ಡೀಸೆಲ್ ಏಪ್ರಿಲ್‌ನಲ್ಲಿ ಜಾಗತಿಕವಾಗಿ ಸುಮಾರು 3 ಲಕ್ಷ ಕಾಂಡೋಮ್‌ಗಳನ್ನು ನೀಡಲು ಯೋಜಿಸುತ್ತಿದೆ. ಇದರ ತಯಾರಿಯನ್ನು ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತಿದೆ. ಈ ಫ್ಯಾಷನ್ ವಾರದಲ್ಲಿ ಪರ್ವತವನ್ನು ತಯಾರಿಸಲು ಸುಮಾರು 2 ಲಕ್ಷ ಕಾಂಡೋಮ್‌ಗಳನ್ನು ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ-PMK Update: ಫೆಬ್ರುವರಿ 10 ನೋಟ್ ಮಾಡಿಟ್ಟುಕೊಳ್ಳಿ, ಕಾರಣ ಇಲ್ಲಿದೆ!

ಡೀಸೆಲ್ ಮತ್ತು ಡ್ಯೂರೆಕ್ಸ್‌ನ ಜಂಟಿ ಪ್ರಯತ್ನವಾಗಿರುವ 3 ಲಕ್ಷ ಡ್ಯೂರೆಕ್ಸ್ ಕಾಂಡೋಮ್‌ಗಳನ್ನು ಜನರಿಗೆ ನೀಡುವುದಾಗಿ ಕಂಪನಿ ತಿಳಿಸಿದೆ. ಕಾಂಡೋಮ್ ರಾಶಿಗೆ ಸಂಬಂಧಿಸಿದ ಚಿತ್ರಗಳನ್ನು ಡೀಸೆಲ್ ಹಂಚಿಕೊಂಡಿದೆ. ಡೀಸೆಲ್ ಕಂಪನಿಯ ಈ ವಿಶಿಷ್ಟ ಶೈಲಿಯ  ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಏಪ್ರಿಲ್ ತಿಂಗಳಿನಿಂದ ನಿಮಗೆ ತನ್ನ ಮಳಿಗೆಗಳಲ್ಲಿ ಉಚಿತ ಕಾಂಡೋಮ್ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

 
 
 
 

 
 
 
 
 
 
 
 
 
 
 

A post shared by Diesel (@diesel)

ಇದನ್ನೂ ನೋಡಿ-

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News