Maruti Suzuki : 1.81ಲಕ್ಷ ಕಾರುಗಳನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಮಾರುತಿ ಸುಜುಕಿ, ನಿಮ್ಮ ಕಾರು ಇದರಲ್ಲಿದೆಯೇ ಚೆಕ್ ಮಾಡಿಕೊಳ್ಳಿ

ಮಾರುತಿ ಸುಜುಕಿ ತನ್ನ 5 ಮಾಡೆಲ್ ಗಳನ್ನೂ ರಿಕಾಲ್ ಮಾಡಿದೆ. ಇದರಲ್ಲಿ ಪೆಟ್ರೋಲ್ ವೆರಿಯಂಟ್‌ಗಳಾದ Ciaz, Ertiga, Vitara Brezza, S-Cross ಮತ್ತು XL6 ಸೇರಿವೆ. ಇವುಗಳು ಮೇ 4 , 2018 ರಿಂದ  ಅಕ್ಟೋಬರ್ 27, 2020 ರ ನಡುವೆ ತಯಾರಾದ ವಾಹನಗಳಾಗಿವೆ.

Written by - Ranjitha R K | Last Updated : Sep 3, 2021, 08:10 PM IST
  • ತನ್ನ 1.81 ಲಕ್ಷ ಕಾರುಗಳನ್ನು ರಿಕಾಲ್ ಮಾಡುತ್ತಿರುವ ಮಾರುತಿ ಸುಜುಕಿ
  • ಪೆಟ್ರೋಲ್ ವೆರಿಯೇಂಟ್ ವಾಹನಗಳಲ್ಲಿ ಕೆಲವು ದೋಷಗಳಿರುವ ಸಾಧ್ಯತೆಯಿದೆ.
  • 2018 ಮತ್ತು 2020 ರ ಅವಧಿಯಲ್ಲಿ ತಯಾರಾಗಿರುವ ಕಾರುಗಳು
Maruti Suzuki : 1.81ಲಕ್ಷ ಕಾರುಗಳನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಮಾರುತಿ ಸುಜುಕಿ, ನಿಮ್ಮ ಕಾರು ಇದರಲ್ಲಿದೆಯೇ ಚೆಕ್ ಮಾಡಿಕೊಳ್ಳಿ   title=
ತನ್ನ 1.81 ಲಕ್ಷ ಕಾರುಗಳನ್ನು ರಿಕಾಲ್ ಮಾಡುತ್ತಿರುವ ಮಾರುತಿ ಸುಜುಕಿ (file photo)

ನವದೆಹಲಿ : ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ (Maruti Suzuki) ತನ್ನ ವಾಹನಗಳಲ್ಲಿನ ಕೆಲವು ದೋಷಗಳಿಂದಾಗಿ ತನ್ನ 1,80,000 ಕ್ಕಿಂತ ಹೆಚ್ಚು ಕಾರುಗಳನ್ನು ವಾಪಸ್ ಪಡೆಯುತ್ತಿದೆ. ಇದು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಅತಿ ದೊಡ್ಡ ರಿಕಾಲ್ (CarRecallProcess)
ಇದಾಗಿದೆ.  ಕಂಪನಿಯು ತನ್ನ 5 ಮಾದರಿಗಳ ಪೆಟ್ರೋಲ್ ಎಂಜಿನ್ ವೆರಿಯೇಂಟ್ ಗಳಲ್ಲಿ ಸಂಭವನೀಯ ದೋಷವನ್ನು ಕಂಡುಹಿಡಿಯಲು ಶುಕ್ರವಾರ ಈ ರಿಕಾಲ್ ಆದೇಶವನ್ನು ನೀಡಿದೆ.

ಯಾವ ಮಾದರಿಗಳನ್ನು ರಿಕಾಲ್ ಮಾಡಲಾಗಿದೆ ?
ಮಾರುತಿ ಸುಜುಕಿ (Maruti Suzuki) ತನ್ನ 5 ಮಾಡೆಲ್ ಗಳನ್ನೂ ರಿಕಾಲ್ ಮಾಡಿದೆ. ಇದರಲ್ಲಿ ಪೆಟ್ರೋಲ್ ವೆರಿಯಂಟ್‌ಗಳಾದ Ciaz, Ertiga, Vitara Brezza, S-Cross ಮತ್ತು XL6 ಸೇರಿವೆ. ಇವುಗಳು ಮೇ 4 , 2018 ರಿಂದ  ಅಕ್ಟೋಬರ್ 27, 2020 ರ ನಡುವೆ ತಯಾರಾದ ವಾಹನಗಳಾಗಿವೆ.

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಈ ತಿಂಗಳು ಸಿಗಲಿದೆ ಮತ್ತೊಂದು ಸಿಹಿ ಸುದ್ದಿ, ತುಟ್ಟಿ ಭತ್ಯೆಯಲ್ಲಿ ಮತ್ತೆ 3% ಹೆಚ್ಚಳ ?

ನವೆಂಬರ್‌ನಲ್ಲಿ ವರ್ಕ್ ಶಾಪ್ ನಲ್ಲಿರಬೇಕು ಕಾರುಗಳು : 
ವರದಿಗಳ ಪ್ರಕಾರ, ಕಂಪನಿಯು ನವೆಂಬರ್ ಮೊದಲ ವಾರದಲ್ಲಿ ಈ ವಾಹನಗಳನ್ನು ಪರೀಕ್ಷೆ ಒಳಪಡಿಸಲಿದೆ. "ಗ್ರಾಹಕರ ಹಿತದೃಷ್ಟಿಯಿಂದ, ಮಾರುತಿ ಸುಜುಕಿ ಬಾಧಿತ ವಾಹನಗಳನ್ನು ಮೋಟಾರ್ ಜನರೇಟರ್ ಘಟಕದ ತಪಾಸಣೆ ಅಥವಾ ಬದಲಿಗಾಗಿ ಉಚಿತವಾಗಿ ರಿಕಾಲ್ ಮಾಡಲು ನಿರ್ಧರಿಸಿದೆ (CarRecallProcess) ಎಂದು ಕಂಪನಿಯು ಬಿಎಸ್ಇ (BSE) ಫೈಲಿಂಗ್ ನಲ್ಲಿ ತಿಳಿಸಿದೆ. ಈ ವಾಹನ ಮಾಲೀಕರು ಮಾರುತಿ ಸುಜುಕಿಯ ಅಧಿಕೃತ ವರ್ಕ್ ಶಾಪ್ ಗಳಿಂದ ನೋಟಿಫಿಕೇಶನ್ ಪಡೆಯುತ್ತಾರೆ. ಅಲ್ಲದೆ, ನೀರಿನಿಂದ ತುಂಬಿರುವ ಪ್ರದೇಶಗಳಲ್ಲಿ ವಾಹನವನ್ನು ತೆಗದುಕೊಂಡು ಹೋಗುವುದನ್ನು ತಪ್ಪಿಸುವಂತೆ ಮತ್ತು ವಾಹನಗಳ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಘಟಕಗಳತ್ತ  ನೀರನ್ನು ನೇರವಾಗಿ ಸಿಂಪಡಿಸದಂತೆಯೂ ಕಂಪನಿಯು ಗ್ರಾಹಕರನ್ನು ಕೇಳಿಕೊಂಡಿದೆ.

ನಿಮ್ಮ ವಾಹನ ಈ ಪಟ್ಟಿಯಲ್ಲಿದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ?
ಈ ಬಗ್ಗೆ ಯಾವುದೇ ರೀತಿಯ ಸಂದೇಹಗಳಿದ್ದರೆ, ಕಂಪನಿಯ ವೆಬ್‌ಸೈಟ್ 
 www.marutisuzuki.com (ಎರ್ಟಿಗಾ ಮತ್ತು ವಿಟಾರಾ ಬ್ರೆಜಾ ಗೆ) ಅಥವಾ www.nexaexperience.com (ಸಿಯಾಜ್, ಎಕ್ಸ್‌ಎಲ್ 6 ಮತ್ತು ಎಸ್-ಕ್ರಾಸ್‌ ಗಾಗಿ) 'ಇಂಪ್ ಕಸ್ಟಮರ್ ಇನ್ಫೋ 'ವಿಭಾಗಕ್ಕೆ ಭೇಟಿ ನೀದುವ ಮೂಲಕವೂ ನಿಮ್ಮ ಕಾರು ಈ ರಿಕಾಲ್ ನಲ್ಲಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ, ವಾಹನದ ಚಾಸಿಸ್ ಸಂಖ್ಯೆ ಮತ್ತು ವಾಹನದ ಪ್ರಮುಖ ಮಾದರಿ ವಿವರಗಳನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ : Fixed Deposit : ಈ ತಿಂಗಳಲ್ಲಿ ಈ 5 ಬ್ಯಾಂಕುಗಳ FD ಯಲ್ಲಿ ಹೂಡಿಕೆ ಮಾಡಿ, ಡಬಲ್ ಲಾಭ, ಯಾವ ಬ್ಯಾಂಕ್ ಹೆಚ್ಚು ಬಡ್ಡಿ ಪಾವತಿಸುತ್ತಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News