LPG Price Updates: ದುಬಾರಿ ಬೆಲೆಯ ಎಲ್‌ಪಿಜಿ ಸಿಲಿಂಡರ್‌ಗಳಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಹೊಸ ವರ್ಷದಲ್ಲಿ ಸಿಹಿ ಸುದ್ದಿ ಸಿಗಲಿದೆ. ಈ ವರ್ಷದ ಜುಲೈನಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30 ರಷ್ಟು ಕಡಿಮೆಯಾಗಿದೆ. ಅಂದಿನಿಂದ ಭಾರತದಲ್ಲಿ LPG ಸಿಲಿಂಡರ್ ಬೆಲೆ 1056 ರೂ. ಆಗಿದೆ. ಇಂತಹ ಪರಿಸ್ಥಿತಿಯಲ್ಲಿ, ಹೊಸ ವರ್ಷದಲ್ಲಿ, ಎಲ್‌ಪಿಜಿ ಬೆಲೆಯಲ್ಲಿ ಸರ್ಕಾರವು ದೊಡ್ಡ ರಿಯಾಯಿತಿಯನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾದರೆ ಹೊಸ ವರ್ಷದ ಆರಂಭದಲ್ಲಿ ಈ ಸುದ್ದಿ ಜನರಿಗೆ ತುಂಬಾ ನಿರಾಳವಾಗಲಿದೆ.
ಭಾರತದಲ್ಲಿ ಅದರ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ತೈಲ ಮತ್ತು ಅನಿಲ ಉತ್ಪಾದನೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೂರೈಕೆಗಾಗಿ ಹೊರ ದೇಶಗಳನ್ನು ಅವಲಂಬಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಏರಿಳಿತದಿಂದಾಗಿ, ಭಾರತದಲ್ಲಿ ತೈಲ ಮತ್ತು ಅನಿಲದ ಬೆಲೆಗಳು ಏರುತ್ತದೆ ಮತ್ತು ಇಳಿಯುತ್ತವೆ. ತೈಲ ಮತ್ತು ಅನಿಲದ ಬೆಲೆಯನ್ನು ನಿಗದಿಪಡಿಸುವ ಹಕ್ಕನ್ನು ಸರ್ಕಾರವು ಸರ್ಕಾರಿ ಕಂಪನಿಗಳಿಗೆ (ಆಯಿಲ್ ಮಾರ್ಕೆಟಿಂಗ್ ಕಂಪನಿಗಳು) ನೀಡಿದೆ. ಈ ಕಂಪನಿಗಳು ಜುಲೈ 6, 2022 ರಿಂದ LPG ಬೆಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಇದೇ ಅವಧಿಯಲ್ಲಿ ಇದುವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ಶೇಕಡಾ 30 ರಷ್ಟು ಕುಸಿದಿದೆ. ಅಂದರೆ ಕಂಪನಿಗಳು ತೈಲ ಮತ್ತು ಅನಿಲವನ್ನು ಅತ್ಯಂತ ಅಗ್ಗವಾಗಿ ಖರೀದಿಸಿ ಜನರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ.
ಇದನ್ನೂ ಓದಿ : Electric Bill: ಮನೆ ಮೇಲ್ಚಾವಣಿಯಲ್ಲಿ ಈ ಲೈಟಿಂಗ್ ವ್ಯವಸ್ಥೆ ಅಳವಡಿಸಿ ಉಚಿತವಾಗಿ ವಿದ್ಯುತ್ ಬಳಸಿ!
ಅಕ್ಟೋಬರ್ 2022 ರಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $85 ಆಗಿತ್ತು. ಆ ಸಮಯದಲ್ಲಿ, LPG ಸಿಲಿಂಡರ್ ರೂ.899 ಕ್ಕೆ ದೇಶದಲ್ಲಿ ಲಭ್ಯವಿತ್ತು. ಅಂದಿನಿಂದ ಇಲ್ಲಿಯವರೆಗೆ ಸರ್ಕಾರ ಈ ಬೆಲೆಯನ್ನು ಸುಮಾರು 150 ರೂಪಾಯಿಗಳಷ್ಟು ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಈಗ ಪ್ರತಿ ಬ್ಯಾರೆಲ್‌ಗೆ 83 ಡಾಲರ್‌ಗೆ ಇಳಿದಿದೆ. ಅಂದರೆ, ಅಕ್ಟೋಬರ್ 2021 ರಿಂದಲೂ ತೈಲ ಬೆಲೆ ಕಡಿಮೆಯಾಗಿದೆ. ಅದರಂತೆ, ಹೊಸ ವರ್ಷದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ 150 ರೂ.ವರೆಗೆ ಕಡಿತವನ್ನು ಸರ್ಕಾರ ಘೋಷಿಸುವ ಸಾಧ್ಯತೆಯಿದೆ.
ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗೆಹ್ಲೋಟ್ ಸರ್ಕಾರ ದೊಡ್ಡ ಪಣತೊಟ್ಟಿದೆ. ಏಪ್ರಿಲ್ 1, 2023 ರಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳು ರಾಜಸ್ಥಾನದ ಜನರಿಗೆ ರೂ.500 (ಎಲ್‌ಪಿಜಿ ಬೆಲೆ) ಗೆ ಲಭ್ಯವಾಗಲಿವೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ. ಜೈಪುರದಲ್ಲಿ ಪ್ರಸ್ತುತ ಎಲ್‌ಪಿಜಿ ಸಿಲಿಂಡರ್ ಬೆಲೆ 1056 ರೂ. ಅದೇನೆಂದರೆ, ಗೆಹ್ಲೋಟ್ ಸರ್ಕಾರವು ಮುಂದಿನ ವರ್ಷಎಲ್‌ಪಿಜಿ ಸಿಲೆಂಡರ್‌ಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಜನರಿಗೆ ಲಭ್ಯವಾಗುವಂತೆ ಮಾಡಲಿದೆ.
ಇದನ್ನೂ ಓದಿ : ಹೊಸ, ಶಕ್ತಿಯುತ, ಸ್ಟೈಲಿಶ್, XPULSE 200T 4Valve ಅನಾವರಣ
ರಾಜಸ್ಥಾನ ಸರ್ಕಾರದ ಈ ಪಣತೊಟ್ಟು ಕೇಂದ್ರ ಸರ್ಕಾರದ ಮೇಲೆ ಎಲ್‌ಪಿಜಿ ಬೆಲೆ ಇಳಿಸುವಂತೆ ಒತ್ತಡ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಮಹತ್ವದ ಘೋಷಣೆ ಹೊರಬೀಳಬಹುದು ಎಂಬ ಸಾಧ್ಯತೆಯಿದೆ. ಪ್ರಸ್ತುತ ಗ್ಯಾಸ್ ಸಿಲಿಂಡರ್‌ಗಳು ಮುಂಬೈನಲ್ಲಿ 1052.50 ರೂ., ಕೋಲ್ಕತ್ತಾದಲ್ಲಿ 1079 ರೂ., ದೆಹಲಿಯಲ್ಲಿ 1053 ರೂ., ಪಾಟ್ನಾದಲ್ಲಿ 1151 ರೂ., ಲಕ್ನೋದಲ್ಲಿ 1090 ರೂ. ಮತ್ತು ಚೆನ್ನೈನಲ್ಲಿ 1068 ರೂ.ಗೆ ಲಭ್ಯವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.