ಗ್ಯಾರಂಟಿ ರಹಿತ Business Loan ಬೇಕೇ? ಈ ಸಿಂಪಲ್ ಷರತ್ತು ಪೂರ್ಣಗೊಳಿಸಿ

ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ Emergency Credit Line Guarantee Scheme (ECLGS)ನಲ್ಲಿ ಮತ್ತೆ 26 ಕ್ಷೇತ್ರಗಳನ್ನು ಜೋಡಿಸಿದೆ. ಇದರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಕಾಮತ್ ಸಮೀತಿ ಈ ಕ್ಷೇತ್ರಗಳನ್ನು ಗುರುತಿಸಿತ್ತು. ಸಾಲದ ಮರುಪಾವತಿಯನ್ನು 48 ಕಂತುಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವರ್ಷದವರೆಗೆ EMIನಿಂದ ಮುಕ್ತಿ ಕೂಡ ಇರಲಿದೆ.

Last Updated : Nov 28, 2020, 03:55 PM IST
  • ಕೇಂದ್ರ ಸರ್ಕಾರ ECLGSಗೆ ಒಟ್ಟು 26 ಕ್ಷೇತ್ರಗಳನ್ನು ಜೋಡಿಸಿದೆ.
  • ರಿಸರ್ವ್ ಬ್ಯಾಂಕ್ ರಚಿಸಿರುವ ಕಾಮತ್ ಸಮೀತಿ ಈ ಕ್ಷೇತ್ರಗಳನ್ನು ಗುರುತಿಸಿದೆ.
  • ಬಿಸಿನೆಸ್ ಗಾಗಿ ನೀವು ಪಡೆದ ಸಾಲಕ್ಕೆ ಒಂದು ವರ್ಷದ ಕಾಲ EMIನಿಂದ ಮುಕ್ತಿ ಕೂಡ ಇರಲಿದೆ.
ಗ್ಯಾರಂಟಿ ರಹಿತ Business Loan ಬೇಕೇ? ಈ ಸಿಂಪಲ್ ಷರತ್ತು ಪೂರ್ಣಗೊಳಿಸಿ title=

ನವದೆಹಲಿ: ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ (Modi Government)  Emergency Credit Line Guarantee Scheme (ECLGS)ನಲ್ಲಿ ಮತ್ತೆ 26 ಕ್ಷೇತ್ರಗಳನ್ನು ಜೋಡಿಸಿದೆ. ಇದರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಕಾಮತ್ ಸಮೀತಿ ಈ ಕ್ಷೇತ್ರಗಳನ್ನು ಗುರುತಿಸಿತ್ತು. ಸಾಲದ ಮರುಪಾವತಿಯನ್ನು 48 ಕಂತುಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವರ್ಷದವರೆಗೆ EMIನಿಂದ ಮುಕ್ತಿ ಕೂಡ ಇರಲಿದೆ.

ಇದನ್ನು ಓದಿ - Google Sites: Freeಯಾಗಿ ವೆಬ್ ಸೈಟ್ ರಚಿಸಿ ನಿಮ್ಮ ಬಿಸಿನೆಸ್ ಹಾಗೂ ಸ್ಟಾರ್ಟ್ ಅಪ್ ಗೆ ಹೊಸ ಮೆರಗು ನೀಡಿ

ಬಿಸನೆಸ್ ಗಾಗಿ ಯಾವುದೇ  ರೀತಿಯ ಗ್ಯಾರಂಟಿ ಇಲ್ಲದೆ ಸಾಲ
ಬಿಸಿನೆಸ್ ಗಾಗಿ ನೀವು ಪಡೆದ ಸಾಲಕ್ಕೆ ಒಂದು ವರ್ಷದ ಕಾಲ EMIನಿಂದ ಮುಕ್ತಿ ಕೂಡ ಇರಲಿದೆ.

ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಕಂಪನಿ
ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಕಂಪನಿ ಲಿ.(NCGTC) ECLGS 2.0 ಯೋಜನೆಯನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಸರ್ಕಾರ ಇದಕ್ಕಾಗಿ ಈ ತಿಂಗಳ ಆರಂಭದಲ್ಲಿ 2.65 ಲಕ್ಷ ಕೋಟಿ ರೂ. ಆತ್ಮನಿರ್ಭರ್ ಭಾರತ 3.0 ಪ್ಯಾಕೇಜ್ ಅಡಿ ಯೋಜನೆಯನ್ನು ಘೋಷಿಸಿತ್ತು.

ಇದನ್ನು ಓದಿ-Boss ನೀಡಿದ Gift ನಿಂದ ಕೋಟ್ಯಾಧಿಪತಿಗಳಾಗಿದ್ದಾರೆ ಈ ಕಂಪನಿಯ ನೌಕರರು

500 ಕೋಟಿ ರೂ.ವರೆಗೆ ಸಾಲ ಸಿಗಲಿದೆ
ಈ ಕುರಿತು ನೀಡಲಾಗಿರುವ ಹೇಳಿಕೆಯ ಪ್ರಕಾರ, ಯಾವ ಯೂನಿಟ್ ಗಳ ಮೇಲೆ 29 ಫೆಬ್ರುವರಿ 2020ರವರೆಗೆ 1 ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಗೆ 50 ರಿಂದ 500 ಕೋಟಿ ರೂ.ವರೆಗೆ ಸಾಲ ಇದೆಯೋ ಅವುಗಳಿಗೆ ಸಾಲ ಸಿಗಲಿದೆ.

ಮೂಲ ಸಾಲವನ್ನು ನಂತರ ಮರುಪಾವತಿಸಬಹುದು
ECLGS 2.0 ಅಡಿ ನೀಡಲಾಗುವ ಸಾಲವನ್ನು ಮರುಪಾವತಿಸಲು 5 ವರ್ಷಗಳ ಕಾಲಾವಧಿ ಇರಲಿದ್ದು, 12 ತಿಂಗಳು ಅವಧಿಯವರೆಗೆ PRINCIPAL ಹಣ ಕಟ್ಟುವುದರಿಂದ ವಿನಾಯ್ತಿ ಸಿಗಲಿದೆ. ಈ ಸಂಸ್ಥೆಗಳು ಅಥವಾ ಸಾಲ ಪಡೆದವರು ತಮ್ಮ ಔತ್ತು ಸಾಲದ ಶೇ.20 ರಷ್ಟು ಅಧಿಕ ಸಾಲ ಪಡೆಯಬಹುದು. ಇದು ಸಂಪೂರ್ಣ ಗ್ಯಾರಂಟಿರಹಿತ ಸಾಲವಗಿರಲಿದೆ. ಅಂದರೆ ಇದಕ್ಕಾಗಿ ಸಾಲಗಾರರು ಯಾವುದೇ ರೀತಿಯ ಅಡವು ಅಥವಾ ಗ್ಯಾರಂಟಿ ನೀಡುವ ಅವಶ್ಯಕತೆ ಇಲ್ಲ.

ಇದನ್ನು ಓದಿ- ನಿಮ್ಮ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಈ ರೀತಿ ಪಡೆಯಿರಿ ಸಹಾಯ

50 ಕೋಟಿ ಇದ್ದರು ಸಹ ಲಾಭದಾಯಕ
ECLGS 2.0 ಹೊರತಾಗಿಯೂ ಕೂಡ ECLGS1.0ಯ ಲಾಭ 29 ಫೆಬ್ರವರಿ 2020ರವರೆಗೆ ಒಟ್ಟು 50 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡ ಯುನಿಟ್ ಗಳಿಗೂ ಕೂಡ ಸಿಗಲಿದೆ.  ಇದಕ್ಕಾಗಿ ಇತರೆ ಮಾರ್ಗಸೂಚಿಗಳು ಅಥವಾ ಷರತ್ತುಗಳು ಇರುವುದಿಲ್ಲ.

61 ಲಕ್ಷ ಕಂಪನಿಗಳಿಗೆ ನೀಡಲಾಗಿದೆ ಸಾಲ
ವರದಿಗಳ ಪ್ರಕಾರ ನವೆಂಬರ್ 12ರವರೆಗೆ ಬ್ಯಾಂಕ್ ಹಾಗೂ ಆರ್ಥಿಕ ಸಂಸ್ಥೆಗಳು ಒಟ್ಟು 61 ಲಕ್ಷ MSMEಗಳಿಗೆ ಒಟ್ಟು 2.05 ಲಕ್ಷ ಕೋಟಿ ರೂ.ಗಳಿಗೆ ಅನುಮತಿ ನೀಡಿವೆ. ಆದರೆ, ಸಾಲ ಹಂಚಿಕೆ ಮಾತ್ರ 1.52 ಲಕ್ಷ ಕೋಟಿ ರೂ. ಇಟ್ಟು. ರಿಸರ್ವ್ ಬ್ಯಾಂಕ್ ನಿಂದ ನಿರ್ಮಿಸಲ್ಪಟ್ಟ ಕಾಮತ್ ಸಮೀತಿ ಸಾಲ ಮರು ಹಂಚಿಕೆಗಾಗಿ ಆಯ್ಕೆ ಮಾಡಲಾಗಿರುವ ಕ್ಷೇತ್ರಗಳಲ್ಲಿ ವಿದ್ಯುತ್, ನಿರ್ಮಾಣ, ರಿಯಲ್ ಎಸ್ಟೇಟ್, ಜವಳಿ, ಔಷಧಿ, ಲಾಜಿಸ್ಟಿಕ್, ಸಿಮೆಂಟ್, ವಾಹನ, ಹೋಟೆಲ್ ಮತ್ತು ರೆಸ್ಟಾರೆಂಟ್ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಶಾಮೀಲಾಗಿವೆ.

Trending News