ನವದೆಹಲಿ: ಎಲ್‌ಐಸಿ ಹಾಲಿಡೇ ಹೊಸ ನಿಯಮ: ನೀವು ಜೀವ ವಿಮಾ ನಿಗಮದ ಅಂದರೆ ಎಲ್‌ಐಸಿಯ ಗ್ರಾಹಕರಾಗಿದ್ದರೆ, ಈ ಸುದ್ದಿಯನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತವವಾಗಿ, ಇನ್ನುಮುಂದೆ ಪ್ರತಿ ಶನಿವಾರ ಎಲ್‌ಐಸಿ ಉದ್ಯೋಗಿಗಳಿಗೆ ರಜೆ ಇರಲಿದೆ. ಎಲ್ಐಸಿ ಈಗ ವಾರದಲ್ಲಿ 5 ದಿನಗಳು ಮಾತ್ರ ಕೆಲಸ ಮಾಡುತ್ತದೆ, ಉಳಿದ ಎರಡು ದಿನಗಳನ್ನು ಸಾರ್ವಜನಿಕ ರಜಾದಿನವೆಂದು ಪರಿಗಣಿಸಲಾಗುತ್ತದೆ.
ವಾರದಲ್ಲಿ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿರುವ ಎಲ್ಐಸಿ ಕಚೇರಿ :
ಮೇ 10 ರ ನಂತರ ನಿಮಗೆ ಎಲ್ಐಸಿ (LIC) ಕಚೇರಿಯಲ್ಲಿ ಏನೇ ಕೆಲಸ ಇದ್ದರೂ ಅದನ್ನು ನೀವು ಸೋಮವಾರದಿಂದ ಶುಕ್ರವಾರದವರೆಗೆ ಮುಗಿಸಿಕೊಳ್ಳಬೇಕು. ಏಕೆಂದರೆ ಶನಿವಾರ ಮತ್ತು ಭಾನುವಾರ ಕಚೇರಿ ಮುಚ್ಚಲ್ಪಡುತ್ತದೆ. ವಾಸ್ತವವಾಗಿ, ಈಗ ಪ್ರತಿ ಶನಿವಾರವೂ ಎಲ್‌ಐಸಿಗೆ ಸಾರ್ವಜನಿಕ ರಜಾದಿನವೆಂದು ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ - LIC ತಂದಿದೆ ಹೊಸ ಉಳಿತಾಯ ಯೋಜನೆ ; ಕಷ್ಟದ ಸಮಯದಲ್ಲಿ ಕೈ ಹಿಡಿಯಲಿದೆ ಈ policy
ಶನಿವಾರವೂ ರಜಾದಿನವಾಗಿದೆ:
ಎಲ್‌ಐಸಿಯ ಹೊಸ ನಿಯಮಗಳ (LIC New Rule) ಪ್ರಕಾರ, ಮೇ 10 ರಿಂದ ಎಲ್‌ಐಸಿ ಕಚೇರಿಗಳು ವಾರದಲ್ಲಿ 5 ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಈಗ ಪ್ರತಿ ಶನಿವಾರ ನೌಕರರ ರಜಾದಿನವಿರುತ್ತದೆ. ಇದುವರೆಗೆ ನೌಕರರಿಗೆ ಭಾನುವಾರ ಮಾತ್ರ ರಜೆ ನೀಡಲಾಗುತ್ತಿತ್ತು. ಆದರೆ ಈಗ ನೌಕರರಿಗೆ ವಾರಕ್ಕೆ 2 ದಿನಗಳ ರಜೆ ಸಿಗುತ್ತದೆ.
ಎಲ್ಐಸಿಯ ಹಾಲಿಡೇ ನಿಯಮಗಳಲ್ಲಿ ಬದಲಾವಣೆ:
ಎಲ್‌ಐಸಿಯು ಕೆಲಸದ ದಿನಗಳಲ್ಲಿ ಈ ಬದಲಾವಣೆಯ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಜನರಿಗೆ ತಿಳಿಸಿದೆ. ಹೊಸ ನಿಯಮಗಳ ಪ್ರಕಾರ, ಎಲ್ಐಸಿಯ ಕಚೇರಿ ಮೇ 10 ರ ನಂತರ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ. ಅದರ ಸಮಯ ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ಇರುತ್ತದೆ. ಆದ್ದರಿಂದ ನೀವು ಯಾವುದೇ ಕೆಲಸಕ್ಕಾಗಿ ಎಲ್ಐಸಿ ಕಚೇರಿಗೆ ಹೋಗುತ್ತಿದ್ದರೆ, ದಿನ ಮತ್ತು ಸಮಯ ಎರಡನ್ನೂ ನೋಡಿಕೊಳ್ಳಿ, ಇಲ್ಲದಿದ್ದರೆ ನೀವು ಖಾಲಿ ಕೈಯಲ್ಲಿ ಹಿಂತಿರುಗಬೇಕಾಗುತ್ತದೆ. ಕಳೆದ ತಿಂಗಳಷ್ಟೇ ಸರ್ಕಾರ ಈ ಬದಲಾವಣೆಗಳನ್ನು ಮಾಡಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ 1881 ರ ಸೆಕ್ಷನ್ 25 ರ ಅಡಿಯಲ್ಲಿ ಪಡೆದ ಅಧಿಕಾರಗಳ ಆಧಾರದ ಮೇಲೆ ಸರ್ಕಾರವು ಈ ಬದಲಾವಣೆಗಳನ್ನು ಮಾಡಿದೆ.
ಇದನ್ನೂ ಓದಿ - ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್.! ಪೇಟಿಎಂ ಜೊತೆ ಏರ್ಪಟ್ಟ ಒಪ್ಪಂದ ಏನು..?
ಎಲ್ಐಸಿಗೆ ಬಂಪರ್ ಆದಾಯ:
ಎಲ್‌ಐಸಿ ಕಳೆದ ಹಣಕಾಸು ವರ್ಷದಲ್ಲಿ ಪ್ರೀಮಿಯಂನಿಂದ 1.84 ಲಕ್ಷ ಕೋಟಿ ರೂ.ಗಳ ಬಂಪರ್ ಆದಾಯ ಗಳಿಸಿದೆ, ಇದು ಇಲ್ಲಿಯವರೆಗೆ ದಾಖಲೆಯ ಗಳಿಕೆಯಾಗಿದೆ. ಎಲ್‌ಐಸಿ ಕೂಡ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಬಲಪಡಿಸಿದೆ. ಪಾಲಿಸಿ ಸಂಖ್ಯೆಯ ಪ್ರಕಾರ ಮಾರ್ಚ್ 2021 ರಲ್ಲಿ ಎಲ್ಐಸಿಯ ಮಾರುಕಟ್ಟೆ ಪಾಲು 81.04 ರಷ್ಟಿತ್ತು, ಇದು ಇಡೀ ಹಣಕಾಸು ವರ್ಷದಲ್ಲಿ 74.58 ಶೇಕಡಾ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.