Automated Vehicle Inspection : ಕುಳಿತಲ್ಲೇ ನಡೆಯುತ್ತೆ ವಾಹನ ವಿಮೆ ನವೀಕರಣ ..!

ನಿಮ್ಮ ವಾಹನ ವಿಮೆ ಕೊನೆಯಾಗುತ್ತಿದ್ದರೆ ಅಥವಾ ಕ್ಲೈಂ ಸೆಟಲ್ ಮೆಂಟ್ ಮಾಡಿಸುವುದು ಸಮಯ ತೆಗೆದುಕೊಳ್ಳುತ್ತಿದೆ ಎಂದಾದರೆ ನಿಮಗೆ ಸಹಕಾರಿಯಾಗುವ ಸುದ್ದಿ ಇಲ್ಲಿದೆ. ಲಿಬರ್ಟಿ ಜನರಲ್ ಇನ್ಶುರೆನ್ಸ್ ಆಟೋಮ್ಯಾಟೆಡ್ ವೆಹಿಕಲ್ ಇನ್ಸ್ ಪೆಕ್ಶನ್ ಸೇವೆಯನ್ನು ಆರಂಭಿಸಿದೆ.  ಇದರ ಮೂಲಕ ಫಟಾ ಫಟ್ ಆಗಿ ಕೆಲಸ ಪೂರ್ತಿಗೊಳಿಸಬಹುದು.

Written by - Ranjitha R K | Last Updated : Feb 18, 2021, 03:38 PM IST
  • ಪಾಲಿಸಿ ನವೀಕರಣಕ್ಕಾಗಿ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ
  • ಕುಳಿತಲ್ಲೇ ಥಟ್ಟ್ ಅಂತ ನಡೆಯುತ್ತೆ ವಿಮೆ ನವೀಕರಣದ ಕೆಲಸ
  • ನಿಮ್ಮ ವಾಹನದ ಫೋಟೋ ಮತ್ತು ವಿಡಿಯೋ ಮಾಡಿ ಕಳುಹಿಸಿದರೆ ಸಾಕು..!
Automated Vehicle Inspection : ಕುಳಿತಲ್ಲೇ ನಡೆಯುತ್ತೆ ವಾಹನ ವಿಮೆ ನವೀಕರಣ ..! title=
ಕುಳಿತಲ್ಲೇ ಥಟ್ಟ್ ಅಂತ ನಡೆಯುತ್ತೆ ವಿಮೆ ನವೀಕರಣ (file photo)

ದೆಹಲಿ : ವಿಮಾ ಕಂಪನಿಗಳು (Insurance company) ವಿಮೆಯನ್ನು ಗ್ರಾಹಕರಿಗೆ ಮಾರಾಟ  ಮಾಡುವ ವೇಳೆಯಲ್ಲಿ ವಿಮೆಯ ಎಲ್ಲಾ ಪ್ರಯೋಜನಗಳ ಪಟ್ಟಿಯನ್ನೇ ಮುಂದಿಡುತ್ತದೆ, ಆದರೆ ಆ ವಿಮೆಯ ನಿಜಬಣ್ಣ ತಿಳಿಯುವುದು ಕ್ಲೈಂ ಸಮಯದಲ್ಲೇ. ಪಾಲಿಸಿ ಕ್ಲೈಂ ಸಂದರ್ಭದಲ್ಲಿ, ಗ್ರಾಹಕರು, ಕಚೇರಿಗಳಿಗೆ ಅಲೆದಾಟ ನಡೆಸಬೇಕಾಗುತ್ತದೆ. ಆದರೆ ಲಿಬರ್ಟಿ ಜನರಲ್ ಇನ್ಶುರೆನ್ಸ್ (liberty general insurance) ಈ ಸಮಸ್ಯೆಯನ್ನು ಕಡಿಮೆಮಾಡಿದೆ. 

ಆಟೋಮ್ಯಾಟೆಡ್ ವೆಹಿಕಲ್ ಇನ್ಸ್ ಪೆಕ್ಶನ್ ಸೇವೆ ಎಂದರೇನು ? 
ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಇನ್ಸ್ಪೆಕ್ಶನ್  (Artificial inteligence inspection) ಪ್ರಕ್ರಿಯೆಯಡಿಯಲ್ಲಿ, ಗ್ರಾಹಕರು (customers) ತಮ್ಮ ಕಾರು ವಿಮೆಯನ್ನು ನವೀಕರಿಸಲು ಅಥವಾ ಕ್ಲೈಂ ಸೆಟಲ್ ಮಾಡಲು ಕಾರಿನ ಫೋಟೋ ಮತ್ತು ವಿಡಿಯೋ ಮಾಡಬೇಕಾಗುತ್ತದೆ. ನಂತರ ಪಾಲಿಸಿದಾರ  ಫೋಟೋ ಮತ್ತು ವಿಡಿಯೋವನ್ನು ಕಂಪನಿಯ  ಮೇಲ್ ಐಡಿಗೆ ಕಳುಹಿಸಿಕೊಡಬೇಕು. ಕಂಪನಿಗೆ ಪಾಲಿದಾರನ  ಮೇಲ್ (e mail) ಸಿಕ್ಕಿದ ತಕ್ಷಣ ಕಂಪನಿಯ ಕಡೆಯಿಂದ ಆಟೋಮ್ಯಾಟೆಡ್ ವೆಹಿಕಲ್ ಇನ್ಸ್ ಪೆಕ್ಶನ್ (Automated Vehicle Inspection) ರಿಪೋರ್ಟ್ ಮತ್ತು ಕ್ಲೈಂ ಸೆಟಲ್ ಮೆಂಟ್ ರಿಪೋರ್ಟ್ ಸಿದ್ದಪಡಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಕೆಲವೇ ದಿನಗಳಲ್ಲಿ ಪಾಲಿಸಿದಾರನಿಗೆ ಆಟೋಮ್ಯಾಟೆಡ್ ವೆಹಿಕಲ್ ಇನ್ಸ್ ಪೆಕ್ಶನ್ ರಿಪೋರ್ಟ್ ಸಿಗುತ್ತದೆ. ಅಂದರೆ ಕೇವಲ  ಇ ಮೇಲ್ ಮೂಲಕವೇ ಎಲ್ಲಾ ಕೆಲಸ ನಡೆದು ಹೋಗುತ್ತದೆ, ಕಚೇರಿಗೆ ಅಲೆಯುವ ಅವಶ್ಯಕತೆಯಿಲ್ಲ. 

ಇದನ್ನೂ ಓದಿ : SBI Alert : ಇದು ಭಾರೀ `ಮೋಸದ ಜಾಲ', ಬಿಟ್ಟು ಬಿಡಿ ದುರಾಸೆಯ ಫಟಾಫಟ್ ಸಾಲ..!

ಕುಳಿತ ಜಾಗದಲ್ಲೇ ನಡೆಯುತ್ತೆ ಪಾಲಿಸಿ ನವೀಕರಣದ ಕೆಲಸ :
ಪಾಲಿಸಿ ನವೀಕರಣದಲ್ಲಿಯೂ (Insurance renewal)ಆಟೋಮ್ಯಾಟೆಡ್ ವೆಹಿಕಲ್ ಇನ್ಸ್ ಪೆಕ್ಶನ್ ಬಹಳ ಸಹಕಾರಿಯಾಗಿದೆ. ಸಾಮಾನ್ಯವಾಗಿ ಪಾಲಿಸಿ (Policy) ನವೀಕರಣದ ವೇಳೆ, ವಾಹನ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವಿಮಾ ಕಂಪನಿಯ ಅಧಿಕಾರಿಗಳು ಬಂದು ವಾಹನದ ಪರೀಕ್ಷೆ ನಡೆಸುತ್ತಾರೆ. ಇದು ಬಹಳ ದಿನಗಳ ಪ್ರಕ್ರಿಯೆಯಾಗಿರುತ್ತದೆ. ಆದರೆ ಆಟೋಮ್ಯಾಟೆಡ್ ವೆಹಿಕಲ್ ಇನ್ಸ್ ಪೆಕ್ಶನ್ ನಲ್ಲಿ ನೀವು ಕುಳಿತ ಜಾಗದಿಂದಲೇ ವಿಮೆ ನವೀಕರಣದ ಪ್ರಕ್ರಿಯೆ ಪೂರ್ತಿಗೊಳಿಸಬಹುದು.

ಫಟಾಫಟ್ ಮುಗಿಯುತ್ತೆ ನಿಮ್ಮ ಕೆಲಸ :
Liberty General Insurance ಪ್ರಕಾರ, ಕಾರು ತಪಾಸಣೆ ಪ್ರಕ್ರಿಯೆಯನ್ನು ಆಟೊಮ್ಯಾಟೆಡ್ ಗೊಳಿಸುವ  ಸ್ವಯಂಚಾಲಿತಗೊಳಿಸುವ ಕೆಲಸ 2 ವರ್ಷಗಳಿಂದ ನಡೆಯುತ್ತಿದೆ. ವಿಮಾದಾರರಿಗೆ ಸ್ವಯಂಚಾಲಿತ ವಾಹನ ತಪಾಸಣೆ ಸೌಲಭ್ಯವನ್ನು ಒದಗಿಸಲು ಲಿಬರ್ಟಿ ಸಿಟಿಸ್ಟೇಟ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್, ಎನಾಮ್ ಸೆಕ್ಯುರಿಟೀಸ್ ಮತ್ತು ಡೈಮಂಡ್ ಡೀಲ್ಟ್ರೇಡ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.   ಒಪ್ಪಂದದ ಪ್ರಕಾರ, ಗ್ರಾಹಕರಿಗೆ, Automated Vehicle Inspection ಸೇವೆ ಒದಗಿಸಲಾಗುತ್ತದೆ.  ಈ ತಂತ್ರಜ್ಞಾನದಿಂದ, ಗ್ರಾಹಕ ಮತ್ತು ಕಂಪನಿಯ ಸಮಯ, ವೆಚ್ಚ ಮತ್ತು ಕಾಗದಪತ್ರ ವ್ಯವಹಾರಗಳು ಕಡಿಮೆಯಾಗುತ್ತದೆ.  

ಇದನ್ನೂ ಓದಿ Investment In Digital Gold - ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವ ಮೊದಲು ಈ ಪೇಚು ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News