ಅಗ್ಗದ ದರದಲ್ಲಿ ಕಾರು ಖರೀದಿಗೆ ಇದುವೇ ಕೊನೆಯ ಅವಕಾಶ, ತಪ್ಪಿದರೆ ಬಜೆಟ್ ಮೀರಿ ಹೋಗಲಿದೆ ಬೆಲೆ

 ಮಾರುತಿ ಸುಜುಕಿಯಿಂದ ಟಾಟಾವರೆಗೆ ಮತ್ತು ಟೊಯೊಟಾದಿಂದ ಮರ್ಸಿಡಿಸ್‌ವರೆಗೆ ಎಲ್ಲರೂ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಲಿದ್ದಾರೆ. ಇದೇ ವೇಳೆ, ಬಹುತೇಕ ಎಲ್ಲಾ ಕಂಪನಿಗಳು ಪ್ರಸಕ್ತ ವರ್ಷದ ಕೊನೆಯ ತಿಂಗಳಲ್ಲಿ ತಮ್ಮ ವಾಹನಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿವೆ. 

Written by - Ranjitha R K | Last Updated : Dec 31, 2021, 12:19 PM IST
  • ಅಗ್ಗದ ಬೆಲೆಗೆ ಕಾರು ಖರೀದಿಸಲು ಕೊನೆಯ ಅವಕಾಶ
  • ಹೊಸ ವರ್ಷದಲ್ಲಿ ಕಾರುಗಳ ಬೆಲೆ ಹೆಚ್ಚಾಗಲಿದೆ
  • ಪ್ರಸ್ತುತ ಕಾರುಗಳ ಮೇಲೆ ಆಫರ್ ನೀಡಲಾಗುತ್ತಿದೆ
ಅಗ್ಗದ ದರದಲ್ಲಿ ಕಾರು ಖರೀದಿಗೆ ಇದುವೇ ಕೊನೆಯ ಅವಕಾಶ, ತಪ್ಪಿದರೆ ಬಜೆಟ್ ಮೀರಿ ಹೋಗಲಿದೆ ಬೆಲೆ  title=
ಅಗ್ಗದ ಬೆಲೆಗೆ ಕಾರು ಖರೀದಿಸಲು ಕೊನೆಯ ಅವಕಾಶ (file photo)

ನವದೆಹಲಿ : ಭಾರತೀಯ ವಾಹನ ಜಗತ್ತಿನ ಬಹುತೇಕ ಎಲ್ಲಾ ಪ್ರಮುಖ ವಾಹನ ತಯಾರಕರು, ಹೊಸ ವರ್ಷದಲ್ಲಿ (New Year) ಬೆಲೆಯಲ್ಲಿ ಏರಿಕೆ ಮಾಡುವುದಾಗಿ (Price Hike) ಘೋಷಿಸಿದ್ದಾರೆ. ಮಾರುತಿ ಸುಜುಕಿಯಿಂದ ಟಾಟಾವರೆಗೆ ಮತ್ತು ಟೊಯೊಟಾದಿಂದ ಮರ್ಸಿಡಿಸ್‌ವರೆಗೆ ಎಲ್ಲರೂ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಲಿದ್ದಾರೆ. ಇದೇ ವೇಳೆ, ಬಹುತೇಕ ಎಲ್ಲಾ ಕಂಪನಿಗಳು ಪ್ರಸಕ್ತ ವರ್ಷದ ಕೊನೆಯ ತಿಂಗಳಲ್ಲಿ ತಮ್ಮ ವಾಹನಗಳ ಮೇಲೆ ಬಂಪರ್ ರಿಯಾಯಿತಿಗಳನ್ನು (Bumper discount) ನೀಡುತ್ತಿವೆ. ಈ ವಾಹನಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಖರೀದಿಸಲು ಇಂದು ಕೊನೆಯ ಅವಕಾಶವಾಗಿದೆ. ಇಂದು ವರ್ಷದ ಕೊನೆಯ ದಿನವಾಗಿದ್ದು, ಹೊಸ ವರ್ಷದಲ್ಲಿ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು (Car price hike) ಹೆಚ್ಚಿಸಲಿವೆ. ಹಾಗಾದರೆ ಯಾವ ಕಂಪನಿ ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್ ನೀಡುತ್ತಿದೆ ನೋಡೋಣ. 

ಯಾವ ಕಂಪನಿಯಿಂದ ಎಷ್ಟು ರಿಯಾಯಿತಿ ? 
ಮಾರುತಿ ಸುಜುಕಿ (Maruti Suzuki) ಎಸ್-ಕ್ರಾಸ್ - ಕಂಪನಿಯು ಈ ಕಾರಿನ ಮೇಲೆ  45,000 ರೂ ವರೆಗೆ ರಿಯಾಯಿತಿಯನ್ನು (Discount) ನೀಡಿದೆ.
ರೆನಾಲ್ಟ್ ಟ್ರೈಬರ್ 2021 - ಕಂಪನಿಯು ಈ ಕಾರಿನ ಮೇಲೆ  40,000 ರೂ ವರೆಗೆ ಕೊಡುಗೆಗಳನ್ನು ಒದಗಿಸಿದೆ.
ರೆನಾಲ್ಟ್ ಟ್ರೈಬರ್ 2020 - ಟ್ರೈಬರ್‌ನ ಹಳೆಯ ಮಾದರಿಯಲ್ಲಿ 60,000 ರೂ  ವರೆಗೆ ರಿಯಾಯಿತಿ ನೀಡಲಾಗಿದೆ.
ಟೊಯೊಟಾ ಅರ್ಬನ್ ಕ್ರೂಸರ್ - ಕಂಪನಿಯು ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ  15,000 ರೂ. ವರೆಗೆ ಡಿಸ್ಕೌಂಟ್ ನೀಡಿದೆ.

ಇದನ್ನೂ ಓದಿ : ಜನವರಿ 1 ರಿಂದ ದುಬಾರಿಯಾಗಲಿವೆ ಟಿವಿ, ಫ್ರಿಜ್ ಮತ್ತು ವಾಷಿಂಗ್ ಮೆಷಿನ್‌ನಂತಹ ಗೃಹೋಪಯೋಗಿ ವಸ್ತುಗಳು..!

ವರ್ಷದ ಕೊನೆಯ ತಿಂಗಳಲ್ಲಿ ಬಂಪರ್ ರಿಯಾಯಿತಿ :
ಹುಂಡೈ ಔರಾ - ಈ ಕಾರಿನಲ್ಲಿ 50,000 ರೂ. ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.
ಹೋಂಡಾ ಸಿಟಿ - ಕಂಪನಿಯು ಈ ಕಾರಿನ ಮೇಲೆ ಒಟ್ಟು 35,500 ರೂ . ಆಫರ್‌ಗಳನ್ನು ನೀಡಿದೆ.
Grand i10 Nios - ಈ ಕಾರಿನ ಮೇಲೆ ಒಟ್ಟು 50,000 ರೂ.ವರೆಗೆ ರಿಯಾಯಿತಿ ನೀಡಲಾಗಿದೆ.
ಮಾರುತಿ ಸುಜುಕಿ ಆಲ್ಟೊ (Maruti Suzuki Alto) - ಗ್ರಾಹಕರ ನೆಚ್ಚಿನ ಕಾರಿನ ಮೇಲೆ 48,000 ರೂ.ವರೆಗೆ ಒಟ್ಟು ಪ್ರಯೋಜನ ಸಿಗುತ್ತಿದೆ.
 
ಹೊಸ ವರ್ಷದಲ್ಲಿ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಲಿವೆ :

ಟಾಟಾ ನೆಕ್ಸಾನ್ EV - ಈ ಎಲೆಕ್ಟ್ರಿಕ್ SUV 15,000 ರೂ.ವರೆಗೆ ಒಟ್ಟು ರಿಯಾಯಿತಿಯನ್ನು ಪಡೆದುಕೊಂಡಿದೆ.
ಮಹೀಂದ್ರಾ KUV100 - ಈ ಕಾರನ್ನು ಒಟ್ಟು 61,055 ರೂಪಾಯಿಗಳ ರಿಯಾಯಿತಿಯೊಂದಿಗೆ ಪರಿಚಯಿಸಲಾಗಿದೆ.
ಹ್ಯುಂಡೈ i20 - ಕಂಪನಿಯು ಈ ಜನಪ್ರಿಯ ಕಾರಿನ ಮೇಲೆ  40,000 ರೂ. ವರೆಗೆ ಒಟ್ಟು ಪ್ರಯೋಜನಗಳನ್ನು ನೀಡಿದೆ.
Renault Kwid - ಈ ಸಣ್ಣ ಗಾತ್ರದ ಕಾರಿನ ಮೇಲೆ  35,000 ರೂ.ವರೆಗೆ ಆಫರ್ (Offer Price) ನೀಡಲಾಗುತ್ತಿದೆ .

ಇದನ್ನೂ ಓದಿ :  PM Kisan Alert: 2 ಕೋಟಿ ರೈತರು ವಂಚಿತರಾಗಲಿದ್ದಾರೆ 10ನೇ ಕಂತಿನ ಹಣದಿಂದ , ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ತಕ್ಷಣ ಚೆಕ್ ಮಾಡಿಕೊಳ್ಳಿ

ಹೋಂಡಾ ಜಾಝ್ - ಕಂಪನಿಯು ಈ ಕಾರಿನ ಮೇಲೆ ಒಟ್ಟು 33,000 ರೂ.ವರೆಗೆ ರಿಯಾಯಿತಿಯನ್ನು ನೀಡಿದೆ.
ಟೊಯೋಟಾ ಗ್ಲಾನ್ಜಾ - ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ 22,000 ರೂ. ವರೆಗಿನ ಪ್ರಯೋಜನಗಳೊಂದಿಗೆ ಲಭ್ಯವಿದೆ.
ಟಾಟಾ ಹ್ಯಾರಿಯರ್ ಮತ್ತು ಸಫಾರಿ - ಕಂಪನಿಯು ಈ ಎರಡೂ ಎಸ್‌ಯುವಿಗಳಲ್ಲಿ (SUV)  65,000 ರೂ.ವರೆಗೆ ಒಟ್ಟು ಲಾಭವನ್ನು ನೀಡುತ್ತಿದೆ.
ರೆನಾಲ್ಟ್ ಡಸ್ಟರ್ - ಕಂಪನಿಯು ಈ ಜನಪ್ರಿಯ ಕಾರಿನ ಮೇಲೆ 1.30 ಲಕ್ಷದವರೆಗೆ ಭಾರಿ ರಿಯಾಯಿತಿಯನ್ನು ನೀಡಿದೆ.
ನಿಸ್ಸಾನ್ ಕಿಕ್ಸ್ - ಈ ಕಾರಿನ ಮೇಲೆ 1 ಲಕ್ಷದವರೆಗೆ ಒಟ್ಟು ಆಫರ್ ನೀಡಲಾಗಿದೆ.
ಮಹೀಂದ್ರಾ XUV300 - ಈ SUV ಮೇಲೆ ಒಟ್ಟು 69,000 ರೂ.ಗಳ ರಿಯಾಯಿತಿಯನ್ನು ನೀಡಲಾಗಿದೆ.
ಮಾರುತಿ ಸುಜುಕಿ ಬಲೆನೊ - ಕಂಪನಿಯು ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ 33,000 ರೂ. ವರೆಗೆ ಒಟ್ಟು ಪ್ರಯೋಜನಗಳನ್ನು ನೀಡಿದೆ.
ಮಾರುತಿ ಸುಜುಕಿ ಸ್ವಿಫ್ಟ್ - ಕಂಪನಿಯು ಈ ಕಾರಿನ ಮೇಲೆ  33,000 ರೂ.ವರೆಗೆ ರಿಯಾಯಿತಿಯನ್ನು ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News