Jio Unlimited Recharge: ಜಿಯೋದ ಈ ರೀಚಾರ್ಜ್ ಪ್ಲಾನ್‍ನಲ್ಲಿ ಗ್ರಾಹಕರಿಗೆ ಹತ್ತಾರು ಪ್ರಯೋಜನ

ಜಿಯೋ ಪ್ರಿಪೇಯ್ಡ್ ಯೋಜನೆ: ಜಿಯೋದ ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಹಲವಾರು ಪ್ರಯೋಜನಗಳನ್ನು ನೀಡಲಾಗುತ್ತದೆ. ಇದು Unlimited ಕರೆ ಮತ್ತು ಡೇಟಾ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತದೆ.

Written by - Puttaraj K Alur | Last Updated : Mar 5, 2023, 12:18 PM IST
  • ಜಿಯೋ ತನ್ನ ಗ್ರಾಹಕರಿಗೆ ಅನೇಕ ರೀಚಾರ್ಜ್ ಯೋಜನೆ ತಂದಿದೆ
  • ಜಿಯೋದ 299 ರೂ. ರೀಚಾರ್ಜ್ ಯೋಜನೆಯ ಬಗ್ಗೆ ತಿಳಿಯಿರಿ
  • 28 ದಿನಗಳ ವ್ಯಾಲಿಡಿಟಿ ಜೊತೆಗೆ 56GB ಡೇಟಾ, Unlimited ಕರೆ
Jio Unlimited Recharge: ಜಿಯೋದ ಈ ರೀಚಾರ್ಜ್ ಪ್ಲಾನ್‍ನಲ್ಲಿ ಗ್ರಾಹಕರಿಗೆ ಹತ್ತಾರು ಪ್ರಯೋಜನ title=
ಜಿಯೋ ಅನ್‌ಲಿಮಿಟೆಡ್ ರೀಚಾರ್ಜ್

ನವದೆಹಲಿ: ಜಿಯೋ ತನ್ನ ಗ್ರಾಹಕರಿಗೆ ಅನೇಕ ರೀಚಾರ್ಜ್ ಪ್ಲಾನ್‍ಗಳನ್ನು ನೀಡುತ್ತಿದೆ. ಈ ಪೈಕಿ ಒಂದು ಅತ್ಯುತ್ತಮ ರೀಚಾರ್ಚ್ ಪ್ಲಾನ್ ಇದ್ದು, ಇದು ಗ್ರಾಹಕರ ಬಜೆಟ್‍ಗೆ ತಕ್ಕನಾಗಿದೆ. ಈ ರೀಚಾರ್ಜ್ ಪ್ಲಾನ್‍ನಲ್ಲಿ ಹಲವಾರು ಪ್ರಯೋಜನಗಳಿವೆ. ಪ್ರತಿಯೊಬ್ಬರಿಗೂ ಕೈಗೆಟುಕುವಂತಿರುವ ಈ ಪ್ಲಾನ್ ನಿಮಗೆ ಇಷ್ಟವಾಗುತ್ತದೆ. ಇದರಲ್ಲಿ ಬಳಕೆದಾರರು ಅನೇಕ Unlimited ಪ್ರಯೋಜನ ಪಡೆಯುತ್ತಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: LIC ಈ ಪಾಲಿಸಿಯಲ್ಲಿ 833 ರೂ. ಹೂಡಿಕೆ ಮಾಡಿ, 1 ಕೋಟಿ ಲಾಭ ಪಡೆಯಿರಿ!

ಯಾವ ರಿಚಾರ್ಜ್ ಪ್ಲಾನ್?

ನಾವಿಂದು ನಿಮಗೆ ತಿಳಿಸಲಿರುವ ಜಿಯೋ ಪ್ಲಾನ್‌ನ ಬೆಲೆ ಕೇವಲ 299 ರೂ. ಈ ಪ್ಲಾನ್‍ನಲ್ಲಿ ನಿಮಗೆ ಹಲವಾರು ಪ್ರಯೋಜನಗಳು ಲಭ್ಯವಿವೆ. ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ದಿನಕ್ಕೆ 2GB ಡೇಟಾದಂತೆ 28ಕ್ಕೆ ದಿನಕ್ಕೆ ನಿಮಗೆ ಒಟ್ಟು 56GB ಡೇಟಾ ಸಿಗುತ್ತದೆ. ಇದು ದೈನಂದಿನ ಇಂಟರ್ನೆಟ್ ಸಂಬಂಧಿತ ಅಗತ್ಯಗಳಿಗೆ ನಿಮಗೆ ಉಪಯೋಗವಾಗುತ್ತದೆ.

ಇದನ್ನೂ ಓದಿ: ಹೊಸ ವಿನ್ಯಾಸದಲ್ಲಿ Splendor ಬಿಡುಗಡೆ, 60 ಕ್ಕಿಂತ ಹೆಚ್ಚು ಮೈಲೇಜ್.. Honda-TVS ಗೆ ಹೆಚ್ಚಾದ ಟೆನ್ಷನ್!!

ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ನೀಡಲಾಗುತ್ತದೆ. ವಿಶೇಷವೆಂದರೆ ನೀವು ದೇಶದ ಯಾವುದೇ ಮೂಲೆಗೆ ಕರೆಗಳನ್ನು ಮಾಡಬಹುದು. ಹೆಚ್ಚುವರಿ ಶುಲ್ಕ ಪಾವತಿಸದೆ ಉಚಿತವಾಗಿ ಮಾತನಾಡಬಹುದು. ಅಷ್ಟೇ ಅಲ್ಲ ನೀವು ಉತ್ತಮ ಸಂಪರ್ಕ  ಪಡೆಯುತ್ತೀರಿ, ಇದರಿಂದ ಕಾಲ್ ಡ್ರಾಪ್ ಸಮಸ್ಯೆ ನಿಮಗೆ ಕಾಡುವುದಿಲ್ಲ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 100 SMSಗಳನ್ನು ಸಹ ನೀಡಲಾಗುತ್ತದೆ, ಅಗತ್ಯವಿದ್ದರೆ ನೀವು ಬಳಸಬಹುದು. ಈ ಪ್ಲಾನ್‍ನಲ್ಲಿ ನೀವು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್‌ನಂತಹ ಸೇವೆಗಳ ಉಚಿತ ಚಂದಾದಾರಿಕೆ ಸಹ ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News