Hero Electric: ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುವುದು ಈಗ ತುಂಬಾ ಸುಲಭ

ಹೀರೋ ಎಲೆಕ್ಟ್ರಿಕ್ ಗ್ರಾಹಕರಿಗೆ ಆಕರ್ಷಕ ಬಡ್ಡಿದರಗಳು, ಹೊಂದಿಕೊಳ್ಳುವ ಸಾಲದ ಅವಧಿ ಮತ್ತು ಕಡಿಮೆ ಮಾಸಿಕ ಕಂತುಗಳಂತಹ ಪ್ರಯೋಜನಗಳನ್ನು ಒದಗಿಸುತ್ತಿದೆ.

Written by - Yashaswini V | Last Updated : Sep 1, 2021, 12:23 PM IST
  • ತನ್ನ ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಹೀರೋ ಎಲೆಕ್ಟ್ರಿಕ್ ಸುಲಭವಾಗಿ ಹಣವನ್ನು ಒದಗಿಸಲು ವೀಲ್ಸ್ ಇಎಂಐ ಜೊತೆ ಒಪ್ಪಂದ ಮಾಡಿಕೊಂಡಿದೆ
  • ಹೀರೋ ಎಲೆಕ್ಟ್ರಿಕ್ ಈ ಪಾಲುದಾರಿಕೆಯ ಅಡಿಯಲ್ಲಿ ಗ್ರಾಹಕರಿಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಲಭ್ಯವಾಗಲಿದೆ
  • 13 ರಾಜ್ಯಗಳ 100 ಕ್ಕೂ ಹೆಚ್ಚು ನಗರಗಳಲ್ಲಿ ವೀಲ್ಸ್ ಇಎಂಐ ಅಸ್ತಿತ್ವವನ್ನು ಹೊಂದಿದೆ
Hero Electric: ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುವುದು ಈಗ ತುಂಬಾ ಸುಲಭ title=
Auto companies are setting up charging stations at different locations (official website)

Hero Electric: ನೀವು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸಲು ಬಯಸುತ್ತಿದ್ದು ಹಣದ ಕೊರತೆ ಎದುರಿಸುತ್ತಿದ್ದರೆ, ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಸುಲಭವಾಗಿ ಖರೀದಿಸಬಹುದು. ಪಿಟಿಐನ ಸುದ್ದಿಯ ಪ್ರಕಾರ, ತನ್ನ ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಹೀರೋ ಎಲೆಕ್ಟ್ರಿಕ್ ಸುಲಭವಾಗಿ ಹಣವನ್ನು ಒದಗಿಸಲು ವೀಲ್ಸ್ ಇಎಂಐ ಜೊತೆ ಒಪ್ಪಂದ ಮಾಡಿಕೊಂಡಿದೆ.

ಆಕರ್ಷಕ ಬಡ್ಡಿದರದಲ್ಲಿ ಸಾಲ ಲಭ್ಯವಿರುತ್ತದೆ:
ಸುದ್ದಿಯ ಪ್ರಕಾರ, ಕಂಪನಿಯು ಹೇಳಿಕೆಯೊಂದರಲ್ಲಿ ಆಟೋ ಫಂಡಿಂಗ್ ಹೊರತಾಗಿ, ಹೀರೋ ಎಲೆಕ್ಟ್ರಿಕ್ (Hero Electric) ಈ ಪಾಲುದಾರಿಕೆಯ ಅಡಿಯಲ್ಲಿ ಗ್ರಾಹಕರಿಗೆ ಆಕರ್ಷಕ ಬಡ್ಡಿ ದರಗಳು, ಅನುಕೂಲಕರ ಸಾಲದ ಅವಧಿ ಆಯ್ಕೆಗಳು ಮತ್ತು ಕಡಿಮೆ ಮಾಸಿಕ ಕಂತು ಪ್ರಯೋಜನಗಳನ್ನು ಒದಗಿಸುತ್ತಿದೆ ಎಂದು ಹೇಳಿದೆ. ಹೀರೋ ಎಲೆಕ್ಟ್ರಿಕ್ ಈ ಉಪಕ್ರಮದ ಮೂಲಕ ಗ್ರಾಹಕರು ಅತ್ಯಂತ ಕಡಿಮೆ ದಾಖಲೆಗಳೊಂದಿಗೆ ಸಾಲವನ್ನು ವೇಗವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ- Rules Change In September: ಇಂದಿನಿಂದ ಅನೇಕ ನಿಯಮಗಳಲ್ಲಿ ಬದಲಾವಣೆ; ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಬೇಡಿಕೆ ಹೆಚ್ಚಾಗಿದೆ:
13 ರಾಜ್ಯಗಳ 100 ಕ್ಕೂ ಹೆಚ್ಚು ನಗರಗಳಲ್ಲಿ ವೀಲ್ಸ್ ಇಎಂಐ ಅಸ್ತಿತ್ವವನ್ನು ಹೊಂದಿದೆ. ಹೀರೋ ಎಲೆಕ್ಟ್ರಿಕ್ ಸಿಇಒ ಸೋಹಿಂದರ್ ಗಿಲ್ ಅವರು ಕಳೆದ ಕೆಲವು ವಾರಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (Electric Two Wheelers)  ಜಾಗೃತಿ ಮತ್ತು ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು. ಇಂದು ಹೆಚ್ಚು ಹೆಚ್ಚು ಗ್ರಾಹಕರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬಗ್ಗೆ ಒಲವು ತೋರಿಸುತ್ತಿದ್ದಾರೆ.  ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ತಮ್ಮ ಮುಂದಿನ ವಾಹನವಾಗಿ ಅಳವಡಿಸಿಕೊಳ್ಳಲು ಬಯಸುತ್ತಾರೆ. ಸುಲಭವಾದ ಹಣಕ್ಕಾಗಿ ಬೇಡಿಕೆ ಇದೆ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಇದರ ಬೇಡಿಕೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ- LPG Cylinder Price: ಗ್ರಾಹಕರಿಗೆ ಮತ್ತೆ ಅಡುಗೆಅನಿಲ ದರ ಏರಿಕೆ ಬಿಸಿ, 15 ದಿನಗಳಲ್ಲಿ 50 ರೂ. ಹೆಚ್ಚಳ

ಕಂಪನಿಗಳು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುತ್ತಿವೆ:
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ದೃಷ್ಟಿಯಿಂದ, ಈಗ ಎಲ್ಲಾ ಆಟೋ ಕಂಪನಿಗಳು ವಿವಿಧ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುತ್ತಿವೆ. ವಿದ್ಯುತ್ ವಾಹನಗಳ ಮೂಲಸೌಕರ್ಯಕ್ಕೆ ಕಂಪನಿಗಳು ಒತ್ತು ನೀಡುತ್ತವೆ. ಕೆಲವು ಕಂಪನಿಗಳು ಮೊಬೈಲ್ ಚಾರ್ಜಿಂಗ್ ಕೇಂದ್ರಗಳ ಸೌಲಭ್ಯವನ್ನು ನೀಡಲು ಆರಂಭಿಸಿವೆ. ಅಂದರೆ, ನಿಮ್ಮ ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ದಾರಿ ಮಧ್ಯೆ ಖಾಲಿಯಾದರೆ ನೀವು ಮೊಬೈಲ್ ಚಾರ್ಜಿಂಗ್ ಕೇಂದ್ರದ ಸೌಲಭ್ಯವನ್ನೂ ತೆಗೆದುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News