ನಿಮ್ಮ ಸಮ್ಮತಿ ಇಲ್ಲದೆಯೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಿದ್ಯಾ? ಈ ರೀತಿ ಮಾಡಿ

Credit Card: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿದೆ. ಇದರೊಂದಿಗೆ ಹಲವು ಬಾರಿ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿರುತ್ತದೆ. ಯಾವುದೇ ಬ್ಯಾಂಕ್ ಈ ರೀತಿ ಮಾಡುವುದು ತಪ್ಪಾಗಿದ್ದು ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತಿಳಿಯಿರಿ. 

Written by - Yashaswini V | Last Updated : May 30, 2024, 09:28 AM IST
  • ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 7, 2024 ರಂದು ಕ್ರೆಡಿ ಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ದೇಶನಗಳನ್ನು ಹೊರಡಿಸಿದೆ.
  • ಇದರ ಅಡಿಯಲ್ಲಿ, ಕಾರ್ಡ್ ನೀಡುವವರು ಮೊದಲು ಗ್ರಾಹಕರ ಅನುಮತಿಯನ್ನು ಪಡೆಯಬೇಕಾಗುತ್ತದೆ.
ನಿಮ್ಮ ಸಮ್ಮತಿ ಇಲ್ಲದೆಯೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಿದ್ಯಾ? ಈ ರೀತಿ ಮಾಡಿ title=

Credit Card: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಗಳ ಪ್ರಕಾರ, ಯಾವುದೇ ಬ್ಯಾಂಕ್ ಗ್ರಾಹಕರ ಅನುಮತಿಯಿಲ್ಲದೆ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು (Credit Card) ವಿತರಿಸುವಂತಿಲ್ಲ.  ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಪ್ರಕರಣಗಳು ಮುನ್ನಲೆಗೆ ಬರುತ್ತಲೇ ಇವೆ.  ಬ್ಯಾಂಕ್‌ಗಳು ಗ್ರಾಹಕರ ಒಪ್ಪಿಗೆಯಿಲ್ಲದೆ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು  ವಿತರಿಸಿದಾಗ ಏನು ಮಾಡಬೇಕು? ಎಂದು ಎಂದಾದರೂ ಯೋಚಿಸಿದ್ದೀರಾ...

ಗಮನಾರ್ಹವಾಗಿ,  ಭಾರತೀಯ ರಿಸರ್ವ್ ಬ್ಯಾಂಕ್  (Reserve Bank of India) ಮಾರ್ಚ್ 7, 2024 ರಂದು ಕ್ರೆಡಿ ಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ದೇಶನಗಳನ್ನು  ಹೊರಡಿಸಿದೆ. ಇದರ ಅಡಿಯಲ್ಲಿ, ಕಾರ್ಡ್ ನೀಡುವವರು ಮೊದಲು ಗ್ರಾಹಕರ ಅನುಮತಿಯನ್ನು ಪಡೆಯಬೇಕಾಗುತ್ತದೆ. 

ಇದನ್ನೂ ಓದಿ- Big Alert: ಗ್ಯಾಸ್, ಆಧಾರ್ ಸೇರಿದಂತೆ ಜೂನ್ 1ರಿಂದ ಹೊಸ ನಿಯಮ, ಉಲ್ಲಂಘಿಸಿದ್ರೆ ದಂಡ!

ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit Card) ವಿತರಿಸಿದರೆ ಮೊದಲು ಮಾಡಬೇಕಾದ ಕೆಲಸ ಅದನ್ನು ಸಕ್ರಿಯಗೊಳಿಸಬಾರದು. ನೀವು ಕಾರ್ಡ್ ಅನ್ನು ಸಕ್ರಿಯಗೊಳಿಸದಿದ್ದರೆ, ಕೆಲವು ದಿನಗಳ ನಂತರ ಬ್ಯಾಂಕ್ ಅದನ್ನು ಮುಚ್ಚುತ್ತದೆ. ಈ ಪ್ರಕ್ರಿಯೆಯಲ್ಲಿ ಬ್ಯಾಂಕ್ ನಿಮಗೆ ಯಾವುದೇ ಮುಕ್ತಾಯ ಶುಲ್ಕವನ್ನು ವಿಧಿಸುವಂತಿಲ್ಲ. ಗ್ರಾಹಕರಿಗೆ ಅದರ ಬಗ್ಗೆ ಮಾಹಿತಿಯನ್ನು ಸಹ ನೀಡಲಾಗುತ್ತದೆ. 

ನೀವು ವಿನಂತಿಸದೆ ಅಥವಾ ನಿಮ್ಮ ಅನುಮತಿಯಿಲ್ಲದೆ ವಿತರಿಸಲಾಗಿರುವ ಕಾರ್ಡ್ ಬ್ಲಾಕ್ (Card Block) ಆಗಿದ್ದರೂ ಕೂಡ ನೀವು ಅದರ ಬಗ್ಗೆ ದೂರು ನೀಡಬೇಕು. ನೀವು ಈ ಬಗ್ಗೆ ಕಾರ್ಡ್ ನೀಡುವ ಬ್ಯಾಂಕ್‌ಗೆ ದೂರು ನೀಡಬಹುದು. ಒಂದೊಮ್ಮೆ ಇಲ್ಲಿ ನಿಮಗೆ ಯಾವುದೇ ಸರಿಯಾದ ಪ್ರತಿಕ್ರಿಯೆ ಸಿಗದಿದ್ದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಓಂಬುಡ್ಸ್‌ಮನ್‌ಗೆ ದೂರು ನೀಡಬಹುದು. 

ಇದನ್ನೂ ಓದಿ- Best Cars in India: ಹೆಚ್ಚಿನ ಮೈಲೇಜ್ ನೀಡುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳು

ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ನೀಡುವುದು ಹೇಗೆ?
ನಿಮ್ಮ ಒಪ್ಪಿಗೆಯಿಲ್ಲದೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಿದ್ದರೆ ಅಂತಹ ಸಂದರ್ಭದಲ್ಲಿ ನೀವು ಬ್ಯಾಂಕ್‌ಗೆ ದೂರು ನೀಡದರೂ ತಿಂಗಳ ಒಳಗೆ ಕಾರ್ಡ್ ನೀಡುವ ಬ್ಯಾಂಕ್‌ನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ನೀವು ಆರ್‌ಬಿಐ (RBI) ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು. ಇದಕ್ಕಾಗಿ ನೀವು https://cms.rbi.org.in ಗೆ ಭೇಟಿ ನೀಡಿ ದೂರು ಸಲ್ಲಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News