Post Office ಈ ಸ್ಕೀಮ್‌ನಲ್ಲಿ ದಿನಕ್ಕೆ ₹95 ಹೂಡಿಕೆ ಮಾಡಿ : ಮೆಚ್ಯೂರಿಟಿಯಲ್ಲಿ ₹14 ಲಕ್ಷ ಪಡೆಯಿರಿ!

ಇದು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹಣವನ್ನು ಹಿಂದಿರುಗಿಸುತ್ತದೆ ಮತ್ತು ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಎರಡು ರೀತಿಯ ಯೋಜನೆಗಳಿವೆ --ಪೋಸ್ಟಲ್ ಲೈಫ್ ಇನ್ಶುರೆನ್ಸ್ ಮತ್ತು ರೂರಲ್ ಪೋಸ್ಟಲ್ ಲೈಫ್ ಇನ್ಶುರೆನ್ಸ್ (RPLI). 

Written by - Channabasava A Kashinakunti | Last Updated : Nov 15, 2021, 07:47 PM IST
  • ಪೋಸ್ಟ್ ಆಫೀಸ್ ಯೋಜನೆಗಳು ಉತ್ತಮ ಲಾಭ ನೀಡುತ್ತವೆ.
  • ಗ್ಯಾರಂಟಿ ರಿಟರ್ನ್ ಯೋಜನೆಗಳಲ್ಲಿ ನಂಬಿಕೆ ಇರುವವರಿಗೆ ಸೂಕ್ತ
  • ಗ್ರಾಮ ಸುಮಂಗಲ್ ಎಂಬುದು ಮನಿ ಬ್ಯಾಕ್ ಪಾಲಿಸಿಯಾಗಿದೆ.
Post Office ಈ ಸ್ಕೀಮ್‌ನಲ್ಲಿ ದಿನಕ್ಕೆ ₹95 ಹೂಡಿಕೆ ಮಾಡಿ : ಮೆಚ್ಯೂರಿಟಿಯಲ್ಲಿ ₹14 ಲಕ್ಷ ಪಡೆಯಿರಿ! title=

ನವದೆಹಲಿ : ಪೋಸ್ಟ್ ಆಫೀಸ್ ಯೋಜನೆಗಳು ಹಲವಾರು ಗ್ಯಾರಂಟಿ ರಿಟರ್ನ್ ಸ್ಕೀಮ್‌ಗಳನ್ನು ನೀಡುತ್ತಿವೆ. ಅದ್ರಲ್ಲಿ 'ಪೋಸ್ಟ್ ಆಫೀಸ್ ಗ್ರಾಮ್ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ' ಯಾಗಿದೆ.

ಅಂಚೆ ಕಛೇರಿ ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ(Post Office Gram Sumangal Rural Postal Life Insurance Scheme)ಯು ದತ್ತಿ ಯೋಜನೆಯಾಗಿದ್ದು, ಇದು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹಣವನ್ನು ಹಿಂದಿರುಗಿಸುತ್ತದೆ ಮತ್ತು ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಎರಡು ರೀತಿಯ ಯೋಜನೆಗಳಿವೆ --ಪೋಸ್ಟಲ್ ಲೈಫ್ ಇನ್ಶುರೆನ್ಸ್ ಮತ್ತು ರೂರಲ್ ಪೋಸ್ಟಲ್ ಲೈಫ್ ಇನ್ಶುರೆನ್ಸ್ (RPLI). 

ಇದನ್ನೂ ಓದಿ : EPFO Rules: ನೌಕರಿ ಬಿಟ್ಟ ಬಳಿಕ ಇಷ್ಟು ದಿನಗಳಲ್ಲಿ PFನಿಂದ ಹಣ ಹಿಂಪಡೆಯದೆ ಹೋದರೆ ಭಾರಿ ಹಾನಿ, ಕಾರಣ ಇಲ್ಲಿದೆ

ಗ್ರಾಮೀಣ ಅಂಚೆ ಜೀವ ವಿಮೆ(Rural Postal Life Insurance)ಯನ್ನು 1995 ರಲ್ಲಿ ಭಾರತದ ಗ್ರಾಮೀಣ ಜನರಿಗೆ ಪರಿಚಯಿಸಲಾಯಿತು. ಯೋಜನೆಯ ಪ್ರಧಾನ ಉದ್ದೇಶವು ಸಾಮಾನ್ಯವಾಗಿ ಗ್ರಾಮೀಣ ಸಾರ್ವಜನಿಕರಿಗೆ ವಿಮಾ ರಕ್ಷಣೆಯನ್ನು ಒದಗಿಸುವುದು ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶದ ದುರ್ಬಲ ವರ್ಗದವರು ಮತ್ತು ಮಹಿಳಾ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುವುದು ಮತ್ತು ಗ್ರಾಮೀಣ ಜನರಲ್ಲಿ ವಿಮಾ ಜಾಗೃತಿಯನ್ನು ನೀಡುವುದಾಗಿದೆ.

ನಿರೀಕ್ಷಿತ ಎಂಡೋಮೆಂಟ್ ಅಶ್ಯೂರೆನ್ಸ್ ಗ್ರಾಮ್ ಸುಮಂಗಲ್(Endowment Assurance Gram Sumangal) ಒಂದು ಮನಿ ಬ್ಯಾಕ್ ಪಾಲಿಸಿಯಾಗಿದ್ದು, ನಿಯತಕಾಲಿಕವಾಗಿ ರಿಟರ್ನ್ಸ್ ಅಗತ್ಯವಿರುವವರಿಗೆ ಇದು ಸೂಕ್ತವಾಗಿರುತ್ತದೆ. ಸರ್ವೈವಲ್ ಪ್ರಯೋಜನಗಳನ್ನು ವಿಮಾದಾರರಿಗೆ ನಿಯತಕಾಲಿಕವಾಗಿ ಪಾವತಿಸಲಾಗುತ್ತದೆ. ವಿಮಾದಾರನ ಅನಿರೀಕ್ಷಿತ ಮರಣದ ಸಂದರ್ಭದಲ್ಲಿ ಅಂತಹ ಪಾವತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಸಂಚಿತ ಬೋನಸ್‌ನೊಂದಿಗೆ ಸಂಪೂರ್ಣ ವಿಮಾ ಮೊತ್ತವನ್ನು ನಿಯೋಜಿತರಿಗೆ, ಕಾನೂನು ಉತ್ತರಾಧಿಕಾರಿಯ ನಾಮಿನಿಗೆ ಪಾವತಿಸಲಾಗುತ್ತದೆ.

ಅಂಚೆ ಕಛೇರಿ ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗೆ ಸಂಬಂಧಿಸಿದ ಕೆಲವು ಪ್ರಮುಖ ವಿವರಗಳು ಇವು

- ಪಾಲಿಸಿ ಅವಧಿ: 15 ವರ್ಷ ಮತ್ತು 20 ವರ್ಷ
- ಕನಿಷ್ಠ ವಯಸ್ಸು 19 ವರ್ಷ.
- 20 ವರ್ಷಗಳ ಅವಧಿಯ ಪಾಲಿಸಿಯನ್ನು ತೆಗೆದುಕೊಳ್ಳಲು ಪ್ರವೇಶದ ಗರಿಷ್ಠ ವಯಸ್ಸು 40 ವರ್ಷಗಳು.
- 15 ವರ್ಷಗಳ ಅವಧಿಯ ಪಾಲಿಸಿಯನ್ನು ತೆಗೆದುಕೊಳ್ಳುವ ಗರಿಷ್ಠ ವಯಸ್ಸು 45 ವರ್ಷಗಳು.

ಸರ್ವೈವಲ್ ಪ್ರಯೋಜನಗಳು ಈ ಕೆಳಗಿನ ಆಯ್ಕೆಗಳ ಅಡಿಯಲ್ಲಿ ಪಾವತಿಸಲಾಗುತ್ತದೆ:

- 15 ವರ್ಷಗಳ ಪಾಲಿಸಿ(Policy)- 6 ವರ್ಷಗಳು, 9 ವರ್ಷಗಳು ಮತ್ತು 12 ವರ್ಷಗಳು ಪೂರ್ಣಗೊಂಡಾಗ ತಲಾ 20% ಮತ್ತು ಮುಕ್ತಾಯದ ಮೇಲೆ ಸಂಚಿತ ಬೋನಸ್‌ನೊಂದಿಗೆ 40%
- 20 ವರ್ಷಗಳ ಪಾಲಿಸಿ- 8 ವರ್ಷಗಳು, 12 ವರ್ಷಗಳು ಮತ್ತು 16 ವರ್ಷಗಳು ಪೂರ್ಣಗೊಂಡಾಗ ತಲಾ 20% ಮತ್ತು ಮುಕ್ತಾಯದ ಮೇಲೆ ಸಂಚಿತ ಬೋನಸ್‌ನೊಂದಿಗೆ 40% 

ಪ್ರತಿ ತಿಂಗಳ ಪ್ರೀಮಿಯಂ 95 ರೂ.

25 ವರ್ಷ ವಯಸ್ಸಿನ ವ್ಯಕ್ತಿಯು 7 ಲಕ್ಷ ರೂಪಾಯಿಗಳ ವಿಮಾ(Insurance) ಮೊತ್ತದೊಂದಿಗೆ 20 ವರ್ಷಗಳವರೆಗೆ ಈ ಪಾಲಿಸಿಯನ್ನು ತೆಗೆದುಕೊಳ್ಳುತ್ತಾನೆ ಎಂದು ಭಾವಿಸಿದರೆ, ಅವನು/ಅವಳು ತಿಂಗಳಿಗೆ 2853 ರೂ ಪ್ರೀಮಿಯಂ ಪಾವತಿಸಬೇಕಾಗುತ್ತದೆ, ಅಂದರೆ, ದಿನಕ್ಕೆ ಸುಮಾರು 95 ರೂ. ತ್ರೈಮಾಸಿಕ ಪ್ರೀಮಿಯಂ ರೂ 8449, ಅರ್ಧ ವಾರ್ಷಿಕ ಪ್ರೀಮಿಯಂ 16715 ರೂ. ಮತ್ತು ವಾರ್ಷಿಕ ಪ್ರೀಮಿಯಂ ರೂ 32735 ಆಗಿರುತ್ತದೆ.

ಇದನ್ನೂ ಓದಿ : ನಿಮ್ಮಲ್ಲಿದ್ದರೆ ಈ ನಾಣ್ಯಗಳು ನೀವೂ ಗಳಿಸಬಹುದು 5 ಲಕ್ಷ ರೂಪಾಯಿ

ಮೆಚ್ಯೂರಿಟಿಯಲ್ಲಿ 14 ಲಕ್ಷ ರೂ. ಲೆಕ್ಕಾಚಾರ ಇಲ್ಲಿದೆ

ಪಾಲಿಸಿಯ 8ನೇ, 12ನೇ ಮತ್ತು 16ನೇ ವರ್ಷದಲ್ಲಿ, 1.4-1.4 ಲಕ್ಷ ರೂ.ಗಳನ್ನು ಶೇ.20 ರಷ್ಟು ಪಾವತಿ ಮಾಡಲಾಗುತ್ತದೆ. 20ನೇ ವರ್ಷದಲ್ಲಿ 2.8 ಲಕ್ಷ ರೂ.ಗಳು ವಿಮಾ ಮೊತ್ತವಾಗಿಯೂ ಲಭ್ಯವಾಗಲಿದೆ. ಪ್ರತಿ ಸಾವಿರಕ್ಕೆ ವಾರ್ಷಿಕ ಬೋನಸ್(Annual Bonus) 48 ರೂ., ವಾರ್ಷಿಕ ಬೋನಸ್ 7 ಲಕ್ಷದ ವಿಮಾ ಮೊತ್ತದ ಮೇಲೆ  3,3600 ರೂ. ಲೆಕ್ಕಹಾಕಲಾಗುತ್ತದೆ. ಆದ್ದರಿಂದ, ಸಂಪೂರ್ಣ ಪಾಲಿಸಿ ಅವಧಿಗೆ ಬೋನಸ್ ಅಂದರೆ. 20 ವರ್ಷಕ್ಕೆ 6.72 ಲಕ್ಷ ರೂ. 20 ವರ್ಷಗಳಲ್ಲಿ, ಒಟ್ಟು ಲಾಭವನ್ನು 13.72 ಲಕ್ಷ ರೂ. ಎಂದು ಲೆಕ್ಕಹಾಕಲಾಗುತ್ತದೆ. ಈ ಪೈಕಿ 4.2 ಲಕ್ಷ ರೂ.ಗಳನ್ನು ಮುಂಗಡವಾಗಿ ಮರಳಿ ನೀಡಲಾಗುವುದು ಮತ್ತು 9.52 ಲಕ್ಷ ರೂ.ಗಳನ್ನು ಮೆಚ್ಯೂರಿಟಿಯಲ್ಲಿ ಏಕಕಾಲಕ್ಕೆ ನೀಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News