Investment strategies for girl child : ಕೇವಲ 4 ಸಾವಿರ ಹೂಡಿಕೆ ಮಾಡಿದರೆ ಸಿಗುವುದು 22 ಲಕ್ಷ ! ಹೆಣ್ಣು ಮಕ್ಕಳಿಗಾಗಿ ಇದೆ ಈ ವಿಶೇಷ ಸ್ಕೀಮ್

Sukanya Samruddhi Scheme Investment Plan for Girls : ಇದೀಗ ಈ ಯೋಜನೆಯ ಹೂಡಿಕೆ ಮೇಲಿನ ಬಡ್ಡಿದರವನ್ನು   ಶೇ.8.2ಕ್ಕೆ ಏರಿಸಲಾಗಿದೆ. ಯೋಜನೆಯ ವಿಶೇಷತೆಯೆಂದರೆ, ದೀರ್ಘಾವಧಿಯ ಹೂಡಿಕೆಯಿಂದಾಗಿ,  ಸುಕನ್ಯಾ ಸಮೃದ್ದಿ ಯೋಜನೆಯಿಂದ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಬಹುದು.

Written by - Ranjitha R K | Last Updated : Jan 31, 2024, 11:46 AM IST
  • ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಗೆ ನೀಡುತ್ತಿರುವ ಬಡ್ಡಿಯನ್ನು ಹೆಚ್ಚಿಸಿದೆ.
  • ಹೂಡಿಕೆ ಮೇಲಿನ ಬಡ್ಡಿದರವನ್ನು ಶೇ.8.2ಕ್ಕೆ ಏರಿಸಲಾಗಿದೆ.
  • ಸುಕನ್ಯಾ ಸಮೃದ್ದಿ ಯೋಜನೆಯಿಂದ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಬಹುದು.
Investment strategies for girl child : ಕೇವಲ 4 ಸಾವಿರ ಹೂಡಿಕೆ ಮಾಡಿದರೆ ಸಿಗುವುದು 22 ಲಕ್ಷ ! ಹೆಣ್ಣು ಮಕ್ಕಳಿಗಾಗಿ ಇದೆ ಈ ವಿಶೇಷ ಸ್ಕೀಮ್ title=

Monthly investment benefits in SSY scheme : ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಗೆ ನೀಡುತ್ತಿರುವ ಬಡ್ಡಿಯನ್ನು ಹೆಚ್ಚಿಸಿದೆ. ಈ ಹಿಂದೆ ಗ್ರಾಹಕರಿಗೆ ಈ ಯೋಜನೆಯಲ್ಲಿ ಹೂಡಿಕೆಯ ಮೇಲೆ 8% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿತ್ತು.ಇದೀಗ ಈ ಯೋಜನೆಯ ಹೂಡಿಕೆ ಮೇಲಿನ ಬಡ್ಡಿದರವನ್ನು   ಶೇ.8.2ಕ್ಕೆ ಏರಿಸಲಾಗಿದೆ. ಯೋಜನೆಯ ವಿಶೇಷತೆಯೆಂದರೆ, ದೀರ್ಘಾವಧಿಯ ಹೂಡಿಕೆಯಿಂದಾಗಿ,  ಸುಕನ್ಯಾ ಸಮೃದ್ದಿ ಯೋಜನೆಯಿಂದ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಬಹುದು. 

ಆದರೆ ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಈ ಯೋಜನೆಯ ಅಡಿಯಲ್ಲಿ ಮಗಳಿಗೆ 10 ವರ್ಷವಾಗುವವರೆಗೆ ಮಾತ್ರ SSY ಖಾತೆಯನ್ನು ತೆರೆಯಬಹುದು. SSY ಖಾತೆಯು 21 ವರ್ಷಗಳಲ್ಲಿ ಪಕ್ವವಾಗುತ್ತದೆ. ಆದರೆ, ಮಗಳಿಗೆ 18 ವರ್ಷ ತುಂಬಿದಾಗ ಶಿಕ್ಷಣ ಅಥವಾ ಮದುವೆಗಾಗಿ ಖಾತೆಯಿಂದ ಮೊತ್ತವನ್ನು ಹಿಂಪಡೆಯಬಹುದು. 

ಈ ಯೋಜನೆಯಲ್ಲಿ, ಪ್ರತಿ ತಿಂಗಳು 4 ಸಾವಿರ ರೂಪಾಯಿಗಳನ್ನು ಉಳಿಸಬೇಕಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ 2024 ರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಿ ಎಂದಿಟ್ಟುಕೊಳ್ಳೋಣ. ನಿಮ್ಮ ಮಗಳಿಗೆ 5 ವರ್ಷ ಎನ್ನುವ ರೀತಿಯಲ್ಲಿ ಲೆಕ್ಕಾಚಾರದ ಸಂಪೂರ್ಣ ನಿಧಿ ಎಷ್ಟಾಗುತ್ತದೆ ಎಂದು ನೋಡುವುದಾದರೆ .. .. 

ಇದನ್ನೂ ಓದಿ : IMPS Rule Change: ಫೆಬ್ರುವರಿ 1 ರಿಂದ ಬದಲಾಗಲಿದೆ ಹಣ ವರ್ಗಾವಣೆ ವಿಧಾನದ ಈ ನಿಯಮ, ನೀವು ತಿಳಿದುಕೊಳ್ಳಿ!

ಬಡ್ಡಿಯಿಂದಲೇ ಸಿಗುತ್ತದೆ 15 ಲಕ್ಷ : 
ಮೊದಲೇ ಹೇಳಿದಂತೆ ಖಾತೆಯ ಮುಕ್ತಾಯ ಅವಧಿಯು 21 ವರ್ಷಗಳು. ಅಂದರೆ, ನೀವು 2024 ರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, 2045 ರಲ್ಲಿ ದೊಡ್ಡ ಮೊತ್ತದ  ಆದಾಯವನ್ನು ಪಡೆಯಬಹುದು.

ನೀವು ಪ್ರತಿ ತಿಂಗಳು 4,000 ರೂ. ಉಳಿಸಿದರೆ, ಒಂದು ವರ್ಷದಲ್ಲಿ 48,000 ರೂ. ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.15 ವರ್ಷಗಳವರೆಗೆ ಖಾತೆಗೆ ಹಣ ಜಮಾ ಮಾಡಬೇಕು. ಲೆಕ್ಕಾಚಾರದ ಪ್ರಕಾರ,  2042 ರ ವೇಳೆಗೆ ಈ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 7 ಲಕ್ಷ 20 ಸಾವಿರ ರೂ.ಸಂಗ್ರಹವಾಗುತ್ತದೆ.

ಇದನ್ನೂ ಓದಿ :  Union Budget 2024: ನೌಕರ ವರ್ಗದ ಜನರಿಗೆ ಒಂದು ಭಾರಿ ಸಂತಸದ ಸುದ್ದಿ!

21 ವರ್ಷಗಳ ನಂತರ ಮೆಚ್ಯೂರಿಟಿ ಅಂದರೆ 2045 ರಲ್ಲಿ, 15 ಲಕ್ಷ 14 ಸಾವಿರ ರೂಪಾಯಿಗಳ ಬಡ್ಡಿಯನ್ನು ಮಾತ್ರ ಪಡೆಯಬಹುದು. ಅಂದರೆ 7.20 ಲಕ್ಷ ಹೂಡಿಕೆಯ ಮೇಲೆ 15.14 ಲಕ್ಷ ಬಡ್ಡಿ ಗಳಿಸಬಹುದು. ಮೆಚ್ಯೂರಿಟಿ ವೇಳೆಯಲ್ಲಿ ನೀವು ಮಾಡಿರುವ ಹೂಡಿಕೆ ಮೊತ್ತ ಮತ್ ಅದರ ಮೇಲಿನ ಬಡ್ಡಿ ಮೊತ್ತವನ್ನು ಒಟ್ಟಿಗೆ  ಸೇರಿಸಿದಾಗ ಒಟ್ಟು 22 ಲಕ್ಷ 34 ಸಾವಿರ ರೂ.ನಿಮ್ಮ ಕೈ ಸೇರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News