LICಯ ಈ ಯೋಜನೆಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಜೀವನವಿಡೀ Pension ಪಡೆಯಿರಿ

ನಿವೃತ್ತಿಯ ನಂತರ ಪಿಂಚಣಿಯಿಂದ ಸಾಕಷ್ಟು ಬೆಂಬಲವಿದೆ. ಸರ್ಕಾರಿ ನೌಕರರು ಸರ್ಕಾರದಿಂದ ಲಾಭ ಪಡೆಯುತ್ತಾರೆ, ಆದರೆ ಖಾಸಗಿ ಉದ್ಯೋಗಿಗಳಿಗೆ ಪಿಂಚಣಿಯ ಲಾಭ ದೊರೆಯುವುದಿಲ್ಲ. ಅಂತಹ ಜನರಿಗೆ, ಎಲ್ಐಸಿ ಜೀವನ್ ಅಕ್ಷಯ್ ಯೋಜನೆಯನ್ನು ಪರಿಚಯಿಸಿದೆ, ಇದು ಪಿಂಚಣಿ ವಿಷಯದಲ್ಲಿ ತುಂಬಾ ಉತ್ತಮವಾಗಿದೆ.

Written by - Yashaswini V | Last Updated : Feb 2, 2021, 04:25 PM IST
  • ಶೀಘ್ರದಲ್ಲೇ ಬರಲಿದೆ ಎಲ್‌ಐಸಿಯ ಐಪಿಒ
  • ಒಂದು ಬಾರಿ ಹೂಡಿಕೆ ಮಾಡಿ ಜೀವಮಾನದ ಪಿಂಚಣಿ ಲಾಭ ಪಡೆಯಿರಿ
  • ಎಲ್‌ಐಸಿಯ ಜೀವನ್ ಅಕ್ಷಯ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ
LICಯ ಈ ಯೋಜನೆಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಜೀವನವಿಡೀ Pension ಪಡೆಯಿರಿ  title=
Jeevan Akshay Plan

ನವದೆಹಲಿ : ಇಂದಿನ ಯುಗದಲ್ಲಿ ಪ್ರತಿಯೊಬ್ಬ ಉದ್ಯೋಗಿಯು ನಿವೃತ್ತಿಯ ನಂತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಪಿಂಚಣಿ ಯೋಜನೆಯನ್ನು ತೆಗೆದುಕೊಳ್ಳಲು ಯೋಜಿಸುತ್ತಾನೆ. ನೀವೂ ಸಹ ಈ ರೀತಿ ಯೋಚಿಸುತ್ತಿದ್ದರೆ ಎಲ್‌ಐಸಿಯ ಇಂತಹ ಯೋಜನೆಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ, ಅದರಲ್ಲಿ ನೀವು ಒಮ್ಮೆ 1 ಲಕ್ಷ ರೂ. ಠೇವಣಿ ಇಟ್ಟರೆ, ನಿಮ್ಮ ಜೀವನದುದ್ದಕ್ಕೂ ನೀವು ಪಿಂಚಣಿ ಪಡೆಯುವುದನ್ನು ಮುಂದುವರಿಸುತ್ತೀರಿ.

ಎಲ್‌ಐಸಿಯ ಜೀವನ್ ಅಕ್ಷಯ್ ಯೋಜನೆ : 
ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಭಾರತದ ಅತಿದೊಡ್ಡ ಮತ್ತು ಸರ್ಕಾರಿ ವಿಮಾ ಕಂಪನಿಯಾಗಿದೆ. ಎಲ್ಐಸಿ ಗ್ರಾಹಕರಿಗೆ ಜೀವನ್ ಅಕ್ಷಯ್ ಯೋಜನೆ (Jeevan Akshay Plan)ಯನ್ನು ತಂದಿದೆ, ಇದರಲ್ಲಿ ನೀವು ನಿಮಗಾಗಿ ಅಥವಾ ಕುಟುಂಬದ ಸದಸ್ಯರಿಗಾಗಿ ಹೂಡಿಕೆ ಮಾಡಬಹುದು. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ವಾರ್ಷಿಕವಾಗಿ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಪ್ರತಿ ತಿಂಗಳು ಪಿಂಚಣಿ ತೆಗೆದುಕೊಳ್ಳಬಹುದು.

ಇದನ್ನೂ ಓದಿ - LIC Policy : ನಿತ್ಯ 199 ರೂ. ಹೂಡಿಕೆ ಮಾಡಿ 94 ಲಕ್ಷ ರೂಪಾಯಿ ಪಡೆಯಿರಿ !

6 ಸಾವಿರ ಮಾಸಿಕ ಪಿಂಚಣಿಗೆ ಲೆಕ್ಕಾಚಾರಗಳು : 
ಹೂಡಿಕೆದಾರರಿಗೆ 75 ವರ್ಷ ವಯಸ್ಸಾಗಿದ್ದರೆ, ಅವರ ಮೊತ್ತವು 6 ಲಕ್ಷ ರೂಪಾಯಿಗಳು, ಆಗ ಅವರು 6,10,800 ರೂ.ಗಳ ಒಂದು ದೊಡ್ಡ ಮೊತ್ತದ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದನ್ನು ಮಾಡುವಾಗ, ವಾರ್ಷಿಕ ಪಿಂಚಣಿ 76 ಸಾವಿರ 650 ರೂ, ಅರ್ಧ ವಾರ್ಷಿಕ ಪಿಂಚಣಿ 37 ಸಾವಿರ 35 ರೂ, ತ್ರೈಮಾಸಿಕ ಪಿಂಚಣಿ 18 ಸಾವಿರ 225 ರೂ. ಮಾಸಿಕ ಪಿಂಚಣಿ 6 ಸಾವಿರ 08 ರೂಪಾಯಿ ಸಿಗುತ್ತದೆ. ಜೀವನ್ ಅಕ್ಷಯ್ ಯೋಜನೆಯಲ್ಲಿ ಹೂಡಿಕೆದಾರನಿಗೆ ಅವನ ಮರಣದವರೆಗೂ ಪಿಂಚಣಿ (Pension) ಲಭ್ಯವಿರುತ್ತದೆ.

ಹೆಚ್ಚಿನ ಅನುಕೂಲಗಳಿವೆ :
ಎಲ್‌ಐಸಿಯ ಜೀವನ್ ಅಕ್ಷಯ್ ಯೋಜನೆ (LIC Jeevan Akshay Plan) ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ನೀವು ಅದರಲ್ಲಿ ಹೂಡಿಕೆ ಮಾಡಿದಾಗಲೆಲ್ಲಾ ಅಂದರೆ, ನಿಮ್ಮ ಪಾಲಿಸಿಯನ್ನು ನೀಡಲಾಗುತ್ತದೆ, ಮೂರು ತಿಂಗಳ ನಂತರ ನೀವು ಸಾಲ ಸೌಲಭ್ಯದ ಲಾಭವನ್ನು ಸಹ ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆಯ ಗರಿಷ್ಠ ಮಿತಿಯಿಲ್ಲ. ಇದರರ್ಥ ನೀವು ಈ ಪಾಲಿಸಿಯಲ್ಲಿ ಕನಿಷ್ಠ 1 ಲಕ್ಷ ರೂ. ಹೂಡಿಕೆ ಮಾಡಬಹುದು ಮತ್ತು ಗರಿಷ್ಠ (ಮಿತಿಯಿಲ್ಲ) ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.

ಇದನ್ನೂ ಓದಿ - ಈ ಪಾಲಿಸಿ ಖರೀದಿ ಮಾಡಿದ್ರೆ ತಿಂಗಳಿಗೆ ಸಿಗಲಿದೆ ₹ 36,000 ಪಿಂಚಣಿ : ಹೇಗೆ ಗೊತ್ತಾ?

ಎಲ್‌ಐಸಿಯ ಐಪಿಒ ಈ ವರ್ಷ ಬರಲಿದೆ :
ಬಜೆಟ್‌ನಲ್ಲಿ ಹಣಕಾಸು ಸಚಿವರು 2021-21ರ ಹೂಡಿಕೆ ನೀತಿಯನ್ನು ಘೋಷಿಸಿದ್ದಾರೆ. ಎಲ್‌ಐಸಿಯ ಐಪಿಒ ಕೂಡ ಈ ವರ್ಷ ಬರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ (Budget) ಭಾಷಣದಲ್ಲಿ ಹೇಳಿದ್ದಾರೆ. ಶೀಘ್ರದಲ್ಲೇ, ಇದಕ್ಕಾಗಿ ಮಾರುಕಟ್ಟೆಯಲ್ಲಿ ಎಲ್ಐಸಿಯನ್ನು ಪಟ್ಟಿ ಮಾಡಲಾಗುವುದು, ಇದು ಎಲ್ಐಸಿಯ ಆರ್ಥಿಕ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಮತ್ತು ನಂತರ ಚಿಲ್ಲರೆ ಹೂಡಿಕೆದಾರರು ಸಹ ಇದರ ಲಾಭ ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News