ಏಪ್ರಿಲ್ 1 ರಿಂದ Car, Bike, TV, AC ಸೇರಿದಂತೆ ಈ ವಸ್ತುಗಳು ದುಬಾರಿ

Changes from April 1, 2021: ಹೊಸ ಆರ್ಥಿಕ ವರ್ಷದಲ್ಲಿ ನಿಮ್ಮ ಸಂಬಳ ಹೆಚ್ಚಾಗುತ್ತದೆಯೋ ಆಥವಾ ಇಲ್ಲವೋ, ಆದರೆ ನಿಮ್ಮ ವೆಚ್ಚಗಳು ಖಂಡಿತವಾಗಿಯೂ ಹೆಚ್ಚಾಗಲಿವೆ. ಏಪ್ರಿಲ್ 1 ರಿಂದ, ನಿಮ್ಮ ಎಲ್ಲಾ ದೈನಂದಿನ ವಸ್ತುಗಳು ದುಬಾರಿಯಾಗಲಿವೆ.  

Written by - Yashaswini V | Last Updated : Mar 31, 2021, 11:35 AM IST
  • ನಾಳೆ, ಏಪ್ರಿಲ್ 1 ರಿಂದ ಹಣದುಬ್ಬರದ ಹೊರೆ ಜನಸಾಮಾನ್ಯರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ
  • ಏಪ್ರಿಲ್ 1 ರಿಂದ, ನಿಮ್ಮ ಎಲ್ಲಾ ದೈನಂದಿನ ವಸ್ತುಗಳು ದುಬಾರಿಯಾಗಲಿವೆ
  • ನಾಳೆಯಿಂದ ದುಬಾರಿಯಾಗಲಿರುವ ವಸ್ತುಗಳು ನಿಮ್ಮ ಜೇಬಿನ ಮೇಲೆ ಹೇಗೆ ಹೊರೆಯಾಗಲಿದೆ ಎಂದು ತಿಳಿಯೋಣ
ಏಪ್ರಿಲ್ 1 ರಿಂದ Car, Bike, TV, AC ಸೇರಿದಂತೆ ಈ ವಸ್ತುಗಳು ದುಬಾರಿ  title=
Changes from April 1, 2021

ನವದೆಹಲಿ:  Changes from April 1, 2021:  ಹೊಸ ಆರ್ಥಿಕ ವರ್ಷದಲ್ಲಿ ನಿಮ್ಮ ಸಂಬಳ ಹೆಚ್ಚಾಗುತ್ತದೆಯೋ ಆಥವಾ ಇಲ್ಲವೋ, ಆದರೆ ನಿಮ್ಮ ವೆಚ್ಚಗಳು ಖಂಡಿತವಾಗಿಯೂ ಹೆಚ್ಚಾಗಲಿವೆ.  ನಾಳೆ, ಏಪ್ರಿಲ್ 1 ರಿಂದ ಹಣದುಬ್ಬರದ ಹೊರೆ ಜನಸಾಮಾನ್ಯರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.  ಏಪ್ರಿಲ್ 1 ರಿಂದ, ನಿಮ್ಮ ಎಲ್ಲಾ ದೈನಂದಿನ ವಸ್ತುಗಳು ದುಬಾರಿಯಾಗಲಿವೆ. ನಾಳೆಯಿಂದ ದುಬಾರಿಯಾಗಲಿರುವ ವಸ್ತುಗಳು ನಿಮ್ಮ ಜೇಬಿನ ಮೇಲೆ ಹೇಗೆ ಹೊರೆಯಾಗಲಿದೆ ಎಂದು ನೋಡೋಣ.

1. ಕಾರು, ಬೈಕು  ಖರೀದಿಸುವುದು ದುಬಾರಿಯಾಗಲಿದೆ :
ಮಾರುತಿ, ನಿಸ್ಸಾನ್ ಮುಂತಾದ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಏಪ್ರಿಲ್ 1 ರಿಂದ ಈ ಕಂಪನಿಗಳ ಕಾರುಗಳು (Cars) ದುಬಾರಿಯಾಗುತ್ತವೆ. ಆದರೆ ಇದು ಎಷ್ಟು ಹೆಚ್ಚಾಗಲಿದೆ ಎಂಬ ಬಗ್ಗೆ ಆಟೋ ಕಂಪನಿಗಳು ಇನ್ನೂ ಬಹಿರಂಗಪಡಿಸಿಲ್ಲ. ಕಾರು ಕಂಪನಿಗಳು ದೀರ್ಘಕಾಲದವರೆಗೆ ದುಬಾರಿ ಕಚ್ಚಾ ವಸ್ತುಗಳ ಹೊಣೆಯನ್ನು ಭರಿಸಬೇಕಾಗಿತ್ತು, ಆದರೆ ಈಗ ಅವರು ಈ ಹೊರೆಯನ್ನು ಗ್ರಾಹಕರ ಮೇಲೆ ಹೇರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

2. ಎಸಿ, ರೆಫ್ರಿಜರೇಟರ್‌ನ ತಂಪಾದ ಗಾಳಿಯೂ ದುಬಾರಿಯಾಗಲಿದೆ:
ಈ ವರ್ಷ, ಎಸಿ (ಹವಾನಿಯಂತ್ರಣ-ಎಸಿ) ಅಥವಾ ಫ್ರಿಜ್ ಖರೀದಿಸುವವರಿಗೆ ಭಾರೀ ಹೊರೆ ಬೀಳುವುದು ಖಚಿತ. ಏಪ್ರಿಲ್ 1 ರಿಂದ ಎಸಿ ಕಂಪನಿಗಳು ಬೆಲೆ ಹೆಚ್ಚಿಸಲು ಯೋಜಿಸುತ್ತಿವೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಕಂಪನಿಗಳು ಎಸಿಯ ಬೆಲೆಯನ್ನು ಹೆಚ್ಚಿಸಲು ಸಿದ್ದತೆ ನಡೆಸುತ್ತಿವೆ. ಎಸಿ ತಯಾರಿಸುವ ಕಂಪನಿಗಳು ಬೆಲೆಯನ್ನು 4-6% ಹೆಚ್ಚಿಸಲು ಯೋಜಿಸುತ್ತಿವೆ. 

ಇದನ್ನೂ ಓದಿ- AC ಮೇಲೆ ಶೇಕಡಾ 48 ರಷ್ಟು ರಿಯಾಯಿತಿ, ಯಾವ ಎಸಿ ಮೇಲೆ ಎಷ್ಟು ರಿಯಾಯಿತಿ ಲಭ್ಯ, ಇಲ್ಲಿದೆ ಮಾಹಿತಿ

3. ಏಪ್ರಿಲ್ 1 ರಿಂದ ಟಿವಿ ತುಂಬಾ ದುಬಾರಿಯಾಗಲಿದೆ :
1 ಏಪ್ರಿಲ್ 2021 ರಿಂದ ಟಿವಿ (TV) ಖರೀದಿಸುವುದು ದುಬಾರಿಯಾಗುತ್ತದೆ. ಕಳೆದ 8 ತಿಂಗಳಲ್ಲಿ ಟಿವಿಯ ಬೆಲೆ 3 ರಿಂದ 4 ಸಾವಿರ ರೂಪಾಯಿ ಹೆಚ್ಚಾಗಿದೆ. 1 ಏಪ್ರಿಲ್ 2021 ರಿಂದ ಟಿವಿಯ ಬೆಲೆ ಕನಿಷ್ಠ 2 ರಿಂದ 3 ಸಾವಿರ ರೂಪಾಯಿಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದಲ್ಲದೆ ಟಿವಿ ತಯಾರಕರು ಪಿಎಲ್ಐ (PLI) ಯೋಜನೆಗಳಲ್ಲಿ ಟಿವಿ ತರಲು ಒತ್ತಾಯಿಸಿದ್ದಾರೆ. 

4. ಏಪ್ರಿಲ್ 1 ರಿಂದ ವಿಮಾನ ಪ್ರಯಾಣ ದುಬಾರಿಯಾಗಲಿದೆ :
ಇನ್ನು ಮುಂದೆ ನೀವು ವಿಮಾನದಲ್ಲಿ (Flights) ಪ್ರಯಾಣಿಸುವುದು ನಿಮ್ಮ ಜೇಬಿನ ಹೊರೆಯನ್ನು ಹೆಚ್ಚಿಸಬಹುದು. ವಾಸ್ತವವಾಗಿ ದೇಶೀಯ ವಿಮಾನಗಳ ಕನಿಷ್ಠ ಶುಲ್ಕವನ್ನು ಶೇಕಡಾ 5 ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಏಪ್ರಿಲ್ 1 ರಿಂದ ಏವಿಯೇಷನ್ ​​ಸೆಕ್ಯುರಿಟಿ ಶುಲ್ಕ ಕೂಡ ಹೆಚ್ಚಾಗಲಿದೆ. ಏಪ್ರಿಲ್ 1 ರಿಂದ ದೇಶೀಯ ವಿಮಾನಗಳ ವಾಯುಯಾನ ಭದ್ರತಾ ಶುಲ್ಕ 200 ರೂ. ಪ್ರಸ್ತುತ ಇದು 160 ರೂಪಾಯಿ. ಅಂತರರಾಷ್ಟ್ರೀಯ ವಿಮಾನಗಳ ಶುಲ್ಕ $ 5.2 ರಿಂದ $ 12 ಕ್ಕೆ ಹೆಚ್ಚಾಗುತ್ತದೆ. ಹೊಸ ದರಗಳು ಏಪ್ರಿಲ್ 1, 2021 ರಿಂದ ಜಾರಿಗೆ ಬರಲಿವೆ.

ಇದನ್ನೂ ಓದಿ - Photos: ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ 5 ಧನ್ಸು ಕಾರುಗಳು, ಅವುಗಳ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ

5. ಎಕ್ಸ್‌ಪ್ರೆಸ್‌ವೇನಲ್ಲಿನ ಪ್ರಯಾಣ ದುಬಾರಿ:
ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಪ್ರಯಾಣ ಹೆಚ್ಚು ದುಬಾರಿಯಾಗಲಿದೆ. ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯು 2021-22ರ ಹೊಸ ದರಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಕನಿಷ್ಠ 5 ರೂಪಾಯಿ ಮತ್ತು ಗರಿಷ್ಠ 25 ರೂಪಾಯಿಗಳ ಹೆಚ್ಚಳ ಕಂಡುಬಂದಿದೆ. ಹೊಸ ದರಗಳು ಏಪ್ರಿಲ್ 1 ರಿಂದ ಅನ್ವಯವಾಗುತ್ತವೆ.

6. ಈ ಭಾಗದ ಜನರು ವಿದ್ಯುತ್ಗಾಗಿ ಹೆಚ್ಚಿನ ಬೆಲೆ ಪಾವತಿಸಬೇಕಾಗುತ್ತದೆ :
ಏಪ್ರಿಲ್ 1 ರಿಂದ ಬಿಹಾರದ ಜನರು ಹೆಚ್ಚಿನ ವಿದ್ಯುತ್ ಬಿಲ್ನ ಆಘಾತವನ್ನು ಪಡೆಯಲಿದ್ದಾರೆ. ಬಿಹಾರದ ಜನರು ಏಪ್ರಿಲ್ 1 ರಿಂದ ವಿದ್ಯುತ್ಗಾಗಿ ಹೆಚ್ಚಿನ ಹಣ ಪಾವತಿಸಬೇಕಾಗಬಹುದು. ವಿದ್ಯುತ್ ಇಲಾಖೆಯ ಪ್ರಕಾರ, ದಕ್ಷಿಣ ಮತ್ತು ಉತ್ತರ ಬಿಹಾರ ವಿದ್ಯುತ್ ವಿತರಣಾ ಕಂಪನಿ ವಿದ್ಯುತ್ ದರವನ್ನು ಶೇಕಡಾ 9 ರಿಂದ 10 ರಷ್ಟು ಹೆಚ್ಚಿಸಲು ಪ್ರಸ್ತಾಪಿಸಿದೆ. ಈ ಪ್ರಸ್ತಾಪವನ್ನು ಅಂಗೀಕರಿಸಿದರೆ, ಬಿಹಾರದಲ್ಲಿ ವಿದ್ಯುತ್ ದರ ಹೆಚ್ಚಾಗುತ್ತದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News