ಅಕ್ಟೋಬರ್ ಆರಂಭದಲ್ಲೇ ಕಹಿ! ಭಾರೀ ಏರಿಕೆ ಕಂಡ ಸಿಲಿಂಡರ್ ಬೆಲೆ… ಎಷ್ಟಾಗಿದೆ ನೋಡಿ

Commercial LPG Cylinders Rates: ಸೆಪ್ಟೆಂಬರ್ 1 ರ ಆರಂಭದಲ್ಲಿ ವಾಣಿಜ್ಯ ಎಲ್‌ ಪಿ ಜಿ ಸಿಲಿಂಡರ್‌’ಗಳ ಬೆಲೆಯನ್ನು ಒಎಂಸಿ 158 ರೂ ಕಡಿತಗೊಳಿಸಿತ್ತು. ಆದರೆ ಇದಾದ ಕೇವಲ ಒಂದು ತಿಂಗಳ ಬಳಿಕ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.

Written by - Bhavishya Shetty | Last Updated : Oct 1, 2023, 09:14 AM IST
    • ಅಕ್ಟೋಬರ್ ಮೊದಲ ದಿನವೇ ಹಣದುಬ್ಬರದ ಆಘಾತ
    • ವಾಣಿಜ್ಯ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ 209 ರೂ. ಏರಿಕೆ
    • ಸಿಲಿಂಡರ್‌’ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ
ಅಕ್ಟೋಬರ್ ಆರಂಭದಲ್ಲೇ ಕಹಿ! ಭಾರೀ ಏರಿಕೆ ಕಂಡ ಸಿಲಿಂಡರ್ ಬೆಲೆ… ಎಷ್ಟಾಗಿದೆ ನೋಡಿ   title=
Commercial LPG Cylinders Rates

Commercial LPG Cylinders Rates: ಅಕ್ಟೋಬರ್ ಮೊದಲ ದಿನವೇ ಹಣದುಬ್ಬರದ ಆಘಾತ ಕಂಡುಬಂದಿದೆ. ವಾಣಿಜ್ಯ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ 209 ರೂ. ಏರಿಕೆ ಕಂಡಿದ್ದು, ಒಟ್ಟಾರೆ ಬೆಲೆ 1731.50 ರೂ. ಆಗಿದೆ. ತೈಲ ಮಾರುಕಟ್ಟೆ ಕಂಪನಿಗಳು (OMC) ಭಾನುವಾರದಿಂದ ವಾಣಿಜ್ಯ LPG ಸಿಲಿಂಡರ್‌’ಗಳ ಬೆಲೆಯನ್ನು 209 ರೂ.ಗಳಷ್ಟು ಹೆಚ್ಚಿಸಿವೆ. ಇಂದಿನಿಂದಲೇ ಈ ಬೆಲೆಗಳು ಜಾರಿಗೆ ಬರಲಿವೆ.

ಇದನ್ನೂ ಓದಿ: ವಿಶ್ವಕಪ್’ನಿಂದ ಟೀಂ ಇಂಡಿಯಾದ 6 ಸ್ಟಾರ್ ಪ್ಲೇಯರ್ಸ್ ಔಟ್! ಬದಲಿಗೆ ಈ ಆಟಗಾರರಿಗೆ ಸ್ಥಾನ..

ಸಿಲಿಂಡರ್ ಬೆಲೆ ಎಷ್ಟು?

ಸೆಪ್ಟೆಂಬರ್ 1 ರ ಆರಂಭದಲ್ಲಿ ವಾಣಿಜ್ಯ ಎಲ್‌ ಪಿ ಜಿ ಸಿಲಿಂಡರ್‌’ಗಳ ಬೆಲೆಯನ್ನು ಒಎಂಸಿ 158 ರೂ ಕಡಿತಗೊಳಿಸಿತ್ತು. ಆದರೆ ಇದಾದ ಕೇವಲ ಒಂದು ತಿಂಗಳ ಬಳಿಕ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಈ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,522 ರೂ.ನಿಂದ 1,731.50 ರೂ.ಗೆ ಏರಿಕೆಯಾಗಿದೆ.

ಆಗಸ್ಟ್‌’ನಲ್ಲಿ ದೇಶಾದ್ಯಂತ ಎಲ್ಲಾ ಸಂಪರ್ಕ ಹೊಂದಿರುವವರಿಗೆ ದೇಶೀಯ ಎಲ್‌’ಪಿಜಿ ಸಿಲಿಂಡರ್‌’ಗಳ ಬೆಲೆಯನ್ನು ಕೇಂದ್ರ ಸರ್ಕಾರ 200 ರೂಪಾಯಿಗಳಷ್ಟು ಇಳಿಸಿತ್ತು.  

ಇದನ್ನೂ ಓದಿ: 13 ವರ್ಷಗಳ ಕ್ರಿಕೆಟ್ ಬದುಕು ಅಂತ್ಯ… 37ರ ಹರೆಯದ ಭಾರತದ ಸ್ಟಾರ್ ಬಲಗೈ ಸ್ಪಿನ್ನರ್ ನಿವೃತ್ತಿ ಘೋಷಣೆ

ಗೃಹ ಬಳಕೆಯ ಸಿಲಿಂಡರ್ ಬೆಲೆ ಎಷ್ಟು?

ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌’ಪಿಜಿ ಸಿಲಿಂಡರ್‌’ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇದಕ್ಕೂ ಮೊದಲು ಆಗಸ್ಟ್‌’ನಲ್ಲಿಯೂ ಆಯಿಲ್ ಮಾರ್ಕೆಟಿಂಗ್ ಕಂಪನಿಯು ವಾಣಿಜ್ಯ ಎಲ್‌’ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 99.75 ರೂ. ಇಳಿಕೆ ಮಾಡಿತ್ತು. ಆದರೆ, ಗೃಹಬಳಕೆಯ ಎಲ್‌’ಪಿಜಿ ಸಿಲಿಂಡರ್‌’ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News