Indian Railways : ಟಿಕೆಟ್ ಇಲ್ಲದೆಯೂ ರೈಲು ಪ್ರಯಾಣ ಸಾಧ್ಯ , ತಿಳಿಯಿರಿ ಏನು ಹೇಳುತ್ತದೆ ರೈಲ್ವೆಯ ಹೊಸ ನಿಯಮ

Platform Ticket Rules : ಟಿಕೆಟ್ ರಿಸರ್ವ್ ಮಾಡದೇ ಹೋದರೂ, ಪ್ಲಾಟ್‌ಫಾರ್ಮ್ ಟಿಕೆಟ್ ಮೂಲಕ ರೈಲಿನಲ್ಲಿ ಪ್ರಯಾಣಿಸಬಹುದು. ರೈಲ್ವೆಯ ಹೊಸ ನಿಯಮ ಏನು ಹೇಳುತ್ತದೆ ನೋಡೋಣ. 

Written by - Ranjitha R K | Last Updated : Nov 27, 2021, 12:41 PM IST
  • ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡು ಪ್ರಯಾಣಿಕರು ರೈಲು ಹತ್ತಬಹುದು
  • ಪ್ಲಾಟ್‌ಫಾರ್ಮ್ ಟಿಕೆಟ್‌ನೊಂದಿಗೆ ರೈಲು ಪ್ರಯಾಣವನ್ನೂ ಮಾಡಬಹುದು
  • ಪ್ಲಾಟ್‌ಫಾರ್ಮ್ ಟಿಕೆಟ್ ಮೂಲಕ ಪ್ರಯಾಣಿಕರು ರೈಲು ಹತ್ತಬಹುದು
Indian Railways : ಟಿಕೆಟ್ ಇಲ್ಲದೆಯೂ ರೈಲು ಪ್ರಯಾಣ ಸಾಧ್ಯ , ತಿಳಿಯಿರಿ ಏನು ಹೇಳುತ್ತದೆ ರೈಲ್ವೆಯ ಹೊಸ ನಿಯಮ title=
Indian Railways (File photo)

ನವದೆಹಲಿ : ರೈಲಿನಲ್ಲಿ ಪ್ರಯಾಣಿಸುವವರೂ ರೈಲ್ವೆಯಾ ಈ ಹೊಸ ನಿಯಮವನ್ನು (Reservation Rules) ತಿಳಿದುಕೊಂಡಿರಲೇ ಬೇಕು.  ಈಗ ಟಿಕೆಟ್ ಕಾಯ್ದಿರಿಸದಿದ್ದರೂ ರೈಲಿನಲ್ಲಿ ಪ್ರಯಾಣಿಸಬಹುದು. ಹಠಾತ್ ರೈಲು ಪ್ರಯಾಣ ಮಾಡಬೇಕಾದ ಸಂದರ್ಭ ಎದುರಾದಾಗ ಗಾಬರಿ ಪಡುವ ಅಗತ್ಯವಿಲ್ಲ. ಈ ಹಿಂದೆ, ಅಂತಹ ಸಮಯಕ್ಕೆ, ತತ್ಕಾಲ್ ಟಿಕೆಟ್ ಬುಕಿಂಗ್ (Tatkal Ticket Booking Rules) ನಿಯಮಗಳ ಆಯ್ಕೆ ಮಾತ್ರ ಇತ್ತು. ಆದರೆ  ಈಗ ತತ್ಕಾಲ್ ನಲ್ಲಿ ಟಿಕೆಟ್ ಪಡೆಯುವುದು ಕೂಡಾ ಸುಲಭವಲ್ಲ.  ಈ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರಿಗೆ ಅನುಕೂಲವಾಗುವ  ದೃಷ್ಟಿಯಿಂದ ರೈಲ್ವೇಯು ಹೊಸ ಸೌಲಭ್ಯವನ್ನು ನೀಡುತ್ತಿದೆ. ಈ ಸೌಲಭ್ಯದ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸದೆ ಇದ್ದರೂ ಪ್ರಯಾಣ ಮಾಡಬಹುದಾಗಿದೆ. 

ಪ್ಲಾಟ್‌ಫಾರ್ಮ್ ಟಿಕೆಟ್‌ನಲ್ಲಿ ಪ್ರಯಾಣ :
ತುರ್ತಾಗಿ ರೈಲಿನಲ್ಲಿ ಎಲ್ಲೋ ಹೋಗಬೇಕಾದ ಸಂದರ್ಭ ಎದುರಾಗಿ, ಕೇವಲ ಪ್ಲಾಟ್‌ಫಾರ್ಮ್ ಟಿಕೆಟ್ (Platform Ticket Rules) ಮಾತ್ರ ತೆಗೆದುಕೊಂಡಿದ್ದರೆ, ಯೋಚನೆ ಮಾಡಬೇಕಿಲ್ಲ. ಕೇವಲ ಪ್ಲಾಟ್ ಫಾರಂ ಟಿಕೆಟ್ ಮೂಲಕ ರೈಲು ಹತ್ತಬಹುದು. ನಂತರ ಟಿಕೆಟ್ ಪರೀಕ್ಷಕರಿಗೆ ಪ್ಲಾಟ್ ಫಾರಂ ಟಿಕೆಟ್ (Platform Ticket)  ತೋರಿಸಿ, ನಿಮಗೆ ಎಲ್ಲಿಗೆ ಹೋಗಬೇಕೋ ಅಲ್ಲಿವರೆಗೆ ಟಿಕೆಟ್ ಪಡೆದುಕೊಳ್ಳಬಹುದು. 

ಇದನ್ನೂ ಓದಿ : ಓಲಾ-ಉಬರ್ ಮೂಲಕ ಆಟೋ ಬುಕ್ ಮಾಡುತ್ತೀರಾ?: 5% GST ಪಾವತಿಸಲು ಸಿದ್ಧರಾಗಿ..!

ಸೀಟು ಖಾಲಿ ಇಲ್ಲದಿದ್ದರೂ  ಆಯ್ಕೆ ಇದೆ :
ರೈಲಿನಲ್ಲಿ ಸೀಟು ಖಾಲಿ ಇಲ್ಲದಿದ್ದರೆ, TTE ಸೀಟು ನೀಡಲು ನಿರಾಕರಿಸಬಹುದು. ಆದರೆ, ಪ್ರಯಾಣ ನಿಲ್ಲಿಸುವಂತಿಲ್ಲ. ಪ್ರಯಾಣಿಕರ ಬಳಿ ಕಾಯ್ದಿರಿಸಿದ ಟಿಕೆಟ್ ಇಲ್ಲದೆ ಹೋದರೆ, 250 ರೂಪಾಯಿಗಳ ದಂಡ ಶುಲ್ಕದೊಂದಿಗೆ, ಪ್ರಯಾಣದ ಒಟ್ಟು ಶುಲ್ಕವನ್ನು ಪಾವತಿಸಿ ಮಾಡಿದ ಟಿಕೆಟ್ ಪಡೆಯಬೇಕು. 

ಪ್ಲಾಟ್ ಫಾರಂ ಟಿಕೆಟ್ :
ಪ್ಲಾಟ್‌ಫಾರ್ಮ್ ಟಿಕೆಟ್ ಪ್ರಯಾಣಿಕರಿಗೆ  (Benefits of Platform Ticket) ರೈಲು ಹಟ್ಟುವ ಅವಕಾಶವನ್ನು ನೀಡುತ್ತದೆ. ಇದರೊಂದಿಗೆ, ಪ್ರಯಾಣಿಕರು ತಾನು ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡ ನಿಲ್ದಾಣದಿಂದಲೇ ಪ್ರಯಾಣ ದರವನ್ನು ಪಾವತಿಸಬೇಕಾಗುತ್ತದೆ. ದರವನ್ನು ವಿಧಿಸುವಾಗ, ನಿರ್ಗಮನ ನಿಲ್ದಾಣವನ್ನು ಅದೇ ನಿಲ್ದಾಣವೆಂದು ಪರಿಗಣಿಸಲಾಗುತ್ತದೆ.   ಯಾವ ವರ್ಗದಲ್ಲಿ ಪ್ರಯಾಣಿಸುತ್ತಾರೆಯೋ ಅದೇ ವರ್ಗದ ದರವನ್ನು ನೀಡಬೇಕಾಗುತ್ತದೆ. 

ಇದನ್ನೂ ಓದಿ : ಗ್ರಾಹಕರಿಗೆ ಸಿಹಿಸುದ್ದಿ: ತಾಜಾ ಬೆಳೆ ಆಗಮನದೊಂದಿಗೆ ಡಿಸೆಂಬರ್‌ನಿಂದ ಟೊಮೇಟೊ ಬೆಲೆ ಇಳಿಕೆ ಸಾಧ್ಯತೆ

ಎಲ್ಲಿಯವರೆಗೆ ಸೀಟು ನಿಮ್ಮದಾಗಿರುತ್ತದೆ : 
ಯಾವುದೇ ಕಾರಣದಿಂದ ರೈಲು ತಪ್ಪಿಹೋದರೆ ನಂತರ TTE ಮುಂದಿನ ಎರಡು ನಿಲ್ದಾಣಗಳವರೆಗೆ ನಿಮ್ಮ ಆಸನವನ್ನು ಯಾರಿಗೂ ನೀಡಲಾಗುವುದಿಲ್ಲ. ಎರಡು ನಿಲ್ದಾಣಗಳ ನಂತರ, TTE RAC ಟಿಕೆಟ್‌ ಇರುವ ಪ್ರಯಾಣಿಕರಿಗೆ ಆಸನವನ್ನು ನಿಗದಿಪಡಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News