Indian Railway : ಇನ್ನು ನೇರ ಮನೆಯಿಂದ ನೀವು ಬುಕ್ ಮಾಡಿರೋ ಸೀಟ್ ತನಕ ಬ್ಯಾಗೆಜ್ ತಲುಪಿಸುತ್ತದೆ ರೈಲ್ವೆ.! ಹೇಗೆ ಗೊತ್ತಾ?

ರೈಲು ಪ್ರಯಾಣವೇನೋ ನಿರಾಯಾಸವಾಗಿರುತ್ತದೆ ಇದರಲ್ಲಿ ಎರಡು ಮಾತಿಲ್ಲ. ಆದರೆ ರೈಲು ನಿಲ್ದಾಣದವರೆಗೆ  ಮತ್ತು ನಿಲ್ದಾಣದಿಂದ ಸಾಮಾನುಗಳನ್ನು ಸಾಗಿಸುವುದೇ ಬಹು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ.  

Written by - Ranjitha R K | Last Updated : Jan 24, 2021, 03:49 PM IST
  • ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ
  • ಇನ್ನು ರೈಲ್ವೆ ನೀಡಲಿದೆ ಲಗೇಜ್ ಪಿಕ್ ಡ್ರಾಪ್ ಸೇವೆ
  • ಜನವರಿ 26ರಿಂದ ಪ್ರಾಯೋಗಿಕವಾಗಿ ಯೋಜನೆ ಆರಂಭ
Indian Railway : ಇನ್ನು ನೇರ ಮನೆಯಿಂದ ನೀವು ಬುಕ್ ಮಾಡಿರೋ ಸೀಟ್ ತನಕ ಬ್ಯಾಗೆಜ್ ತಲುಪಿಸುತ್ತದೆ ರೈಲ್ವೆ.! ಹೇಗೆ  ಗೊತ್ತಾ? title=
ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ (file photo)

ದೆಹಲಿ:  ಕರೋನಾ ಅವಧಿಯಲ್ಲಿ ಭಾರತೀಯ ರೈಲ್ವೆ(Indian Railway) ಸಾಕಷ್ಟು ರೈಲುಗಳ ಸಂಚಾರವನ್ನು ನಿಲ್ಲಿಸಿದೆ. ಆದರೂ  ಸಾವಿರಾರು ಜನರು ಇನ್ನೂ ರೈಲಿನಲ್ಲೇ ಪ್ರಯಾಣ  ಬೆಳೆಸುತ್ತಾರೆ. ರೈಲು ಪ್ರಯಾಣವೇನೋ ನಿರಾಯಾಸವಾಗಿರುತ್ತದೆ ಇದರಲ್ಲಿ ಎರಡು ಮಾತಿಲ್ಲ. ಆದರೆ ರೈಲು ನಿಲ್ದಾಣದವರೆಗೆ (Railway Station) ಮತ್ತು ನಿಲ್ದಾಣದಿಂದ ಸಾಮಾನುಗಳನ್ನು ಸಾಗಿಸುವುದೇ ಬಹು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಇದೀಗ ಪ್ರಯಾಣಿಕರ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ರೈಲ್ವೆ ಇಲಾಖೆ ಮಹತ್ತರ ಹೆಜ್ಜೆಯನ್ನು ಇಟ್ಟಿದೆ. 

ಪ್ರಯಾಣಿಕರಿಗೆ ಹೇಗೆ ಸಿಗಲಿದೆ ಪರಿಹಾರ ? :
ಭಾರತೀಯ ರೈಲ್ವೆ (Indian Railway),ಪ್ರಯಾಣಿಕರ ಮನೆಯಿಂದ ಸರಕುಗಳನ್ನು ರೈಲ್ವೆ ನಿಲ್ದಾಣಕ್ಕೆ (Railway Station) ತಲುಪಿಸಲು ಮತ್ತು ರೈಲ್ವೆ ನಿಲ್ದಾಣದಿಂದ ಮನೆಗೆ  ತಲುಪಿಸಲು  ಯೋಜನೆ ರೂಪಿಸುತ್ತಿದೆ. ಈ ಯೋಜನೆ ಅನುಷ್ಠಾನಗೊಂಡ ನಂತರ,  ಪ್ರಯಾಣಿಕರು (Passenger)  ನೋಡಲ್ ಏಜೆನ್ಸಿಯ ಆ್ಯಪ್ ಅಥವಾ  ರೈಲ್ವೆ ವೆಬ್‌ಸೈಟ್ (Railway website) ಮೂಲಕ ತಮ್ಮಸರಕುಗಳ ಸಾಗಣೆ ಪ್ರಕ್ರಿಯೆಯನ್ನು ಕಾಯ್ದಿರಿಸಬಹುದು. ಇಷ್ಟಾದ ನಂತರ ಪ್ರಯಾಣಿಕರಿಗೆ ತಮ್ಮ ಸರಕುಗಳನ್ನು ಸಾಗಿಸುವ ತಲೆನೋವಿನಿಂದ ಮುಕ್ತಿ ಸಿಗುತ್ತದೆ.  ಅಲ್ಲದೆ ರೈಲು ನಿಲ್ದಾಣದಲ್ಲಿ ಕೂಲಿಗಳಿಂದ ಉಂಟಾಗುವ ಕಿರಿಕಿರಿಯೂ ಕಡಿಮೆಯಾಗುತ್ತದೆ.

ಇದನ್ನೂ ಓದಿ Update on Trains: ಪೂರ್ಣ ಪ್ರಮಾಣದ ರೈಲುಸಂಚಾರಕ್ಕೆ ಎರಡು ತಿಂಗಳು ಕಾಯಲೇಬೇಕು..!

ಜನವರಿ 26 ರಿಂದ ಯೋಜನೆ ಜಾರಿ ಸಾಧ್ಯತೆ :
 ಜನವರಿ 26 ರಿಂದ ಅಹಮದಾಬಾದ್  (Ahmedabad) ರೈಲ್ವೆ ನಿಲ್ದಾಣದಿಂದ ಈ ಯೋಜನೆ ಪ್ರಾಯೋಗಿಕವಾಗಿ ಪ್ರಾರಂಭವಾಗಲಿದೆ. ಪ್ರಯೋಗ ಯಶಸ್ವಿಯಾದರೆ ನಂತರ,  ದೇಶದ ಇತರ ಭಾಗಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ರೈಲ್ವೆ ಪೂರ್ವ ವಿಭಾಗದ ಪಾಟ್ನಾ ಜಂಕ್ಷನ್ ನಿಂದ  ಈ ಯೋಜನೆ ಕಾರ್ಯಾರಂಭವಾಗಿಲಿದೆ.  ಇದಕ್ಕಾಗಿ ಪೂರ್ವ ರೈಲ್ವೆ ವಿಭಾಗಕ್ಕೆ ರೈಲ್ವೆ ಸಚಿವಾಲಯ  ಅನುಮೋದನೆಯನ್ನು ಸಹಾ ನೀಡಿದೆ. ಯೋಜನೆಯ ಅನುಷ್ಟಾನಕ್ಕಾಗಿ ರೈಲ್ವೆ ನಿಲ್ದಾಣದ ಒಳಗೆ 100 ಚದರ ಅಡಿ ಜಾಗವನ್ನು ಏಜೆನ್ಸಿಗಳಿಗಾಗಿ ನೀಡಲಾಗುತ್ತಿದೆ.  ಆರಂಭದಲ್ಲಿ, ರೈಲ್ವೆ ನಿಲ್ದಾಣದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗುವುದು.

ಶುಲ್ಕ ಎಷ್ಟಿರುತ್ತದೆ?:
ಒಂದು ವೇಳೆ ನಿಮ್ಮ ಬ್ಯಾಗ್ 10 ಕೆಜಿ ತೂಕವಿದ್ದರೆ, ಒಂದು ಸೈಡ್ಗೆ  125 ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಟಿಕೆಟ್‌ನಲ್ಲಿ(Ticket) ಒಂದಕ್ಕಿಂತ ಹೆಚ್ಚು ಬರ್ತ್ ಇದ್ದು, ಸರಕು ಹೆಚ್ಚಿದ್ದರೆ ಹೆಚ್ಚುವರಿ ಬ್ಯಾಗೇಜ್‌ಗಾಗಿ  ಪ್ರತಿ ಚೀಲಕ್ಕೆ 50 ರೂಪಾಯಿ ವಿಧಿಸಲಾಗುತ್ತದೆ. ಒಂದು ಸಲ ನಿಲ್ದಾಣ ತಲುಪಿದ ಮೇಲೆ, ಬರ್ತ್ (Berth)ಅಥವಾ ಬೋಗಿ ವರೆಗೆ ಸಾಮಾನು ತೆಗೆದುಕೊಂಡು ಹೋಗಲು  ಪೋರ್ಟರ್‌ನ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಈ ಪೂರ್ತಿ ಪ್ರಕ್ರಿಯೆ ವೇಳೆ ಪ್ರಯಾಣಿಕರು ತಮ್ಮ ಸಾಮಾನುಗಳನ್ನು ಜಿಪಿಎಸ್ (GPS) ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ.

ಇದನ್ನೂ ಓದಿ :Indian Railways : ರೈಲು ಟಿಕೆಟ್‌ಗಳಲ್ಲಿ 10 % ರಿಯಾಯಿತಿ ಲಭ್ಯ! ಹೇಗೆಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News