Income tax Financial Year: 2021-22ರ ಆರ್ಥಿಕ ವರ್ಷ ಮುಗಿಯಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಇದಕ್ಕೂ ಮೊದಲು ಕೆಲವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವುದು ಬಹಳ ಮುಖ್ಯ. ಮಾರ್ಚ್ 31 ರೊಳಗೆ ನೀವು ಈ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ, ಹೊಸ ಆರ್ಥಿಕ ವರ್ಷದಲ್ಲಿ ನೀವು ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇಂದು ನಾವು ನಿಮಗೆ ಮಾರ್ಚ್ 31 ರೊಳಗೆ ಮಿಸ್ ಮಾಡದೆ ಪೂರ್ಣಗೊಳಿಸಲೇಬೇಕಾದ 5 ಪ್ರಮುಖ ಕಾರ್ಯಗಳ ಬಗ್ಗೆ ತಿಳಿಸಲಿದ್ದೇವೆ.
ಈ ಕೆಲಸಗಳನ್ನು ಮಾರ್ಚ್ 31 ರೊಳಗೆ ತಪ್ಪದೇ ಪೂರ್ಣಗೊಳಿಸಿ :
ಆಧಾರ್-ಪ್ಯಾನ್ ಲಿಂಕ್:
ಆಧಾರ್ನೊಂದಿಗೆ ಪ್ಯಾನ್ ಲಿಂಕ್ (Aadhaar Pan Link) ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2022 ಆಗಿದೆ. ಪ್ಯಾನ್ ಕಾರ್ಡ್ ಹೊಂದಿರುವವರು ಅದನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ. ಬ್ಯಾಂಕ್ ಖಾತೆಗಳನ್ನು ತೆರೆಯಲು, ಷೇರುಗಳು ಅಥವಾ ಮ್ಯೂಚುವಲ್ ಫಂಡ್ಗಳನ್ನು ಖರೀದಿಸಲು ಪ್ಯಾನ್ ಕಡ್ಡಾಯವಾಗಿದೆ. ಅಲ್ಲದೆ, ಹೆಚ್ಚಿನ ಹಣಕಾಸು ಸಂಸ್ಥೆಗಳು KYC ಗಾಗಿ ಕೂಡ ಗ್ರಾಹಕರನ್ನು ಪ್ಯಾನ್ ಕಾರ್ಡ್ ಕೇಳುತ್ತವೆ. ನಿಗದಿತ ಗಡುವು ಮುಗಿಯುವ ಮುನ್ನ ಈ ಎರಡು ದಾಖಲೆಗಳನ್ನು ಲಿಂಕ್ ಮಾಡಲು ವಿಫಲವಾದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ 10,000 ರೂ.ವರೆಗೆ ದಂಡವನ್ನು ಸಹ ಪಾವತಿಸಬೇಕಾಗಬಹುದು.
ಆದಾಯ ತೆರಿಗೆ ರಿಟರ್ನ್:
2021-22ರ ಆರ್ಥಿಕ ವರ್ಷಕ್ಕೆ (Financial Year) ನೀವು ಇನ್ನೂ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸದಿದ್ದರೆ, ನೀವು ಅದನ್ನು 31 ಮಾರ್ಚ್ 2022 ರೊಳಗೆ ಭರ್ತಿ ಮಾಡಬೇಕು. ಪರಿಷ್ಕೃತ ಐಟಿಆರ್ ಅನ್ನು ಈ ದಿನಾಂಕದವರೆಗೆ ಸಲ್ಲಿಸಬಹುದು. ಆದಾಯ ತೆರಿಗೆ ರಿಟರ್ನ್ನಲ್ಲಿ ಯಾವುದೇ ತಿದ್ದುಪಡಿ ಇದ್ದರೂ, ಅದನ್ನು ಮಾಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಇದರ ನಂತರ ನೀವು ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ- ಕೇವಲ 342 ರೂ. ಪಾವತಿಸಿದರೆ SBI ಗ್ರಾಹಕರಿಗೆ ಸಿಗಲಿದೆ 4 ಲಕ್ಷ ರೂ.ಗಳ ಬಂಪರ್ ಲಾಭ
ಬ್ಯಾಂಕ್ ಖಾತೆಯ KYC:
ಮೊದಲು ಬ್ಯಾಂಕ್ ಖಾತೆ KYC ಅನ್ನು ನವೀಕರಿಸಲು ಕೊನೆಯ ದಿನಾಂಕ 31 ಮಾರ್ಚ್ 2021 ಆಗಿತ್ತು, ಆದರೆ ಕರೋನಾ ಕಾರಣ ಈ ದಿನಾಂಕವನ್ನು ವಿಸ್ತರಿಸಲಾಯಿತು. ಇದೀಗ ಬ್ಯಾಂಕ್ KYC ಅನ್ನು ನವೀಕರಿಸಲು ಕೊನೆಯ ದಿನಾಂಕ 31 ಮಾರ್ಚ್ 2022 ಆಗಿದೆ. ಮಾರ್ಚ್ 31 ರೊಳಗೆ ಬ್ಯಾಂಕ್ ಖಾತೆಗೆ ಅಂದರೆ ಉಳಿತಾಯ ಖಾತೆಗೆ KYC ಅನ್ನು ಪೂರ್ಣಗೊಳಿಸಿ.
ತೆರಿಗೆ ಉಳಿತಾಯ ಹೂಡಿಕೆ:
2021-22 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ (Income TAX) ವಿನಾಯಿತಿ ಪಡೆಯಲು, ಮಾರ್ಚ್ 31 ರೊಳಗೆ ಹೂಡಿಕೆ ಮಾಡಿ. ಅರ್ಥ, ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಇದರಿಂದ ನೀವು ತೆರಿಗೆ ರಿಯಾಯಿತಿಯನ್ನು ಪಡೆಯಬಹುದು. ಇದು ಪಿಪಿಎಫ್, ಸುಕನ್ಯಾ ಸಮೃದ್ಧಿಯಂತಹ ಸಣ್ಣ ಉಳಿತಾಯ ಯೋಜನೆಗಳನ್ನು ಒಳಗೊಂಡಿದೆ. ಅಲ್ಲದೆ, ನೀವು ಎಲ್ಐಸಿಯ ಕಂತು ಪಾವತಿಸುವ ಮೂಲಕ ತೆರಿಗೆಯನ್ನು ಉಳಿಸಬಹುದು. ಇದಲ್ಲದೆ, ಇತರ ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಹ ಮಾರ್ಚ್ 31 ಕೊನೆಯ ದಿನಾಂಕವಾಗಿದೆ.
ಇದನ್ನೂ ಓದಿ- Mutual Fund ಹೂಡಿಕೆದಾರರಿಗೊಂದು ಸಂತಸದ ಸುದ್ದಿ, ನೂತನ ನಿಯಮ ಜಾರಿಗೊಳಿಸಿದ SEBI
PMAY ಸಬ್ಸಿಡಿ:
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಒಂದು ಸರ್ಕಾರಿ ಯೋಜನೆಯಾಗಿದ್ದು, ಇದು ಕಡಿಮೆ ಆದಾಯದ ಗುಂಪು (LIG) / ಆರ್ಥಿಕವಾಗಿ ದುರ್ಬಲ (EWS) ವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲಿ ವಸತಿಗಳನ್ನು ಒದಗಿಸುತ್ತದೆ. ಇದರಲ್ಲಿ ಫಲಾನುಭವಿಗಳು 20 ವರ್ಷಗಳ ಸಾಲವನ್ನು @ 6.5% p.a. ಪಡೆಯಬಹುದು. LIG ಮತ್ತು EWS ವರ್ಗಗಳಿಗೆ PMAY ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS) ಅನ್ನು ಪಡೆಯಲು ಕೊನೆಯ ದಿನಾಂಕ ಮಾರ್ಚ್ 31, 2022 ಆಗಿದೆ.
ಮಾರ್ಚ್ 31 ರೊಳಗೆ ನೀವು ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ನೀವು ನಷ್ಟ ಅನುಭವಿಸಬಹುದು. ಹಾಗಾಗಿ ಮಾರ್ಚ್ 31ರ ಮೊದಲು ಈ ಎಲ್ಲಾ ಕೆಲಸಗಳನ್ನು ತಪ್ಪದೇ ಪೂರ್ಣಗೊಳಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.