Income Tax Alert! ಹೊಸ ಪೋರ್ಟಲ್ ನಲ್ಲಿ ತಾಂತ್ರಿಕ ಅಡಚಣೆ, 15CA ಹಾಗೂ 15CB ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ

Income Tax Alert! ಆದಾಯ ತೆರಿಗೆ ಇಲಾಖೆ ತನ್ನ ಹೊಸ ಇ-ಫೈಲಿಂಗ್ ಪೋರ್ಟಲ್ ಅನ್ನು ಜೂನ್ 7, 2021 ರಂದು ಬಿಡುಗಡೆಗೊಳಿಸಿದೆ. ಆದರೆ, ಹೊಸ ಪೋರ್ಟಲ್ ನಲ್ಲಿ ಬಳಕೆದಾರರಿಗೆ ನಿರಂತರವಾಗಿ ತಾಂತ್ರಿಕ ದೋಷಗಳು ಎದುರಾಗುತ್ತಿವೆ.

Written by - Nitin Tabib | Last Updated : Jun 15, 2021, 01:48 PM IST
  • ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ ನಲ್ಲಿ ತಾಂತ್ರಿಕ ದೋಷ.
  • ಯಾವ ವೈಶಿಷ್ಟ್ಯಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ತೆರಿಗೆ ಪಾವತಿದಾರರ ಪರದಾಟ.
  • ಹೀಗಾಗಿ, 15CA ಹಾಗೂ 15CB ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ.
Income Tax Alert! ಹೊಸ ಪೋರ್ಟಲ್ ನಲ್ಲಿ ತಾಂತ್ರಿಕ ಅಡಚಣೆ, 15CA ಹಾಗೂ 15CB ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ title=
Income Tax Alert (File Photo)

Income Tax Alert! ಕೆಲ ದಿನಗಳ ಹಿಂದೆಯಷ್ಟೇ ಆದಾಯ ತೆರಿಗೆ ಇಲಾಖೆ (Income Tax Department)ತನ್ನ ಹೊಸ ವೆಬ್ಸೈಟ್ (New e-Filing Portal)ಬಿಡುಗಡೆ ಮಾಡಿತ್ತು. ಈ ಹೊಸ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಆನ್ಲೈನ್ ಫಾರ್ಮ್ ಸಲ್ಲಿಸುವಿಕೆಯಲ್ಲಿ (Online Form Submission) ಅಡಚಣೆ ಎದುರಾಗುತ್ತಿರುವ ಕುರಿತು ಹಲವು ತೆರಿಗೆ ಪಾವತಿದಾರರು ದೂರಿದ್ದಾರೆ. ಈ ಹಿನ್ನೆಲೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಿಸ್ (Central Board Of Direct Taxes) 15CA ಹಾಗೂ 15CB ಫಾರ್ಮ್ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿದೆ. CBDT ಪ್ರಕಾರ ಇದೀಗ ಈ ಎರಡೂ ಫಾರ್ಮ್ ಗಳನ್ನು ಅಧಿಕೃತ ಡೀಲರ್ ಗಳ ಬಳಿ ವೈಯಕ್ತಿಕ ಫಾರ್ಮ್ಯಾಟ್ ನಲ್ಲಿ ಜೂನ್ 30, 2021ರವರೆಗೆ ಸಲ್ಲಿಸಬಹುದಾಗಿದೆ. ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್  ಪೋರ್ಟಲ್ https://incometax.gov.in ಬಿಡುಗಡೆಯಾದಾಗಿನಿಂದಲೇ ತೆರಿಗೆ ಪಾವತಿದಾರರು ನಿರಂತರವಾಗಿ ದೂರು ನೀಡುತ್ತಿದ್ದಾರೆ. 

ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ, ಫಾರ್ಮ್ 15CA/15CB ಗಳನ್ನು ಆನ್ಲೈನ್ ನಲ್ಲಿಯೇ ಸಲ್ಲಿಸುವುದು ಅನಿವಾರ್ಯವಾಗಿದೆ. ಪ್ರಸ್ತುತ ತೆರಿಗೆ ಪಾವತಿದಾರರಿಗೆ ಫಾರೆನ್ ರೆಮಿಟೆನ್ಸ್  ಪ್ರಕರಣಗಳಲ್ಲಿ ಇ-ಫೈಲಿಂಗ್ ಪೋರ್ಟಲ್ ಮೇಲೆ ಫಾರ್ಮ್ 15CA ಹಾಗೂ 15CB ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸರ್ಟಿಫಿಕೆಟ್ (CA Certificate) ಅಪ್ಲೋಡ್ ಮಾಡಬೇಕಾಗುತ್ತದೆ. ಬಳಿಕ ಈ ಕಾಪಿಯನ್ನು ಅಧಿಕೃತ ಡೀಲರ್ ಬಳಿ ಸಬ್ಮಿಟ್ ಮಾಡಬೇಕು.

ಇದನ್ನೂ ಓದಿ- PAN-Aadhaar Link: ಜೂನ್ 30ರೊಳಗೆ ಕೆಲಸ ಮಾಡದಿದ್ದಲ್ಲಿ ತೆರಬೇಕಾಗುತ್ತದೆ ಭಾರೀ ದಂಡ

ಅಧಿಕೃತ ಡೀಲರ್ ಬಳಿ ಜೂನ್ 30ರವರೆಗೆ ಫಾರ್ಮ್ ಸಲ್ಲಿಸಬೇಕು
ಈ ಕುರಿತು ಹೇಳಿಕೆ ಹೊರಡಿಸಿರುವ ಕೇಂದ್ರ ವಿತ್ತ ಸಚಿವಾಲಯ ಹೊಸ ಇ-ಫೈಲಿಂಗ್ ಪೋರ್ಟಲ್ ಮೇಲೆ ದಾಖಲೆಯ ಐಡೆಂಟಿಫಿಕೇಶನ್ ನಂಬರ್ ಜನರೇಟ್ (How To Generate Identification Number) ಮಾಡುವ ಉದ್ದೇಶದಿಂದ ನಂತರ ಈ ಫಾರಂ ಗಳನ್ನೂ ಅಪ್ಲೋಡ್ ಮಾಡಲು ಸೌಲಭ್ಯ ಒದಗಿಸಲಾಗುವುದು ಎನ್ನಲಾಗಿದೆ. ಸಚಿವಾಲಯ ಹೊರಡಿಸಿರುವ ಹೇಳಿಕೆಯ ಪ್ರಕಾರ ಫಾರೆನ್ ರೆಮಿಟೆನ್ಸ್ ಪ್ರಕರಣಗಳಲ್ಲಿ ಅಧಿಕೃತ ಡೀಲರ್ ಗಳಿಗೆ ಫಾರ್ಮ್ 15CA/15CB ಸ್ವಿಕೃತಿಯ ದಿನಾಂಕವನ್ನು ಜೂನ್ 30, 2021ರವರೆಗೆ ವಿಸ್ತರಿಸಲು ಕೋರಲಾಗಿದೆ ಎಂದಿದೆ. ತೆರಿಗೆ ಪಾವತಿದಾರರು (Tax Payers) ಈ ಡೀಲರ್ ಗಳ ಬಳಿ ವೈಯಕ್ತಿಕ ಭೇಟಿ ನೀಡುವ ಮೂಲಕ ಈ ಫಾರ್ಮ್ ಅನ್ನು ಸಲ್ಲಿಕೆ ಮಾಡಬೇಕು. 

ಇದನ್ನೂ ಓದಿ- ಕೇಂದ್ರ ಸರ್ಕಾರಿ ನೌಕರರ  DA ಹೆಚ್ಚಳ, DR ಪ್ರಯೋಜನಗಳಿಗೆ ಸಂಬಂಧಿಸಿದಂತೆ ಸಿಹಿ ಸುದ್ದಿ!

ಜೂನ್ 1 ರಂದು ಬಿಡುಗಡೆಯಾಗಿತ್ತು ಹೊಸ ಇ-ಫೈಲಿಂಗ್ ಪೋರ್ಟಲ್ 
ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ (IT Department New e-Filing Portal) ಜೂನ್ 7, 2021ರಂದು ಬಿಡುಗಡೆಯಾಗಿತ್ತು. ಆದರೆ, ಅದಾದ ಬಳಿಕ ಬಳಕೆದಾರರು ನಿರಂತರವಾಗಿ ತಾಂತ್ರಿಕ ಅಡಚಣೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಲಾಗಿನ್ ಗಾಗಿ ತುಂಬಾ ಕಾಯಬೇಕಾಗುತ್ತಿದೆ. ಈ ಹಿನ್ನೆಲೆ ನೋಟಿಸ್ ಗಳ ಮೂಲಕ ಸೂಚನೆ ನೀಡುವುದು ಕೂಡ ಸಾಧ್ಯವಾಗುತ್ತಿಲ್ಲ ಹಾಗೂ ಎಲ್ಲಾ ವೈಶಿಷ್ಟ್ಯಗಳು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ. ತೆರಿಗೆ ಪಾವತಿದಾರರ ಇ-ಫೈಲಿಂಗ್ ಅನ್ನು ಸುಲಭಗೊಳಿಸಲು ಈ ಹೊಸ ಪೋರ್ಟಲ್ ಅನ್ನು ಇಲಾಖೆ ಆರಂಭಿಸಿತ್ತು.

ಇದನ್ನೂ ಓದಿ- ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ..! ತಪ್ಪಿದರೆ ಎದುರಾದೀತು ಈ ಸಮಸ್ಯೆಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News