EPFO ಖಾತೆಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿ, ನೀವೂ ಸಹ ಈ ತಪ್ಪು ಮಾಡಿದ್ದರೆ ಇಂದೇ ಸರಿಪಡಿಸಿ

ತಪ್ಪು ಬ್ಯಾಂಕ್ ಖಾತೆ ವಿವರಗಳನ್ನು ಯುಎಎನ್‌ನೊಂದಿಗೆ ಲಿಂಕ್ ಮಾಡಿದರೆ ಏನಾಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

Written by - Yashaswini V | Last Updated : Feb 19, 2021, 08:00 AM IST
  • ಯುನಿವರ್ಸಲ್ ಖಾತೆ ಸಂಖ್ಯೆ
  • ಯುಎಎನ್ ಖಾತೆದಾರನು ಪ್ರತಿ ಪಿಎಫ್ ಖಾತೆಯ ವಿವರಗಳನ್ನು ಸುಲಭವಾಗಿ ಪಡೆಯಬಹುದು
  • ಯುಎಎನ್‌ನಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸಲು ಸಾಧ್ಯವಾಗುತ್ತದೆ
EPFO ಖಾತೆಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿ, ನೀವೂ ಸಹ ಈ ತಪ್ಪು ಮಾಡಿದ್ದರೆ ಇಂದೇ ಸರಿಪಡಿಸಿ title=
How to update Bank Acoount Details in EPFO

EPFO Latest Updates : ನೀವು ಭವಿಷ್ಯನಿಧಿ (PF) ಖಾತೆದಾರರಾಗಿದ್ದರೆ, ನಿಮಗೆ ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ನೀಡಲಾಗುವುದು. ಯುಎಎನ್ ಖಾತೆದಾರನು ತನ್ನ ಪ್ರತಿಯೊಂದು ಪಿಎಫ್ ಖಾತೆಯ ವಿವರಗಳನ್ನು ಸುಲಭವಾಗಿ ಪಡೆಯುತ್ತಾನೆ. ಅದೂ ಕುಳಿತಲ್ಲಿಯೇ. ಹೌದು ... ಯುಎಎನ್ ಇಪಿಎಫ್ ಖಾತೆಯೊಂದಿಗೆ ಸಂಪರ್ಕ ಹೊಂದಿದೆ, ಹೆಚ್ಚುವರಿಯಾಗಿ, ನೌಕರನ ಬ್ಯಾಂಕ್ ಖಾತೆಯ ವಿವರಗಳನ್ನು ಸೇರಿಸುವ ಕೆಲಸವನ್ನು ಸಹ ಮಾಡಲಾಗುತ್ತದೆ. ಈ ಖಾತೆಯಲ್ಲಿಯೇ ಪಿಎಫ್ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

ಯುಎಎನ್ ಮತ್ತು ಬ್ಯಾಂಕ್ ಖಾತೆಯ ಬಗ್ಗೆ ಕೆಲವು ವಿಶೇಷ ವಿಷಯಗಳನ್ನು ತಿಳಿಯುವುದು ಬಹಳ ಮುಖ್ಯ. ವಾಸ್ತವವಾಗಿ, ತಪ್ಪು ಬ್ಯಾಂಕ್ ಖಾತೆ ವಿವರಗಳನ್ನು ಯುಎಎನ್‌ನೊಂದಿಗೆ ಲಿಂಕ್ ಮಾಡಿದರೆ ಏನಾಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ನಿಟ್ಟಿನಲ್ಲಿ, ಇಪಿಎಫ್‌ಒ (EPFO) ತಪ್ಪು ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್‌ಎಸ್‌ಸಿ ಯುಎಎನ್‌ನೊಂದಿಗೆ ಸಂಪರ್ಕ ಹೊಂದಿದ್ದರೆ ಭವಿಷ್ಯದಲ್ಲಿ ಇಪಿಎಫ್ ಮೊತ್ತವನ್ನು ಹಿಂಪಡೆಯುವುದು ಕಷ್ಟಕರವಾಗಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.

ಆದರೆ ತಪ್ಪಾದ ಬ್ಯಾಂಕ್ ಖಾತೆ ವಿವರಗಳನ್ನು ನಿಮ್ಮ ಯುಎಎನ್‌ನೊಂದಿಗೆ ಜೋಡಿಸಲಾಗಿದ್ದರೆ  ಚಿಂತಿಸಬೇಡಿ ... ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಖಾತೆಯಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸಲು ನಿಮಗೆ ಸಾಧ್ಯವಾಗುತ್ತದೆ. ಅದು ಹೇಗೆ ಸಾಧ್ಯ ಎಂದು ತಿಳಿಯಲು ಮುಂದೆ ಓದಿ...

ಇದನ್ನೂ ಓದಿ - EPFO : ನಿಮ್ಮ PF ಖಾತೆಯಲ್ಲಿಯೂ ಬಡ್ಡಿ ಸ್ವೀಕರಿಸದಿದ್ದರೆ ಈಗಲೇ ಈ ಕೆಲಸ ಮಾಡಿ

ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸಲು ಇದು ಸುಲಭವಾದ ಮಾರ್ಗವಾಗಿದೆ ...
ಮೊದಲನೆಯದಾಗಿ, ನಿಮ್ಮ ಕಂಪ್ಯೂಟರ್‌ನಲ್ಲಿ ಇಪಿಎಫ್‌ಒ (EPFO) ಏಕೀಕೃತ ಸದಸ್ಯ ಪೋರ್ಟಲ್ https://unifiedportal-mem.epfindia.gov.in/memberinterface/ ಅನ್ನು ತೆರೆಯಿರಿ.

- ಯುಎಎನ್ (UAN) ಮತ್ತು ಪಾಸ್‌ವರ್ಡ್ ಅನ್ನು ಇಲ್ಲಿ ನಮೂದಿಸಿ ಮತ್ತು ಲಾಗ್ ಇನ್ ಮಾಡಿ.

-ಈಗ 'ನಿರ್ವಹಿಸು' ಟ್ಯಾಬ್ ಕ್ಲಿಕ್ ಮಾಡಿ

- ನಿಮ್ಮ ಮುಂದೆ ಡ್ರಾಪ್ ಡೌನ್ ಮೆನು ಕಾಣುತ್ತದೆ.

-ಈ ಮೆನುವಿನಲ್ಲಿ ಕೆವೈಸಿ ಆಯ್ಕೆಮಾಡಿ.

-ಈಗ ಬ್ಯಾಂಕ್ ಆಯ್ಕೆಮಾಡಿ ಮತ್ತು ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ಮತ್ತು ಐಎಫ್‌ಎಸ್‌ಸಿ (IFSC) ಭರ್ತಿ ಮಾಡಿ.

- ಮೇಲಿನ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಸೇವ್ ಕ್ಲಿಕ್ ಮಾಡಿ.

ಅಂತಿಮವಾಗಿ, ಈ ಮಾಹಿತಿಯನ್ನು ಉದ್ಯೋಗದಾತ ಅನುಮೋದಿಸಿದ ನಂತರ, ನಿಮ್ಮ ನವೀಕರಿಸಿದ ಬ್ಯಾಂಕ್ ವಿವರಗಳು ಅನುಮೋದಿತ ಕೆವೈಸಿ ವಿಭಾಗದಲ್ಲಿ ಗೋಚರಿಸುತ್ತದೆ.

ಇದನ್ನೂ ಓದಿ - 7th Pay Commission: ಏಪ್ರಿಲ್ 2021 ರಿಂದ ಬದಲಾಗಬಹುದು ನಿಮ್ಮ PF, Gratuity ಕೊಡುಗೆ

ಉದ್ಯೋಗದಾತ ಪ್ರತಿಕ್ರಿಯಿಸದಿದ್ದರೆ, ಈ ಕೆಲಸಗಳನ್ನು ಮಾಡಿ: ಉದ್ಯೋಗದಾತ ಬ್ಯಾಂಕ್ ವಿವರಗಳ ನವೀಕರಣ ವಿನಂತಿಯ ಕುರಿತು ನೀವು ಪ್ರತಿಕ್ರಿಯೆಯನ್ನು ಪಡೆಯದಿದ್ದರೆ, ಮೊದಲು ನಿಮ್ಮ ಮಾನವ ಸಂಪನ್ಮೂಲ ಇಲಾಖೆ (HR ಡಿಪಾರ್ಟ್ಮೆಂಟ್) ಅಥವಾ ಆಡಳಿತದೊಂದಿಗೆ ಮಾತನಾಡಿ. ಇದರ ನಂತರವೂ, ವಿವರಗಳನ್ನು ಅನುಮೋದಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ, ನಂತರ ನಿಮ್ಮ ಸಮಸ್ಯೆಯನ್ನು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ. ಹಾಗೆ ಮಾಡಿದ ನಂತರವೂ ಕಂಪನಿಯು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಇಪಿಎಫ್ ಕುಂದುಕೊರತೆಯ ಬಗ್ಗೆ ದೂರು ನೀಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News