Good News: ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ರೂ.200 ಇಳಿಕೆ, ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿಯೂ ಕೂಡ ಇಳಿಕೆ!

LPG Cylinder, Petrol-Diesel Prices: ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಈ ಕುರಿತು ಘೋಷಣೆ ಮಾಡಿದ್ದಾರೆ.   

Written by - Nitin Tabib | Last Updated : May 21, 2022, 08:09 PM IST
  • ಜನಸಾಮಾನ್ಯರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ
  • ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ರೂ.200 ಇಳಿಕೆ
  • ಪೆಟ್ರೋಲ್-ಡೀಸೆಲ್ ಬೆಳೆಯಲ್ಲಿಯೂ ಕೂಡ ಭಾರಿ ಇಳಿಕೆ
Good News: ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ರೂ.200 ಇಳಿಕೆ, ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿಯೂ ಕೂಡ ಇಳಿಕೆ! title=
LPG, Petrol-Diesel Prices

LPG Cylinder, Petrol-Diesel Prices: ನಿರಂತರವಾಗಿ ಹೆಚ್ಚಾಗುತ್ತಿರುವ ತೈಲೋತ್ಪನ್ನ ಬೆಲೆಗಳ ಬಳಿಕ ಇದೀಗ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಭಾರಿ ಕಡಿತವನ್ನು  ಘೋಷಿಸಲಾಗಿದೆ. ಮೂಲಗಳ ಪ್ರಕಾರ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ರೂ.200, ಡೀಸೆಲ್ ಬೆಲೆಯಲ್ಲಿ ರೂ.7 ಹಾಗೂ ಪೆಟ್ರೋಲ್ ಬೆಲೆಯಲ್ಲಿ ರೂ. 9.50 ಕಡಿತ ಘೋಷಿಸಲಾಗಿದೆ. 

ವಿತ್ತ ಸಚಿವರಿಂದ ಮಹತ್ವದ ಘೋಷಣೆ
ಶನಿವಾರ ರಾತ್ರಿಯಿಂದ ಪರಿಷ್ಕೃತ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ದರಗಳು ಜಾರಿಗೆ ಬರಲಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಘೋಷಿಸಿದ್ದಾರೆ. ದೀರ್ಘ ಕಾಲದಿಂದ ಜನಸಾಮಾನ್ಯರು ಇಂಧನ (ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್) ಬೆಲೆ ಏರಿಕೆಯ ಹಿನ್ನೆಲೆ ಸರ್ಕಾರವನ್ನು ದೂರುತ್ತಿದ್ದರು. ಆದರೆ, ಇದೀಗ ಸರ್ಕಾರ ಈ ವಿಷಯದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 

ಎಕ್ಸೈಜ್ ಸುಂಕದಲ್ಲಿ ಇಳಿಕೆ
ಈ ಕುರಿತು ಶುಕ್ರವಾರ ಜೈಪುರನಲ್ಲಿ ಜನಸಾಮಾನ್ಯರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಇದೀಗ ಜನಸಾಮಾನ್ಯರ ಹಿತಾಸಕ್ತಿಯ ಕುರಿತು ಯೋಚಿಸಬೇಕಾಗಿದೆ ಎಂದಿದ್ದರು. ಪ್ರಧಾನಿ ಅವರ ಈ ಹೇಳಿಕೆಯ ಬೆನ್ನಲ್ಲೇ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ  ನವೆಂಬರ್ ಬಳಿಕ ಇದೀಗ ಎರಡನೇ ಬಾರಿಗೆ ಎಕ್ಸೈಜ್ ಸುಂಕವನ್ನು ಕಡಿತಗೊಳಿಸುವ ಮೂಲಕ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ. 

ಸರ್ಕಾರದ ವತಿಯಿಂದ ರೂ.200 ಸಬ್ಸಿಡಿ 
ಅಡುಗೆ ಅನಿಲ ಸಿಲಿಂಡರ್ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಇದರಲ್ಲಿ ಜನಸಾಮಾನ್ಯರಿಗೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ. ಪ್ರತಿ ಸಿಲಿಂಡರ್ ಬೆಲೆ ರೂ. 200ರಷ್ಟು ಇಳಿಕೆಯಾಗಿದೆ. ಸರ್ಕಾರ ಈ 200 ರೂ. ಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲಿದೆ ಎನ್ನಲಾಗಿದೆ. ಆದರೆ ಉಜ್ವಲ ಯೋಜನೆಯ ಫಲಾನುಭವಿಗಳು ಮಾತ್ರ ಸರ್ಕಾರದ ಈ ನಿರ್ಧಾರದ ಲಾಭ ಪಡೆಯಲು ಸಾಧ್ಯವಾಗಲಿದೆ. ಅಲ್ಲದೆ, ಒಂದು ವರ್ಷದಲ್ಲಿ ಕೇವಲ 12 ಸಿಲಿಂಡರ್‌ಗಳಿಗೆ 200 ರೂ.ಗಳ ಸಬ್ಸಿಡಿ ಲಭ್ಯವಿರುತ್ತದೆ.

ಇದನ್ನೂ ಓದಿ-PM Kisan: ದೇಶಾದ್ಯಂತದ ರೈತರಿಗೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಹೇಳಿದ್ದೇನು?
ಬೆಲೆ ಇಳಿಕೆಯ ಕುರಿತು ಮಾತನಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 'ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ ಮತ್ತು ಡೀಸೆಲ್ ಮೇಲೆ 6 ರೂ ಕಡಿಮೆ ಮಾಡುತ್ತಿದ್ದೇವೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 9.5 ರೂ., ಡೀಸೆಲ್ ದರ 7 ರೂ.ಗೆ ಇಳಿಕೆಯಾಗಲಿದೆ.  ಈ ವರ್ಷ, ನಾವು 9 ಕೋಟಿಗೂ ಹೆಚ್ಚು ಜನರಿಗೆ (ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿ) ಪ್ರತಿ ಗ್ಯಾಸ್ ಸಿಲಿಂಡರ್‌ಗೆ (12 ಸಿಲಿಂಡರ್‌ಗಳವರೆಗೆ) 200 ರೂ ಸಬ್ಸಿಡಿ ನೀಡುತ್ತೇವೆ' ಎಂದಿದ್ದಾರೆ. 

ಇದನ್ನೂ ಓದಿ-Gold-Sliver Price: ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ: ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News