Budget 2023 :ಮನೆ ಖರೀದಿಸುವವರಿಗೆ ಈ ಬಾರಿ ಆಗುವುದು ಲಾಭ! ಬಜೆಟ್ ಮುನ್ನಾ ದಿನ ಹೊರ ಬಿತ್ತು ಮಾಹಿತಿ!

Union Budget 2023: ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ ಮಂಡಿಸಲಿರುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ನಿರೀಕ್ಷೆ ಕೂಡಾ ಹೆಚ್ಚಾಗಿದೆ. 

Written by - Ranjitha R K | Last Updated : Jan 31, 2023, 03:24 PM IST
  • ನಾಳೆ ಅಂದರೆ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆ
  • ಲೋಕಸಭೆ ಚುನಾವಣೆಗೂ ಮುನ್ನ ಮಂಡಿಸುತ್ತಿರುವ ಬಜೆಟ್
  • ವೇತನ ವರ್ಗಕ್ಕೆ ಲಾಭವಾಗುವ ನಿರೀಕ್ಷೆ
Budget 2023 :ಮನೆ ಖರೀದಿಸುವವರಿಗೆ ಈ ಬಾರಿ ಆಗುವುದು ಲಾಭ! ಬಜೆಟ್ ಮುನ್ನಾ ದಿನ ಹೊರ ಬಿತ್ತು ಮಾಹಿತಿ! title=

Union Budget 2023: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಅಂದರೆ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ ಮಂಡಿಸಲಿರುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ನಿರೀಕ್ಷೆ ಕೂಡಾ ಹೆಚ್ಚಾಗಿದೆ. ಇದು ಮೋದಿ ಸರ್ಕಾರದ ಎರಡನೇ ಅವಧಿಯ ಪೂರ್ಣ ಬಜೆಟ್ ಆಗಿದೆ. 

ವೇತನ ವರ್ಗಕ್ಕೆ ಲಾಭವಾಗುವ ನಿರೀಕ್ಷೆ : 
ಎಲ್ಲಾ ಕ್ಷೇತ್ರಗಳು ಭಿನ್ನವಾಗಿದ್ದು, ಹಣಕಾಸು ಸಚಿವರು ಎಲ್ಲಾ ರಂಗಗಳಲ್ಲಿ ನಿರ್ಣಾಯಕವಾಗಿ ಮುಂದುವರಿಯಲು ತಿಳುವಳಿಕೆಯೊಂದಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ'  ಎನ್ನುತ್ತಾರೆ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಮದನ್ ಸಬನ್ ವಿಸ್. ಸಾರ್ವತ್ರಿಕ ಚುನಾವಣೆಯ ಹಿಂದಿನ ಪೂರ್ಣ ಬಜೆಟ್‌ ಇದಾಗಿರುವುದರಿಂದ ನಿರ್ಮಲಾ ಸೀತಾರಾಮನ್ ವೇತನ ವರ್ಗ ಮತ್ತು ಸಣ್ಣ ವ್ಯಾಪಾರಿಗಳಿಗೆ ಆದಾಯ ತೆರಿಗೆ ವಿನಾಯಿತಿ ಘೋಷಿಸಬಹುದು.  ಜನಸಾಮಾನ್ಯರು ವಸತಿ ಪ್ರಾಪರ್ಟಿ ಖರೀದಿಸಲು ಪ್ರೇರೇಪಿಸಲು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗೃಹ ಸಾಲದಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯೂ ಇದೆ.

ಇದನ್ನೂ ಓದಿ :  Budget 2023: ವಾಹನ ಖರೀದಿಸಬೇಕೆ? ಎರಡೇ ಎರಡು ದಿನ ವೇಟ್ ಮಾಡಿ, ಸಿಗಲಿದೆ ಈ ಸಂತಸದ ಸುದ್ದಿ!

ಆಂಡ್ರೊಮಿಡಾ ಲೋನ್ಸ್  ಮತ್ತು ಅಪ್ನಾಪೈಸಾ ಸಂಸ್ಥೆಯ ಕಾರ್ಯಾಧ್ಯಕ್ಷ ವಿ.ಸ್ವಾಮಿನಾಥನ್ ಮಾತನಾಡಿ, 'ಮುಂಬರುವ ಬಜೆಟ್ ನಲ್ಲಿ ಸರ್ಕಾರ ಸಾಲಗಾರರಿಗೆ ಪರಿಹಾರ ನೀಡುವ ನಿರ್ಧಾರಗಳನ್ನು ಕೈಗೊಳ್ಳಬಹುದು. ಗೃಹ ಸಾಲದ ಬಡ್ಡಿ ಮೇಲಿನ ಕಡಿತದ ಮಿತಿಯನ್ನು ಎರಡು ಲಕ್ಷದಿಂದ ಮೂರು ಲಕ್ಷಕ್ಕೆ ಹೆಚ್ಚಿಸುವ ದೀರ್ಘಾವಧಿಯ ಬೇಡಿಕೆಯನ್ನು ಸರ್ಕಾರ ಪರಿಗಣಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಇನ್ನು ವೈಯಕ್ತಿಕ ತೆರಿಗೆ ದರಗಳನ್ನು ಕಡಿತಗೊಳಿಸುವ ತುರ್ತು ಅಗತ್ಯವಿದೆ ಎಂದು ಟ್ಯಾಕ್ಸ್ ಕನೆಕ್ಟ್ ಅಡ್ವೈಸರಿಯ ಪಾಲುದಾರ ವಿವೇಕ್ ಜಲನ್, ತಿಳಿಸಿದ್ದಾರೆ. 

ಇದನ್ನೂ ಓದಿ :  Budget 2023: ಬಜೆಟ್ ಮಂಡನೆಗೂ ಮುನ್ನ ಪಿಪಿಎಫ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News